- Kannada News Photo gallery Cars and SUVs Discontinued in 2022, Santro, S cross Duster, dutsun and More
Discontinued Cars: ಭಾರತದಲ್ಲಿ ಇನ್ಮುಂದೆ ಈ ಕಾರುಗಳು ಖರೀದಿಗೆ ಸಿಗೋದಿಲ್ಲ!
ಹೊಸ ಕಾರುಗಳ ಮಾರಾಟವು ಕಳೆದ ಒಂದು ದಶಕದಲ್ಲಿ ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹೊಸ ಕಾರುಗಳ ಮಾರಾಟದಲ್ಲಿನ ನಿರಂತರ ಬದಲಾವಣೆಯ ಪರಿಣಾಮ ಹಳೆ ತಲೆಮಾರಿನ ಕಾರು ಮಾದರಿಗಳ ಬೇಡಿಕೆ ಕುಸಿಯುತ್ತಿದ್ದು, ಹೊಸ ತಲೆಮಾರಿನ ಕಾರುಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿ ಹೊಸ ಕಾರುಗಳ ಜನಪ್ರಿಯತೆಯಿಂದ ಬೇಡಿಕೆ ಕುಸಿತ ಕಂಡಿರುವ ಕೆಲವು ಕಾರುಗಳು ಮಾರುಕಟ್ಟೆಯಿಂದ ನಿರ್ಗಮಿಸಿವೆ. ವಿವಿಧ ಕಾರಣಗಳಿಂದ ಪ್ರಮುಖ ಕಾರು ಕಂಪನಿಗಳ ಹಲವು ಕಾರು ಮಾದರಿಗಳು ಸ್ಥಗಿತಗೊಳಿಸಿದ್ದು, ಈ ಕೆಳಗಿನ ಕಾರುಗಳು ಕೂಡಾ ಮಾರುಕಟ್ಟೆಯಿಂದ ನಿರ್ಗಮಿಸಿವೆ.
Updated on: Jan 07, 2023 | 7:05 PM

ಸ್ಥಗಿತಗೊಂಡಿರುವ ಕಾರುಗಳ ಪಟ್ಟಿಯಲ್ಲಿ ಹ್ಯುಂಡೈ ಕಂಪನಿಯ ಸ್ಯಾಂಟ್ರೋ ಕೂಡಾ ಒಂದಾಗಿದೆ. ಸಣ್ಣ ಕಾರುಗಳ ವಿಭಾಗದಲ್ಲಿ ಈ ಹಿಂದೆ ಭಾರೀ ಜನಪ್ರಿಯವಾಗಿದ್ದ ಈ ಕಾರು ಇತ್ತೀಚೆಗೆ ಬಂದ ಹೊಸ ಕಾರುಗಳ ಅಬ್ಬರದಿಂದ ಸಾಕಷ್ಟು ಹಿನ್ನಡೆ ಅನುಭವಿಸಿತ್ತು.

ಟೊಯೊಟಾ ಅರ್ಬನ್ ಕ್ರೂಸರ್ ಕೂಡಾ ಸ್ಥಗಿತಗೊಳ್ಳಲಿರುವ ಕಾರುಗಳ ಪಟ್ಟಿಯಲ್ಲಿದೆ. ಇದು ಆರಂಭದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದಾದರೂ ಇತ್ತೀಚಿನ ಮಾರಾಟ ವರದಿಯಲ್ಲಿ ಸಾಕಷ್ಟು ಇಳಿಕೆ ಕಂಡಿದೆ. ಹೀಗಾಗಿ ಟೊಯೊಟಾ ಕಂಪನಿಯು ಅರ್ಬನ್ ಕ್ರೂಸರ್ ಸ್ಥಗಿತಗೊಳಿಸಿ ಹೊಸ ಕಾರುಗಳತ್ತ ಗಮನಹರಿಸಲು ನಿರ್ಧರಿಸಿದೆ.

ಪ್ರೀಮಿಯಂ ಫೀಚರ್ಸ್ ಮೂಲಕ ಗಮನಸೆಳೆದಿದ್ದ ಮಾರುತಿ ಸುಜುಕಿ ಎಸ್ ಕ್ರಾಸ್ ಮಾದರಿಯನ್ನು ಕೂಡಾ ಇದೀಗ ಪೂರ್ತಿಯಾಗಿ ಮಾರಾಟ ಬಂದ್ ಮಾಡಲಾಗಿದೆ. ಎಸ್-ಕ್ರಾಸ್ ಬದಲಾಗಿ ಹೊಸ ತಲೆಮಾರಿನ ಕಾರುಗಳತ್ತ ಮಾರುತಿ ಸುಜುಕಿ ಗಮನಹರಿಸಿದ್ದು, ಎಸ್ ಯುವಿ ವಿಭಾಗದಲ್ಲಿ ಗ್ರ್ಯಾಂಡ್ ವಿಟಾರಾ ಇದರ ಸ್ಥಾನಕ್ಕಾಗಿ ಹೊಸದಾಗಿ ಲಗ್ಗೆಯಿಟ್ಟಿದೆ.

ಭಾರತದಲ್ಲಿ ರೆನಾಲ್ಟ್ ಕಂಪನಿಗೆ ಹೊಸ ಆಯಾಮ ನೀಡಿದ್ದ ಡಸ್ಟರ್ ಎಸ್ ಯುವಿ ಮಾದರಿಯನ್ನು ಕೂಡಾ ಮಾರಾಟದಿಂದ ಸ್ಥಗಿತಗೊಳಿಸಲಾಗಿದೆ. ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪೂರೈಸುವುದರಿಂದ ಹೆಚ್ಚಳವಾಗುವ ಬೆಲೆ ಪರಿಣಾಮ ಕಾರು ಮಾರಾಟವನ್ನೇ ಸ್ಥಗಿತಗೊಳಿಸಲಾಗಿದ್ದು, ಹೊಸ ತಲೆಮಾರಿನ ಕಾರುಗಳ ಮೇಲೆ ರೆನಾಲ್ಟ್ ಕಂಪನಿಯು ಗಮನಹರಿಸುತ್ತಿದೆ.

ಐಷಾರಾಮಿ ಕಾರು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿದ್ದ ಮಹೀಂದ್ರಾ ಅಲ್ಟುರಾಸ್ ಜಿ4 ಕೂಡಾ ಮಾರಾಟದಿಂದ ಸ್ಥಗಿತಗೊಳಿಸಲಾಗಿದೆ. ಫುಲ್ ಸೈಜ್ ಎಸ್ ಯುವಿ ವಿಭಾಗಕ್ಕೆ ಲಗ್ಗೆಯಿಟ್ಟಿದ್ದ ಅಲ್ಟುರಾಸ್ ಜಿ4 ಕಾರು ಇತ್ತೀಚೆಗೆ ಹೊಸ ಕಾರುಗಳ ಅಬ್ಬರದಿಂದಾಗಿ ಮಾರಾಟದಲ್ಲಿ ಭಾರೀ ಹಿನ್ನಡೆ ಕಂಡಿತ್ತು.

ಸಣ್ಣ ಕಾರುಗಳ ವಿಭಾಗದಲ್ಲಿ ಈ ಹಿಂದೆ ಉತ್ತಮ ಮಾರಾಟ ದಾಖಲೆ ಹೊಂದಿದ್ದ ದಟ್ಸನ್ ಪ್ರಮುಖ ಕಾರುಗಳು ಇತ್ತೀಚೆಗೆ ಭಾರೀ ಹಿನ್ನಡೆ ಅನುಭವಿಸಿದ್ದವು. ಹೀಗಾಗಿ ದಟ್ಸನ್ ಮಾತೃಸಂಸ್ಥೆಯಾದ ನಿಸ್ಸಾನ್ ಕಂಪನಿಯು ಭಾರತದಲ್ಲಿ ದಟ್ಸನ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿದ್ದು, ಹೊಸ ಕಾರುಗಳತ್ತ ಗಮನಹರಿಸಿದೆ.




