AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KRS ಬೃಂದಾವನ ಮೇಲ್ದರ್ಜೆಗೇರಿಸಲು ಕ್ಯಾಬಿನೆಟ್ ಸಮ್ಮತಿ; ಏನೆಲ್ಲಾ ವೈಶಿಷ್ಟ್ಯ ಹೊಂದಿರುತ್ತೆ ಗೊತ್ತಾ?

ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್​ಎಸ್​ ಬೃಂದಾವನ ಉದ್ಯಾನವನವನ್ನು ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಮ್ಮತಿ ನೀಡಿದ್ದು, ಬರೋಬ್ಬರಿ 2,633 ಕೋಟಿ ರೂ. ವೆಚ್ಚದಲ್ಲಿ PPP ಮಾದರಿಯಲ್ಲಿ ಅಭಿವೃದ್ಧಿಗೆ ಒಪ್ಪಿಗೆ ಕೊಟ್ಟಿದೆ. ಈ ಉದ್ಯಾನವನದ ಕೆಲಸ 1927 ರಲ್ಲಿ ಪ್ರಾರಂಭವಾಗಿ 1932 ರಲ್ಲಿ ಪೂರ್ಣಗೊಂಡಿತು. ವರ್ಷಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ.

ಕಿರಣ್ ಹನುಮಂತ್​ ಮಾದಾರ್
|

Updated on: Jul 26, 2024 | 5:28 PM

Share
 ಕೆಆರ್​ಎಸ್​ ಬೃಂದಾವನ ಉದ್ಯಾನವನವನ್ನು ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಮ್ಮತಿ ನೀಡಿದ್ದು, ಬರೋಬ್ಬರಿ 2,633 ಕೋಟಿ ರೂ. ವೆಚ್ಚದಲ್ಲಿ PPP ಮಾದರಿಯಲ್ಲಿ ಅಭಿವೃದ್ಧಿಗೆ ಒಪ್ಪಿಗೆ ಕೊಟ್ಟಿದೆ.

1 / 6
 ಮಂಡ್ಯ ಜಿಲ್ಲೆಯಲ್ಲಿರುವ ಈ ಉದ್ಯಾನವನ, ಕಾವೇರಿ ನದಿಯುದ್ದಕ್ಕೂ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಅಣೆಕಟ್ಟಿನ ಪಕ್ಕದಲ್ಲಿದೆ. ಈ ಉದ್ಯಾನವನದ ಕೆಲಸ 1927 ರಲ್ಲಿ ಪ್ರಾರಂಭವಾಗಿ 1932 ರಲ್ಲಿ ಪೂರ್ಣಗೊಂಡಿತು. ವರ್ಷಕ್ಕೆ ಸುಮಾರು 2 ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ.

2 / 6
 ಫ್ಯಾಂಟಸಿ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು, ವಾಟರ್ ಸ್ಟೋಟ್ಟ್, ಹೆಲಿಪ್ಯಾಡ್, ಫೈವ್ ಸ್ಟಾರ್ ಹೊಟೇಲ್, ಫ್ಲಾಜಾ, ಗ್ರ್ಯಾಂಡ್ ವೆಲ್ ಕಮ್ ಆರ್ಚ್, ಮಕ್ಕಳಿಗಾಗಿ ಸ್ಪೆಷಲ್ ಚಿಲ್ಡ್ರನ್ ಪಾರ್ಕ್ ಸೇರಿ ಹಲವು ವೈಶಿಷ್ಟ್ಯ ಹೊಂದಿರುವಂತೆ KRS ಬೃಂದಾವನ ಅಭಿವೃದ್ಧಿಗೆ ಪ್ಲ್ಯಾನ್​ ಮಾಡಲಾಗಿದೆ.

3 / 6
ಇನ್ನು ಇದರಲ್ಲಿ ಕೆಆರ್​ಎಸ್​ ಸರ್ಕಲ್ ವಿಸ್ತರಣೆ, ಟೋಲ್ ಗೇಟ್, ವಾಹನಗಳ ಪಾರ್ಕಿಂಗ್, ವಿಸ್ತಾರವಾದ ಪಾದಚಾರಿ ಮಾರ್ಗ, ಬೋಟಿಂಗ್ ಲೇಕ್, ಆ್ಯಂಪಿಥಿಯೇಟರ್, ಕಾವೇರಿ ಪ್ರತಿಮೆ, ವಿಶಾಲವಾದ ಸ್ವಾಗತ ಕಮಾನು, ಮೀನಾ ಬಜಾರ್, ಜಂಗಲ್ ಟ್ರ್ಯಾಕ್, ಡೋಲ್ ಮ್ಯೂಸಿಯಂ, ಪೆಂಗ್ವಿನ್ ಪಾರ್ಕ್, ಇಂಡೋರ್ ಅಮ್ಯೂಸ್ ಮೆಂಟ್ ಪಾರ್ಕ್, ಗಾಜಿನ ಮೇಲ್ಸೇತುವೆ ಇರಲಿದೆ.

4 / 6
ಜೊತೆಗೆ ವ್ಯಾಕ್ಸ್ ಮ್ಯೂಸಿಯಂ, ಅರೋಮ ಗಾರ್ಡನ್ ಮತ್ತು ಮಕ್ಕಳಿಗಾಗಿ ವಿಶೇಷ ಪಾರ್ಕ್, ಪ್ಯಾರಾ ಸೇಲಿಂಗ್, ವಾಟರ್ ಪ್ಲೇನ್, ಬೊಟಾನಿಕಲ್ ಗಾರ್ಡನ್, ಲೇಸರ್ ಶೋ ಪ್ರಾಜೆಕ್ಟ್ ವಾಲ್, ಹೆಲಿಪ್ಯಾಡ್‌, ಜೈ ಓಹೋ ಫೌಂಟನ್​ ಸೇರಿದಂತೆ ಹಲವು ವೈಶಿಷ್ಟ್ಯ ಹೊಂದಿರುವಂತೆ ನಿರ್ಮಿಸಲಾಗುವುದು.

5 / 6
ಈ ಉದ್ಯಾನವು ಶ್ರೀರಂಗಪಟ್ಟಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ನಗರದಿಂದ ಕೇವಲ 20 ಕಿಮೀ ದೂರದಲ್ಲಿರುವ ಬೃಂದಾವನ ಹೂದೋಟವನ್ನು ಹೋಗಿ ನೋಡಲೇಬೇಕಾದ ಸ್ಥಳ. ಹಿಂದೆ ಕೃಷ್ಣರಾಜೇಂದ್ರ ಟೆರೇಸ್ ಗಾರ್ಡನ್ ಎಂದು ಕರೆಯಲ್ಪಡುತ್ತಿದ್ದ ಬೃಂದಾವನವೂ, ಕೃಷ್ಣರಾಜಸಾಗರ ಆಣೆಕಟ್ಟಿನ ಕೆಳಭಾಗದಲ್ಲೇ ಇದೆ.

6 / 6