ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ; ಇಲ್ಲಿವೆ ಫೋಟೋಸ್

ಕಿರಣ್ ಹನುಮಂತ್​ ಮಾದಾರ್

Updated on: Oct 24, 2023 | 6:42 PM

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆಗೆ ಸಿಎಂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. 

1 / 7

2 / 7

ಸತತ 4ನೇ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊತ್ತು ಸಾಗುತ್ತಿದ್ದು, ಅಭಿಮನ್ಯುಗೆ ಕುಮ್ಕಿ ಆನೆಗಳಾದ ಲಕ್ಷ್ಮೀ, ವಿಜಯಾ ಸಾಥ್ ನೀಡುತ್ತಿವೆ.

3 / 7

ಅರಮನೆಯಿಂದ ಹೊಡಲಿರುವ ಜಂಬೂ ಸವಾರಿ, ಕೆ.ಆರ್.ಸರ್ಕಲ್ , ಆರ್ಯವೇದ ಸರ್ಕಲ್‌, ತಿಲಕ್ ನಗರ, ಬಂಬೂ ಬಜಾರ್ ಮೂಲಕ ಬನ್ನಿ ಮಂಟಪ್ಪಕ್ಕೆ ತಲುಪಲಿದೆ. ಸುಮಾರು 4 ರಿಂದ 5 ಕಿಲೋ ಮೀಟರ್ ಈ ಸವಾರಿ ನಡೆಯಲಿದೆ.

4 / 7

ಅರಮನೆಯಿಂದ ಬನ್ನಿಮಂಟಪದವರೆಗೆ ಈ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಯಲ್ಲಿ 49 ಸ್ತಬ್ದಚಿತ್ರಗಳು, ವಿವಿಧ ಕಲಾತಂಡಗಳು ಭಾಗಿಯಾಗಿದ್ದು, ಲಕ್ಷಾಂತರ ಜನರು ದಸರಾ ಜಂಬೂಸವಾರಿಗೆ ಸಾಕ್ಷಿಯಾಗಲಿದ್ದಾರೆ.

5 / 7

ದಸರಾ ಮೆರವಣಿಗೆಯಲ್ಲಿ ಆಕರ್ಷಕ ನಂದಿಧ್ವಜ ಕುಣಿತ ಸೇರಿದಂ ವಿವಿಧ ವೇಷ ತೊಟ್ಟು ಅನೇಕ ಕಲಾವಿದರು ನೃತ್ಯದಲ್ಲಿ ತೊಡಗಿದ್ದಾರೆ.

6 / 7

ಇನ್ನು ಈ ಬಾರಿ ನಿಗದಿತ ಸಮಯಕ್ಕಿಂತ ಜಂಬೂಸವಾರಿಗೆ ಪುಷ್ಪಾರ್ಚನೆ ತಡವಾಗಿದೆ. 4.40 ರಿಂದ 5 ಗಳೆ ಒಳಗೆ ಸಲ್ಲುವ ಮೀನ ಲಗ್ನದಲ್ಲಿ ಉಪ್ಪಾರ್ಚನೆ ಆಗಬೇಕಿತ್ತು. ಆದರೆ, 5.9 ಕ್ಕೆ ಪುಷ್ಪಾರ್ಚನೆ ನಡೆದಿದ್ದು, 9 ನಿಮಿಷ ತಡವಾಗಿ ಪುಷ್ಪಾರ್ಚನೆ ನಡೆದಿದೆ.

7 / 7

ದಸರಾ ಜಂಬೂಸವಾರಿ ಸಾಗುವ ರಸ್ತೆಯುದ್ದಕ್ಕೂ ನೆರೆದಿರುವ ಜನ, ಚಾಮುಂಡೇಶ್ವ ವಿಗ್ರಹಕ್ಕೆ ನಮಿಸಿದ್ದಾರೆ. ಅಭಿಮನ್ಯು ಮೇಲೆ ಚಾಮುಂಡೇಶ್ವರಿ ವಿರಾಜಮಾನವಾಗಿ ಕುಳಿತಿರುವಳು.

Loading...
Unable to load recommendations.
Follow Us