- Kannada News Photo gallery Chikkaballpura: ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು
Chikkaballpura: ಕಡಲೆಕಾಯಿ ಪರಿಷೆಗೆ ಚಾಲನೆ ನೀಡಿದ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು
ಚಿಕ್ಕಬಳ್ಳಾಪುರ ನಗರ ಹೊರಹೊಲಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾ ಮಠದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹನುಮ ಜಯಂತಿ ಪ್ರಯುಕ್ತನ್ನು ಹಮ್ಮಿಕೊಳ್ಳಲಾಗಿತ್ತು.
Updated on:Dec 12, 2022 | 2:13 PM

ಚಿಕ್ಕಬಳ್ಳಾಪುರ ನಗರ ಹೊರಹೊಲಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಚಿಕ್ಕಬಳ್ಳಾಪುರ ಶಾಖಾ ಮಠದ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಹನುಮ ಜಯಂತಿ ಪ್ರಯುಕ್ತ ಕಡಲೆಕಾಯಿ ಪರಿಷೆಯನ್ನು ಹಮ್ಮಿಕೊಳ್ಳಲಾಗಿತ್ತು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾದ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮಿಜೀಯವರು ಉರಿದ ಕಡಲೆಕಾಯಿಯನ್ನು ಭಕ್ತರ ಕಡೆ ಎರಚಿ ಹಾಗೂ ಸ್ವತಃ ತಮ್ಮ ಕೈಯಾರೆ ಭಕ್ತರಿಗೆ ಕಡಲೆಕಾಯಿ ವಿತರಿಸಿ ಪರಿಷೆಗೆ ಚಾಲನೆ ನೀಡಿದರು.

ಸ್ವಾಮಿಜೀ ಕೈಯಿಂದ ಉರಿದ ಕಡಲೆಕಾಯಿಯನ್ನು ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಹನುಮ ಭಕ್ತರು ನೆರೆದಿದ್ದರು. ಸಾಂಪ್ರದಾಯಿಕವಾಗಿ ಒಂದು ಬಾರಿ ಕಡಲೆಕಾಯಿಯನ್ನು ಎರಚಿದ ನಿರ್ಮಲಾನಂದನಾಥ ಸ್ವಾಮಿ, ನಂತರ ಸಾಲುಗಟ್ಟಿ ನಿಂತಿದ್ದ ಹನುಮ ಭಕ್ತರಿಗೆ ಕಡಲೆಕಾಯಿಯನ್ನು ವಿತರಿಸಿದರು.

ಇದೇ ವೇಳೆ ವೀರಾಂಜನೇಯ ಸ್ವಾಮಿ ಮೂರ್ತಿಯನ್ನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮಿ ಅವರು ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಟನ್ ಗಟ್ಟಲೆ ಉರಿದ ಕಡಲೆಕಾಯಿಯನ್ನು ತಂದು ಮೂಟೆಯಲ್ಲಿ ರಾಶಿ ಹಾಕಿದ್ದು, ಸಾವಿರಾರು ಜನರು ಬಂದು ಕಡಲೆಕಾಯಿ ಪರಿಷೆಯಲ್ಲಿ ಭಾಗವಹಿಸಿದ್ದರು.

ಇನ್ನು ತುಂತುತು ಮಳೆ, ಚಳಿಗಾಳಿಯ ಮಧ್ಯೆ ಬಿಸಿ ಬಿಸಿ ಕಡಲೆಕಾಯಿಯನ್ನು ಪಡೆದು ಸ್ಥಳದಲ್ಲೆ ಕಡಲೆಕಾಯಿ ತಿನ್ನುತ್ತಾ ಕುಣಿದು ಕುಪ್ಪಳಿಸಿದ್ದು ವಿಶೇಷವಾಗಿತ್ತು.
Published On - 2:12 pm, Mon, 12 December 22




