ಕಾಂಗ್ರೆಸ್ಗೆ ನೆರವಾಗತ್ತಾ ಟೆನ್ ಫ್ಯಾಕ್ಟರ್ ಸ್ಟ್ರಾಟಜಿ? ಭಾರೀ ನಂಬಿಕೆ ಇಟ್ಟುಕೊಂಡ ಕೈ ಟೆನ್ ಫ್ಯಾಕ್ಟರ್ ಏನೇನು?
ಕರ್ನಾಟಕ ವಿಧಾನಸಭೆ ಚುನಾವಣೆ ಮತಯಾಚನೆ ಕ್ಲೈಮ್ಯಾಕ್ಸ್ ಘಟ್ಟಕ್ಕೆ ತಲುಪಿದೆ.. ಅಬ್ಬರದ ಪ್ರಚಾರಕ್ಕೆ ಇಂದೇ ತೆರೆಬೀಳಲಿದೆ.. ಇನ್ನೆರಡು ದಿನದಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಮತದಾರರ ಮನಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಕೊನೆ ಹಂತದ ಕಸರತ್ತು ನಡೆಸಿವೆ...ಹೌದು ರಾಜ್ಯ ವಿಧಾನಸಭೆ ಚುನಾವಣೆ ನಿರ್ಣಾಯಕ ಹಂತಕ್ಕೆ ತಲುಪಿದೆ. ಬುಧವಾರ ಮತದಾನ ನಡೆಯಲಿದ್ದು, ಎರಡು ದಿನ ಮುಂಚಿತವಾಗಿ ಅಂದ್ರೆ ಇಂದೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ನಾಳೆಯಿಂದ ಮನೆ ಮನೆ ಪ್ರಚಾರ ಮಾಡಬೇಕಿದೆ. ಇನ್ನು ಭಾರೀ ನಂಬಿಕೆ ಇಟ್ಟುಕೊಂಡಿರುವ ಈ ಟೆನ್ ಫ್ಯಾಕ್ಟರ್ ಕಾಂಗ್ರೆಸ್ಗೆ ನೆರವಾಗುತ್ತಾ? ಕೈ ಟೆನ್ ಫ್ಯಾಕ್ಟರ್ ಏನೇನು?
Updated on: May 08, 2023 | 9:21 AM

ಬಿಜೆಪಿ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ(ಕೋವಿಡ್ ಕಾಲದಿಂದ ಹಿಡಿದು ಇಲ್ಲಿ ತನಕ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ.)

ಪೇಸಿಎಂ ಪೋಸ್ಟರ್, 40% ಕಮಿಷನ್ ಅಸ್ತ್ರ, ನಿರಂತರ ಭ್ರಷ್ಟಾಚಾರ ಆರೋಪ

ಸರ್ಕಾರದ ವಿರುದ್ದ ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಅಸ್ತ್ರ

ನಿರುದ್ಯೋಗ ಸಮಸ್ಯೆಯನ್ನೇ ಹೈ ಲೈಟ್ ಮಾಡಿ ಯುವಕರು ಬಿಜೆಪಿ ವಿರುದ್ದ ಸಿಡಿದೇಳುವಂತೆ ಮಾಡಿದ್ದು

ಬಿಜೆಪಿ ವಿರುದ್ದ ದಲಿತರ ಕಡೆಗಣೆನೆಯ ಆರೋಪ- ಕಾಂಗ್ರೆಸ್ ನಾಯಕರ ಸಾಮೂಹಿಕ ನಾಯಕತ್ವದ ಒಗ್ಗಟ್ಟು ಪ್ರದರ್ಶನ

Move to withdraw anti-cow slaughter Act triggers political slugfest In Karnataka

ರೌಡಿ ಶೀಟರ್ ಗಳ ಬಿಜೆಪಿ ಪಕ್ಷ ಸೇರ್ಪಡೆ ಆರೋಪ

ಮೀಸಲಾತಿ ಹೆಚ್ಚಳ ಕೇವಲ ಬಿಜೆಪಿಯ ಕಣ್ಣೊರೆಸುವ ತಂತ್ರ ಎಂಬ ಪ್ರಚಾರ (ಮುಸಲ್ಮಾನ್ ಮೀಸಲಾತಿಯನ್ನು ಪುನರ್ ಸ್ಥಾಪಿಸುವ ಚಿಂತನೆ)

ಬಿಜೆಪಿ ವಿರುದ್ದ ಯಡಿಯೂರಪ್ಪ ಸೇರಿದಂತೆ ಹಲವು ಲಿಂಗಾಯತ ನಾಯಕರ ಮೂಲೆಗುಂಪು ಮಾಡಿದ ಆರೋಪ

ಬಿಜೆಪಿಗೆ ನಿದ್ದೆಮಾಡಲು ಬಿಡದ ಕಾಂಗ್ರೆಸ್ ಪಕ್ಷದ ಆರು ಗ್ಯಾರಂಟಿಗಳು
