- Kannada News Photo gallery Code of conduct Kolar Addagal panchayat staff removed Kesari flag, Lord Ram flex and threw it in graveyard
ಕೋಲಾರ: ನೀತಿ ಸಂಹಿತೆ ಹೆಸರಲ್ಲಿ ಕೇಸರಿ ಧ್ವಜ, ರಾಮನ ಫ್ಲೆಕ್ಸ್ ತೆರವು ಮಾಡಿ ಸ್ಮಶಾನಕ್ಕೆ ಎಸೆದ ಅಡ್ಡಗಲ್ ಪಂಚಾಯತ್ ಸಿಬ್ಬಂದಿ
ಮನೆಗಳ ಮೇಲೆ ಹಾಕಲಾಗಿದ್ದ ಕೇಸರಿ ಧ್ವಜ ಹಾಗೂ ರಾಮನ ಪ್ಲೆಕ್ಸ್ಗಳನ್ನು ನೀತಿ ಸಂಹಿತೆ ಹೆಸರಿನಲ್ಲಿ ತೆರವು ಮಾಡಿ ಸ್ಮಶಾನಕ್ಕೆ ಎಸೆದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ನಲ್ಲಿ ನಡೆದಿದೆ. ಅಡ್ಡಗಲ್ ಗ್ರಾಮ ಪಂಚಾಯಿತಿ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
Updated on: Mar 17, 2024 | 12:58 PM

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 19 ರಿಂದ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ.

ಆದರೆ, ಮನೆಗಳ ಮೇಲೆ ಹಾಕಲಾಗಿದ್ದ ಕೇಸರಿ ಧ್ವಜ ಹಾಗೂ ರಾಮನ ಪ್ಲೆಕ್ಸ್ಗಳನ್ನು ನೀತಿ ಸಂಹಿತೆ ಹೆಸರಿನಲ್ಲಿ ತೆರವು ಮಾಡಿ ಸ್ಮಶಾನಕ್ಕೆ ಎಸೆದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ನಲ್ಲಿ ನಡೆದಿದೆ. ಅಡ್ಡಗಲ್ ಗ್ರಾಮ ಪಂಚಾಯಿತಿ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಕೇಸರಿ ಧ್ವಜ ಹಾಗೂ ರಾಮನ ಫ್ಲೆಕ್ಸ್ಗಳನ್ನು ತೆರವು ಮಾಡಿ ತಿಪ್ಪೆ ಹಾಗೂ ಸ್ಮಶಾನದಲ್ಲಿ ಎಸೆದಿರುವುದನ್ನು ಖಂಡಿಸಿ ಗ್ರಾಮದ ಜನರು ಪ್ರತಿಭಟನೆ ನಡೆಸಿದರು.

ಅಲ್ಲದೆ, ಘಟನೆ ಖಂಡಿಸಿ ಪಂಚಾಯಿತಿಯ ಪಿಡಿಓ ಏಜಾಜ್ ಪಾಷಾ ಅವರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಯಾವುದೇ ಪಕ್ಷದ ಬಾವುಟ ಅಥವಾ ಯಾವುದೇ ರಾಜಕಾರಣಿ ಫ್ಲೆಕ್ಸ್ ಹಾಕಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು.




