ಚಿಕ್ಕಬಳ್ಳಾಪುರ: ಬಿಸಿಲಿನ ಹೊಡೆತಕ್ಕೆ ಅರಳದ ಹೂ: ಬಾಡಿತು ಹೂ ಬೆಳೆಗಾರರ ಬದುಕು

ಫಲ ಪುಷ್ಪ ಗಿರಿಧಾಮಗಳ ಜಿಲ್ಲೆ ಎಂದು ಚಿಕ್ಕಬಳ್ಳಾಪುರ ಖ್ಯಾತಿಗಳಿಸಿದೆ. ರಾಜ್ಯ ಮಾತ್ರವದಲ್ಲದೇ ಇತರೆ ದೇಶಕ್ಕೆ ರವಾನಿಸುವಷ್ಟು ವಿವಿಧ ಹೂ ಗಳನ್ನು ಬೆಳೆಯಲಾಗುತ್ತದೆ. ಆದರೆ ಅತಿಯಾದ ತಾಪಮಾನದಿಂದ ಹೂಗಳು ಬೆಳೆಯುವುದಿರಲಿ, ಸರಿಯಾಗಿ ಅರಳುತ್ತಿಲ್ಲ. ಹೀಗಾಗಿ ಹೂ ಬೆಳೆಗಾರರ ಬದುಕು ಬಾಡಿದೆ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on:Apr 09, 2024 | 8:50 PM

ಅತಿಯಾದ ತಾಪಮಾನದಿಂದ ಹೂಗಳು ಅರಳುವುದಿರಲಿ, ಸರಿಯಾಗಿ ಬೆಳೆಯುತ್ತಿಲ್ಲ. ಕಷ್ಟಪಟ್ಟು ಹೂ ಬೆಳೆದರೆ, ಬಿಸಿಲಿನ ಧಗೆಗೆ ಒಣಗಿ ಹೋಗುತ್ತಿವೆ. ಇದರಿಂದ ಡಿಮ್ಯಾಡ್​ಗೆ ತಕ್ಕಂಕೆ ಮಾರುಕಟ್ಟೆಯಲ್ಲಿ ಹೂ ದೊರೆಯದೆ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. 

1 / 5
ಫಲ ಪುಷ್ಪ ಗಿರಿಧಾಮಗಳ ಜಿಲ್ಲೆ ಎಂದು ಚಿಕ್ಕಬಳ್ಳಾಪುರ ಖ್ಯಾತಿಗಳಿಸಿದೆ. ರಾಜ್ಯ ಮಾತ್ರವದಲ್ಲದೇ ಇತರೆ ದೇಶಕ್ಕೆ ರವಾನಿಸುವಷ್ಟು ವಿವಿಧ ಹೂ ಗಳನ್ನು ಬೆಳೆಯಲಾಗುತ್ತದೆ.

2 / 5
ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಹೆಕ್ಟರ್​ ಪ್ರದೇಶಗಳಲ್ಲಿ ಹೂ ಬೆಳೆಯಲಾಗುತ್ತಿದೆ. ಆದರೆ ಈಗ ತಾಪಮಾನ ಹೆಚ್ಚಾದ ಕಾರಣ ಹೂ ಗಿಡಗಳನ್ನು ಬೆಳೆಯಲು ಕಷ್ಟಸಾಧ್ಯವಾಗಿದೆ. ಇದರಿಂದ ಮಾರುಕಟ್ಟೆಗೆ ಹೂ ಗಳೆ ಬರುತ್ತಿಲ್ಲ. ಹೀಗಾಗಿ ವ್ಯಾಪಾರಿಗಳು ಕಂಗಾಲಾಗಿದ್ದು, ಹೂ ತಂದು ಕೊಡಿ ಅಂತ ರೈತರನ್ನು ಬೇಡಿಕೊಳ್ಳುತ್ತಿದ್ದಾರೆ.

3 / 5
ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜೆ ಮಲ್ಲಿಗೆ ಹೂವಿನ ಬೆಲೆ 1000 ರೂ, ಕೆ.ಜಿ ಕನಕಾಂಬರ ಬೆಲೆ 1200 ರೂ, ಕೆ.ಜಿ ರೋಜ್ ಹೂ ಬೆಲೆ 600 ರೂ, ಕೆಜಿ ಸೇವಂತಿ ಹೂವಿನ ಬೆಲೆ 600 ರೂ., ಕೆಜಿ ಚೆಂಡು ಹೂವಿಗೆ 120 ರೂ., ಕೆ.ಜಿ ಸುಗಂದ ಹೂವಿನ ಬೆಲೆ 200 ರೂ. ಹಾಗಾಗಿ ಗ್ರಾಹಕರ ಜೇಬಿಕೆ ಕತ್ತರಿ ಬೀಳುತ್ತಿದೆ. ಇನ್ನೂ ಮಾರಾಟಗಾರರಿಗೆ ಹೂಗಳೆ ಸಿಗುತ್ತಿಲ್ಲ.

4 / 5
ತಾಪಮಾನ ಹೆಚ್ಚಾಗಿ ಹೂ ಬೆಳೆಯಲಾಗುತ್ತಿಲ್ಲ. ಹೂ ಬೆಳೆ ಹಾಗೂ ತಂಪಾದ ಹವಾಗುಣಕ್ಕೆ ಖ್ಯಾತಿಯಾಗಿದ್ದ ಚಿಕ್ಕಬಳ್ಳಾಪುರದ ಹೂ ಬೆಳೆಗಾರರು ಸೂರ್ಯನ ಶಾಕಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. 

5 / 5

Published On - 8:49 pm, Tue, 9 April 24

Follow us