Eyesight: ಈ ತಪ್ಪುಗಳನ್ನು ಮಾಡುವುದರಿಂದ ನೀವು ದೃಷ್ಟಿ ಕಳೆದುಕೊಳ್ಳಬಹುದು! ಇವುಗಳಿಂದ ಎಚ್ಚರವಾಗಿರಿ!
ಪ್ರತಿದಿನ ನಾವು ಕಣ್ಣಿಗೆ ಸಂಬಂಧಿಸಿದಂತೆ ಕೆಲ ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳು ದೇಹದ ಮೇಲೆ ಕ್ರಮೇಣ ಪರಿಣಾಮ ಬೀರುತ್ತವೆ. ಮುಂದೆ ನಾವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ದೃಷ್ಟಿ ಕಳೆದುಕೊಳ್ಳಲು ಈ ತಪ್ಪುಗಳು ಕಾರಣವಾಗಬಹುದು.
Updated on: Oct 01, 2022 | 7:00 AM

ಪ್ರತಿದಿನ ನಾವು ಕಣ್ಣಿಗೆ ಸಂಬಂಧಿಸಿದಂತೆ ಕೆಲ ತಪ್ಪುಗಳನ್ನು ಮಾಡುತ್ತೇವೆ. ಈ ತಪ್ಪುಗಳು ದೇಹದ ಮೇಲೆ ಕ್ರಮೇಣ ಪರಿಣಾಮ ಬೀರುತ್ತವೆ. ಮುಂದೆ ನಾವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ. ದೃಷ್ಟಿ ಕಳೆದುಕೊಳ್ಳಲು ಈ ತಪ್ಪುಗಳು ಕಾರಣವಾಗಬಹುದು.

ಕಣ್ಣಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ, ವೈದ್ಯರನ್ನು ಭೇಟಿಯಾಗುವುದನ್ನು ವಿಳಂಬ ಮಾಡಬೇಡಿ. ಕಣ್ಣುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ತುರಿಕೆ, ನೀರು ಅಥವಾ ಇತರ ಸಮಸ್ಯೆಗಳಿಂದ ಬಳಲುವ ಮೊದಲು ಚಿಕಿತ್ಸೆ ಪಡೆಯಿರಿ. ಅವುಗಳನ್ನು ನಿರ್ಲಕ್ಷಿಸುವುದರಿಂದ ದೃಷ್ಟಿ ಕಳೆದುಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್‌ಗಳ ಬಳಕೆ ಪ್ರವೃತ್ತಿಯು ಈ ಹಿಂದೆಗಿಂತ ಹೆಚ್ಚಾಗಿದೆ. ಹಗಲು ಮಾತ್ರವಲ್ಲದೆ ರಾತ್ರಿಯೂ ಸ್ಮಾರ್ಟ್‌ಫೋನ್ ನೋಡುತ್ತ ಗಂಟೆಗಟ್ಟಲೆ ಕಳೆಯುವುದು ಇಂದಿನ ದಿನಗಳಲ್ಲಿ ಫ್ಯಾಷನ್ ಎಂದು ಪರಿಗಣಿಸಲಾಗಿದೆ. ಕಣ್ಣುಗಳ ಮೇಲೆ ಅಂತಹ ಹೊರೆಯು ಅವುಗಳನ್ನು ದುರ್ಬಲಗೊಳಿಸುತ್ತದೆ.

ಕಣ್ಣುಗಳಲ್ಲಿ ಸಮಸ್ಯೆ ಇದ್ದಾಗ ಅವುಗಳನ್ನು ಉಜ್ಜುವುದು ಸಾಮಾನ್ಯ ಚಟುವಟಿಕೆಯಾಗಿದೆ, ಆದರೆ ಅದು ನಿಮಗೆ ಪದೇ ಪದೇ ಸಮಸ್ಯೆಯಾಗಿ ಕಾಡುತ್ತಿದ್ದರೆ ಚಿಕಿತ್ಸೆ ಪಡೆಯುವುದು ಉತ್ತಮ. ತುರಿಕೆಯಿಂದಾಗಿ ಕಣ್ಣುಗಳನ್ನು ಉಜ್ಜುವುದರಿಂದ ಅವು ದುರ್ಬಲಗೊಳ್ಳುತ್ತವೆ ಮತ್ತು ನಿರ್ಲಕ್ಷಿಸುವುದರಿಂದ ದೊಡ್ಡ ಹಾನಿ ಉಂಟಾಗುತ್ತದೆ.

ತಿಂಗಳಾನುಗಟ್ಟಲೆ ಜನರು ತಪಾಸಣೆ ಮಾಡಿಸಿಕೊಳ್ಳದಿರುವುದು ಕೂಡ ಕಂಡು ಬಂದಿದೆ. ಉಳಿದ ಅಂಗಗಳಿಗೆ ಎಷ್ಟು ಕಾಳಜಿ ವಹಿಸುತ್ತಾರೋ ಅಷ್ಟೇ ಕಾಳಜಿಯನ್ನು ಕಣ್ಣುಗಳಿಗೂ ವಹಿಸಬೇಕು. ಹೆಚ್ಚಿನ ಜನರು ಪ್ರತಿದಿನ ತಪಾಸಣೆ ಮಾಡುವುದನ್ನು ತಪ್ಪಿಸುತ್ತಾರೆ ಅಥವಾ ಅದನ್ನು ನಿರ್ಲಕ್ಷಿಸುತ್ತಾರೆ.
























