- Kannada News Photo gallery Cauliflower Benefits: Do you discard cauliflower leaves? So read this once
Cauliflower Leaves Benefits: ಹೂಕೋಸು ಎಲೆಗಳನ್ನು ನೀವು ಬಿಸಾಡುತ್ತೀರಾ? ಹಾಗಾದ್ರೆ ಇದನ್ನೊಮ್ಮೆ ಓದಿ
ಹೂಕೋಸು ಚಳಿಗಾಲದಲ್ಲಿ ಹೇರವಾಗಿ ಬೆಳೆಯಲಾಗುವ ತರಕಾರಿಯಾಗಿದೆ. ಹೂಕೋಸಿನಲ್ಲಿ ಎಷ್ಟು ಪೋಷಕಾಂಶಗಳಿವೆಯೋ ಅಷ್ಟೇ ಪೋಷಕಾಂಶ ಅದರ ಎಲೆಗಳಲ್ಲಿಯೂ ಇದೆ.
Updated on:Feb 09, 2023 | 10:34 PM

ಹೂಕೋಸು ಎಲೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಎರಡು ಪಟ್ಟು ಹೆಚ್ಚು ಪ್ರೋಟೀನ್, ಫೈಬರ್, ಫಾಸ್ಫರಸ್ ಮತ್ತು ಹೂಕ್ಕಿಂತ ಮೂರು ಪಟ್ಟು ಹೆಚ್ಚು ಖನಿಜಗಳು, ಜೊತೆಗೆ ಸಾಕಷ್ಟು ಕಬ್ಬಿಣ ಮತ್ತು ಕ್ಯಾಲ್ಸಿಯಂ ಇದೆ.

ಇವು ಮೂಳೆಗಳನ್ನು ಆರೋಗ್ಯವಾಗಿಡುವುದಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಇದಲ್ಲದೆ, ದೇಹದ ಜೀರ್ಣಕಾರಿ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅವು ಪ್ರಮುಖ ಪಾತ್ರವಹಿಸುತ್ತವೆ.

ಇಂಟರ್ನ್ಯಾಷನಲ್ ಜರ್ನಲ್ ಆಫ್ ಸೈಂಟಿಫಿಕ್ ಅಂಡ್ ಇಂಜಿನಿಯರಿಂಗ್ ರಿಸರ್ಚ್ ಪ್ರಕಾರ, ಹೂಕೋಸು ಎಲೆಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಎಂದು ಸಾಭೀತಾಗಿದೆ.

ಹೂಕೋಸು ಎಲೆಗಳು ಪ್ರೋಟೀನ್ ಮತ್ತು ಖನಿಜಗಳ ಉತ್ತಮ ಮೂಲವಾಗಿದ್ದು, ಇದು ಮಕ್ಕಳ ಬೆಳವಣಿಗೆ ಸಹಕಾರಿಯಾಗಿದೆ.

ಮೂಳೆ ನೋವು, ಮೊಣಕಾಲು ನೋವು, ಆಸ್ಟಿಯೊಪೊರೋಸಿಸ್‌ನಿಂದ ಬಳಲುತ್ತಿರುವ ರೋಗಿಗಳಿಗೆ ಹೂಕೋಸು ಎಲೆಗಳ ಸೇವನೆಯು ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು.
Published On - 10:33 pm, Thu, 9 February 23




