ಕೋಲಾರ: ನೀತಿ ಸಂಹಿತೆ ಹೆಸರಲ್ಲಿ ಕೇಸರಿ ಧ್ವಜ, ರಾಮನ ಫ್ಲೆಕ್ಸ್ ತೆರವು ಮಾಡಿ ಸ್ಮಶಾನಕ್ಕೆ ಎಸೆದ ಅಡ್ಡಗಲ್ ಪಂಚಾಯತ್ ಸಿಬ್ಬಂದಿ

ಮನೆಗಳ ಮೇಲೆ ಹಾಕಲಾಗಿದ್ದ ಕೇಸರಿ ಧ್ವಜ ಹಾಗೂ ರಾಮನ ಪ್ಲೆಕ್ಸ್​ಗಳನ್ನು ನೀತಿ ಸಂಹಿತೆ ಹೆಸರಿನಲ್ಲಿ ತೆರವು ಮಾಡಿ ಸ್ಮಶಾನಕ್ಕೆ ಎಸೆದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್​ನಲ್ಲಿ ನಡೆದಿದೆ. ಅಡ್ಡಗಲ್ ಗ್ರಾಮ ಪಂಚಾಯಿತಿ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: Rakesh Nayak Manchi

Updated on: Mar 17, 2024 | 12:58 PM

ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಏಪ್ರಿಲ್ 19 ರಿಂದ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ನೀತಿ ಸಂಹಿತೆ ಜಾರಿಯಾಗಿದೆ.

1 / 5
ಆದರೆ, ಮನೆಗಳ ಮೇಲೆ ಹಾಕಲಾಗಿದ್ದ ಕೇಸರಿ ಧ್ವಜ ಹಾಗೂ ರಾಮನ ಪ್ಲೆಕ್ಸ್​ಗಳನ್ನು ನೀತಿ ಸಂಹಿತೆ ಹೆಸರಿನಲ್ಲಿ ತೆರವು ಮಾಡಿ ಸ್ಮಶಾನಕ್ಕೆ ಎಸೆದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್​ನಲ್ಲಿ ನಡೆದಿದೆ. ಅಡ್ಡಗಲ್ ಗ್ರಾಮ ಪಂಚಾಯಿತಿ ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

2 / 5
ಕೇಸರಿ ಧ್ವಜ ಹಾಗೂ ರಾಮನ ಫ್ಲೆಕ್ಸ್​ಗಳನ್ನು ತೆರವು ಮಾಡಿ ತಿಪ್ಪೆ ಹಾಗೂ ಸ್ಮಶಾನದಲ್ಲಿ ಎಸೆದಿರುವುದನ್ನು ಖಂಡಿಸಿ ಗ್ರಾಮದ ಜನರು ಪ್ರತಿಭಟನೆ ನಡೆಸಿದರು.

3 / 5
ಅಲ್ಲದೆ, ಘಟನೆ ಖಂಡಿಸಿ ಪಂಚಾಯಿತಿಯ ಪಿಡಿಓ ಏಜಾಜ್ ಪಾಷಾ ಅವರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

4 / 5
ಯಾವುದೇ ಪಕ್ಷದ ಬಾವುಟ ಅಥವಾ ಯಾವುದೇ ರಾಜಕಾರಣಿ ಫ್ಲೆಕ್ಸ್ ಹಾಕಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಸ್ಥಳಕ್ಕೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿನೀಡಿ ಪರಿಶೀಲನೆ ನಡೆಸಿದರು.

5 / 5
Follow us