AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಚಾಣಕ್ಯರು ಹೇಳ್ತಾರೆ ಹೆಂಡತಿಯಾದವಳಿಗೆ ಈ ಗುಣಗಳು ಇರಲೇಬೇಕೆಂದು

ಬದುಕು, ಜೀವನದ ಕುರಿತು ಹಲವು ವಿಚಾರಗಳನ್ನು ಅರಿತವರಾದ ಚಾಣಕ್ಯರು ನಮ್ಮ ಜೀವನಕ್ಕೆ ಬೇಕಾದ ಹಲವಾರು ಟಿಪ್ಸ್‌ಗಳನ್ನು ನೀಡಿದ್ದಾರೆ. ಯಶಸ್ಸು, ಸ್ನೇಹ, ದಾಂಪತ್ಯ ಜೀವನ ಹೀಗೆ ಪ್ರತಿಯೊಂದು ವಿಷಯದ ಬಗ್ಗೆಯೂ ತಮ್ಮ ನೀತಿಯಲ್ಲಿ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಹೆಂಡತಿ ಹೇಗಿದ್ದರೆ ದಾಂಪತ್ಯ ಜೀವನ ಸುಂದರವಾಗಿರುತ್ತದೆ ಎಂಬುದನ್ನು ಕೂಡ ಅವರು ಹೇಳಿದ್ದಾರೆ. ಕೆಲವೊಂದು ಬಾರಿ ಗಂಡ ಹೆಂಡತಿಯ ಮಧ್ಯೆ ಜಗಳಗಳು ನಡೆದು ಸಂಬಂಧವೇ ಮುರಿದು ಬೀಳುವ ಹಂತಕ್ಕೆ ತಲುಪುತ್ತದೆ. ಹೀಗಿರುವಾಗ ಹೆಂಡತಿಯಾದವಳು ಈ ಗುಣಗಳನ್ನು ಅಳವಡಿಸಿಕೊಂಡರೆ ದಾಂಪತ್ಯ ಜೀವನ ಎನ್ನುವಂತಹದ್ದು ಸುಖಮಯವಾಗಿರುತ್ತದೆ ಎಂದು ಚಾಣಕ್ಯ ಹೇಳಿದ್ದಾರೆ.

ಮಾಲಾಶ್ರೀ ಅಂಚನ್​
|

Updated on: May 24, 2025 | 8:20 PM

ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಅಂತ ಹೇಳ್ತಾರೆ. ಆದ್ರೂ ಕೂಡ ಕೆಲವೊಂದು ಬಾರಿ ಈ ಜಗಳಗಳು ಅತಿರೇಕಕ್ಕೆ ತಿರುಗಿ ಸಂಸಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ. ಹೀಗೆ ವೈವಾಹಿಕ ಜೀವನದಲ್ಲಿ ತಿಳಿದೋ, ತಿಳಿಯದೆಯೋ ಕೆಲವೊಂದು ತಪ್ಪುಗಳಾಗುತ್ತವೆ. ಹಾಗಿರುವಾಗ ಹೆಂಡತಿಯಾದವಳಲ್ಲಿ ಈ ಕೆಲವೊಂದು ಗುಣಗಳಿದ್ದರೆ ದಾಂಪತ್ಯ ಜೀವನ ಎನ್ನುವಂತಹದ್ದು ಸುಖಮಯವಾಗಿರುತ್ತದೆ ಎಂದು ಚಾಣಕ್ಯರು ಹೇಳ್ತಾರೆ.

1 / 6
ಪ್ರೋತ್ಸಾಹ: ಹೆಂಡತಿಯಾದವಳಿಗೆ ತನ್ನ ಗಂಡನನ್ನು ಪ್ರೋತ್ಸಾಹಿಸುವ ಗುಣವಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಗಂಡನ ಸೋಲುಗಳಲ್ಲಿ ಜೊತೆಯಾಗಿ ನಿಲ್ಲುವ, ಗೆಲುವನ್ನು ಸಂಭ್ರಮಿಸುವ ಗುಣವಿರಬೇಕು. ಪ್ರತಿಯೊಂದು ಹಂತದಲ್ಲೂ ಪ್ರೋತ್ಸಾಹ ನೀಡುವ ಹೆಂಡತಿಯಿದ್ದರೆ ಗಂಡನಾದವನು ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತಾನೆ ಎಂದು ಹೇಳುತ್ತಾರೆ ಚಾಣಕ್ಯ.

2 / 6
ತಾಳ್ಮೆ: ಹೆಂಡತಿಯಾದವಳಿಗೆ ತಾಳ್ಮೆ ಇರಬೇಕು. ತಾಳ್ಮೆಯಿಂದ ಇರುವ ಹೆಂಡಿತಿರು ಸುಖಾ ಸುಮ್ಮನೆ ಗಂಡನೊಂದಿಗೆ ಜಗಳವಾಡುವುದಿಲ್ಲ. ಪ್ರತಿಯೊಂದು ವಿಚಾರವನ್ನು ತಾಳ್ಮೆಯಿಂದ ಅರ್ಥೈಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಹೆಂಡತಿಗೆ ಈ ಗುಣವಿದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.

3 / 6
ಬುದ್ಧಿವಂತಿಕೆ: ಹೆಂಡತಿಯಾದವಳು ಬುದ್ಧಿವಂತಳಾಗಿರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಇದರರ್ಥ ಆಕೆ ಔಪಚಾರಿಕ ಶಿಕ್ಷಣವನ್ನು ಪಡೆದಿರಬೇಕೆಂದಲ್ಲ. ಅಂದರೆ ಆಕೆ ಜೀವನದ ಸಂಕೀರ್ಣತೆಗಳನ್ನು ನಿಭಾಯಿಸುವ, ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಬೇಕು. ಇಂತಹ ಬುದ್ಧಿವಂತ ಹೆಂಡತಿಯಿದ್ದರೆ ದಾಂಪತ್ಯ ಜೀವನ ಸುಂದರವಾಗಿರುತ್ತದೆ.

4 / 6
ಹಣ ಉಳಿತಾಯ: ಹೆಂಡತಿಯಾದವಳಿಗೆ ಅನಗತ್ಯ ಖರ್ಚು ಮಾಡದೆ ಹಣವನ್ನು ಉಳಿಸುವ ಗುಣವಿರಬೇಕು ಎಂದು ಚಾಣಕ್ಯ ಹೇಳಿದ್ದಾರೆ. ಹಣವನ್ನು ಉಳಿತಾಯ ಮಾಡುವ ಬುದ್ಧಿವಂತ ಮಹಿಳೆ ಕಷ್ಟದ ಸಮಯದಲ್ಲಿ ತನ್ನ ಗಂಡ,  ಕುಟುಂಬವನ್ನು ರಕ್ಷಣೆ ಮಾಡುತ್ತಾಳೆ, ತನ್ನ ಸಂಸಾರವನ್ನು ಕಷ್ಟದ ಕೂಪದಿಂದ ರಕ್ಷಿಸುತ್ತಾಳೆ.

5 / 6
ದಯೆ, ಸಹಾನುಭೂತಿ: ಹೆಂಡತಿಯಾದವಳಿಗೆ ದಯೆ ಮತ್ತು ಸಹಾನುಭೂತಿ ಗುಣ ಇರಬೇಕು ಎಂದು ಚಾಣಕ್ಯ ಹೇಳುತ್ತಾರೆ. ಒಬ್ಬ ಆದರ್ಶ ಹೆಂಡತಿ ತನ್ನ ಗಂಡನ ಅಭಿಪ್ರಾಯಗಳನ್ನು ಗೌರವಿಸುತ್ತಾಳೆ. ಗಂಡನಿಗೆ ಚುಚ್ಚು ಮಾತುಗಳನ್ನಾಡದೆ ಗಂಡನ ಪ್ರತಿಯೊಂದು ಹೆಜ್ಜೆಯಲ್ಲೂ ಆತನಿಗೆ ಭರವಸೆಯ ಬೆಳಕಾಗಿ ನಿಲ್ಲುತ್ತಾಳೆ. ಇಂತಹ ಹೆಂಡತಿಯಿದ್ದರೆ ದಾಂಪತ್ಯ ಬಲು ಸುಂದರವಾಗಿರುತ್ತದೆ.

6 / 6
Follow us
ಸಂಬಂಧಿಯ ಡಿಎನ್​ಎ ಜೊತೆ ಮೃತರ ಡಿಎನ್​ಎ ಮ್ಯಾಚ್ ಆದರೆ ದೇಹ ಹಸ್ತಾಂತರ

ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್

Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ

ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ

ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ

ದುರಂತಕ್ಕೆ ಕಾರಣ ಮತ್ತು ಪರಿಹಾರದ ಬಗ್ಗೆ ಪ್ರಧಾನಿ ಮೋದಿ ಚರ್ಚೆ

ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್

ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ

ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ