
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾ ಮುಗಿಯುವುದೇ ಚೈತ್ರಾ ಆಚಾರ್ ಅವರ ಪಾತ್ರದ ಮೂಲಕ. ಸಿನಿಮಾದ ಕಟ್ಟ ಕಡೆಯ ಶಾಟ್ ಅವರದ್ದೇ.

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿನಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಸಖತ್ ಗಮನ ಸೆಳೆದಿದ್ದಾರೆ. ವೇಶ್ಯೆಯ ಪಾತ್ರದಲ್ಲಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾದ ಕೊನೆಯ ಶಾಟ್ನ ಚಿತ್ರೀಕರಣದ ಚಿತ್ರಗಳನ್ನು ಚೈತ್ರಾ ಆಚಾರ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾದ ಕೊನೆಯ ದೃಶ್ಯದ ಚಿತ್ರೀಕರಣವನ್ನು ನಿರ್ದೇಶಕ ಹೇಮಂತ್ ರಾವ್ ಹೇಗೆ ಮಾಡಿದ್ದರೆಂಬುದು ಚಿತ್ರಗಳಲ್ಲಿದೆ.

ಕೊನೆಯ ದೃಶ್ಯದಲ್ಲಿ ನಾಯಕ ಮನು (ರಕ್ಷಿತ್ ಶೆಟ್ಟಿ) ಸಮುದ್ರದ ಒಳಗೆ ಹೋಗಿ ಮರೆಯಾಗುತ್ತಾರೆ. ಆದರೆ ಅದೇ ಸಮುದ್ರದ ದಂಡೆ ಮೇಲೆ ಕುಳಿತ ಚೈತ್ರಾ ಹೊಸ ಹುಟ್ಟು ಪಡೆಯುತ್ತಾಳೆ.

ಸಮುದ್ರದ ದಂಡೆಯ ಮೇಲೆ ಪುಸ್ತಕ ಚೀಲ ಇಟ್ಟು ಮುಳುಗುವ ಸೂರ್ಯನ ಚೈತ್ರಾ ನೋಡುತ್ತಿರುವ ದೃಶ್ಯವನ್ನು ಹೇಮಂತ್ ಹೇಗೆ ಹಲವು ಕೋನಗಳಲ್ಲಿ ಸೆರೆಹಿಡಿದಿದ್ದಾರೆಂಬುದು ಚಿತ್ರಗಳಲ್ಲಿದೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ರಮೇಶ್ ಇಂದಿಯಾ, ಅವಿನಾಶ್ ಇನ್ನೂ ಹಲವರು ನಟಿಸಿದ್ದಾರೆ.