ಮುಡಾಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ: ಬಿಜೆಪಿ ಅವಧಿಯ ಹಗರಣಗಳ ತನಿಖಾ ವರದಿ ಪಡೆಯುತ್ತಿರುವ ಕಾಂಗ್ರೆಸ್

| Updated By: Ganapathi Sharma

Updated on: Aug 31, 2024 | 5:30 PM

ಬೆಂಗಳೂರು, ಆಗಸ್ಟ್ 31: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಸಂಬಂಧ ಕಾನೂನು ಮತ್ತು ರಾಜಕೀಯವಾಗಿ ನಾನಾ ಬೆಳವಣಿಗೆಗಳು ಆಗುತ್ತಿವೆ. ಇಂದು ಕಾಂಗ್ರೆಸ್ ಪ್ರತಿಭಟನೆ ಮೂಲಕ ರಾಜಭವನದ ಕದ ತಟ್ಟುವುದರ ಜೊತೆಗೆ ಕಮಲ-ದಳ ನಾಯಕರಿಗೆ ಟಕ್ಕರ್ ಕೊಡಲು ಪ್ಲಾನ್ ರೂಪಿಸುತ್ತಿದೆ. ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನ ಬಯಲಿಗೆಳೆಯಲು ‘ಭ್ರಷ್ಟಾಚಾರ’ ಎಂಬ ಬಾಣ ಬಿಡಲು ಕಾಂಗ್ರೆಸ್ ಮುಂದಾಗಿದೆ.

1 / 8
ಮುಡಾ ವಿರುದ್ಧದ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿದ ನಂತರ ಅದನ್ನು ಸಿಎಂ ಸಿದ್ದರಾಮಯ್ಯ ಮಾತ್ರವಲ್ಲದೇ ಕಾಂಗ್ರೆಸ್ ಪಕ್ಷ ಸಹ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಸಿಎಂ ವಿರುದ್ಧದ ಪ್ರಕರಣಕ್ಕೆ ರಾಜೀನಾಮೆ ಕೇಳುತ್ತಿದ್ದರೆ, ಕಾಂಗ್ರೆಸ್ ಸಹ ತನ್ನದೇ ಕಾರ್ಯತಂತ್ರ ಮುಂದುವರೆಸಿದೆ. ವಿಪಕ್ಷ ಬಿಜೆಪಿಯನ್ನ ಕಟ್ಟಿಹಾಕಲು ಕೋವಿಡ್ ವೇಳೆ ನಡೆದ ಹಗರಣ, ಬಿಟ್ ಕಾಯಿನ್, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಕಾಯ್ದೆಯನ್ನ ಪ್ರಬಲ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಿದೆ. ಮುಡಾ ಪ್ರಕರಣ ಬೆನ್ನಲ್ಲೇ ಈ ಸಮಯದಲ್ಲಿ ಬಿಜೆಪಿ ವಿರುದ್ಧ ಸಮರ ಸಾರೋದಕ್ಕೆ ಇದು ಅನಿವಾರ್ಯ ಸಹ ಎದುರಾಗಿದೆ.

2 / 8
ಕೋರ್ಟ್ ವಿಚಾರಣೆ ಮೇಲೆ ಕಾಂಗ್ರೆಸ್ ಚಿತ್ತನೆಟ್ಟಿದೆ. ಕೋರ್ಟ್ ತೀರ್ಪು ಕೇವಲ ಸಿದ್ದರಾಮಯ್ಯ ಮಾತ್ರವಲ್ಲ ಕಾಂಗ್ರೆಸ್ ಪಾಲಿಗೂ ಬಹಳ ಇಂಪಾರ್ಟೆಂಟ್ ಆಗಿದೆ. ಸಿದ್ದರಾಮಯ್ಯ ಸಂಕಷ್ಟ ಎದುರಾಗದೇ ಇದ್ದರೆ ಕಾಂಗ್ರೆಸ್ ಸೇಫ್ ಎನ್ನುವ ಲೆಕ್ಕಾಚಾರಕ್ಕೆ ಬಂದಿದೆ.

3 / 8
ಸರ್ಕಾರವನ್ನು ಗಟ್ಟಿಯಾಗಿ ಇಟ್ಟುಕೊಳ್ಳುವ ಬಗ್ಗೆ ಕಾಂಗ್ರೆಸ್ ಗಮನಹರಿಸುತ್ತಿದೆ. ಪಕ್ಷದೊಳಗೆ ಸರ್ಕಾರದ ಲೆವೆಲ್​ನಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ. ಅತ್ತ ವ್ಯತಿರಿಕ್ತವಾಗಿ ತೀರ್ಪು ಬಂದರೆ ಸುಪ್ರಿಂ ಮೊರೆ ಹೋಗಲು ತೀರ್ಮಾನಿಸಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಕಾನೂನು ಹೋರಾಟ ಮುಂದುವರಿಕೆ ಚಿಂತನೆ ನಡೆಸಲಾಗಿದೆ.

4 / 8
ಬಿಜೆಪಿ ಜೆಡಿಎಸ್ ವಿರುದ್ದ ಮತ್ತಷ್ಟು ಪ್ರಕರಣ ವಿಚಾರಣೆಗೆ ಸರ್ಕಾರ ಅನುಮತಿ ನೀಡಲಿದೆ. ಪಿಎಸ್ಐ ಹಗರಣ, ಬಿಟ್ ಕಾಯಿನ್, ಕೋವಿಡ್ ಹಗರಣ ಸೇರಿ ಪ್ರಮುಖ ಹಗರಣಗಳ ಬಗ್ಗೆ ವರದಿಯನ್ನ ಪಡೆಯಲು ಸರ್ಕಾರ ಮುಂದಾಗಿದೆ. ಪಿಎಸ್ಐ ಹಗರಣದಲ್ಲಿ ಕ್ರಿಮಿನಲ್ ಇನವೆಸ್ಟಿಗೇಷನ್ ಪ್ರಾರಂಭಕ್ಕೆ ಸರ್ಕಾರದ ಮಟ್ಟದಲ್ಲಿ ಸಿದ್ದತೆ ನಡೆಯುತ್ತಿದೆ.

5 / 8
ಕೋವಿಡ್ ವರದಿ ಆಧರಿಸಿ ಬಿಜೆಪಿ ನಾಯಕರನ್ನು ಹಣಿಯುವ ಪ್ರಯತ್ನಿಸಲಾಗುತ್ತಿದೆ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ವಿರುದ್ದ ಫೋರ್ಜರಿ ಸಹಿ ವಿಚಾರ ಮುಂದಿಟ್ಟುಕೊಂಡು ಇಕ್ಕಟ್ಟಿಗೆ ಸಿಲುಕಿಸುವ ಪ್ಲಾನ್ ಮಾಡಲಾಗುತ್ತಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ಲ್ಯಾನ್‌ ಬಿ ಬಗ್ಗೆ ಆಲೋಚನೆ ಪೂರ್ವ ಸಿದ್ದತೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಅವಧಿಯಲ್ಲಾದ ಪ್ರಕರಣಗಳನ್ನ ಬಿಡುವುದಿಲ್ಲ. ತನಿಖೆ ನಡೆಸುತ್ತೇವೆ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.

6 / 8
ಬಿಜೆಪಿ ವಿರುದ್ಧದ ಪ್ರಕರಣಗಳ ತನಿಖಾ ವರದಿ ಸ್ವೀಕಾರಕ್ಕೆ ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಶಾಸಕ ಡಾ. ಅಶ್ವಥ್ ನಾರಾಯಣ, ಕಾಂಗ್ರೆಸ್ ಸರ್ಕಾರ ಪ್ರತಿಭಟನೆ ಮಾಡುವುದರಲ್ಲೂ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಅಂತ ಕಿಡಿ ಕಾರಿದ್ದಾರೆ. ಭ್ರಷ್ಟ ನಾಯಕರ ರಕ್ಷಣೆಗೆ ಬರುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಏನು ನೈತಿಕತೆ ಇದೆ? ನಾಯಕರಿಗೂ ನೈತಿಕತೆ ಇಲ್ಲ, ಕಾರ್ಯಕರ್ತರಿಗೂ ನೈತಿಕತೆ ಇಲ್ಲ ಅಂತ ಪ್ರಶ್ನೆ ಮಾಡಿದ್ದಾರೆ.

7 / 8
ಕೋವಿಡ್ ಕಾಲದ ಹಗರಣಗಳ ಮಧ್ಯಂತರ ವರದಿ ಸರ್ಕಾರಕ್ಕೆ ಸಲ್ಲಿಕೆ ವಿಚಾರವಾಗಿಯೂ ಕಿಡಿ ಕಾರಿದ್ದಾರೆ. ಹದಿನೈದು ತಿಂಗಳು ಆಗಿದೆ, ಇನ್ನೂ ಮಧ್ಯಂತರದಲ್ಲೇ ಇರುವುದು ಬೇಡ. ಏನು ಇದೆ, ಅದು ಬರಲಿ, ನಮ್ಮದೇನೂ ಅಭ್ಯಂತರ ಇಲ್ಲ. ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಂಡು ಕೆಲಸ. ಜನಪರ ನಿರ್ಧಾರ ತೆಗೆದುಕೊಂಡು ಕಾಂಗ್ರೆಸ್ ಸರ್ಕಾರ ಕೆಲಸ ಮಾಡಲಿ. ಭ್ರಷ್ಟಾಚಾರ ಮಾಡಿದವರು ಮೊದಲು ರಾಜೀನಾಮೆ ನೀಡಲಿ ಅಂತ ಕುಟುಕಿದ್ದಾರೆ.

8 / 8
ಒಟ್ಟಾರೆ ಮುಡಾ ಪ್ರಕರಣದಲ್ಲಿ ವಿಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಪಟ್ಟು ಹಿಡಿದಿವೆ. ಅತ್ತ ಬಿಜೆಪಿ ಅವಧಿಯಲ್ಲಾದ ಪ್ರಕರಣನ್ನ ಇದೇ ಸರಿಯಾದ ಸಮಯ ಅಂತ ಕಾಂಗ್ರೆಸ್ ಸಮಿತಿಗಳಿಂದ ವರದಿ ಸ್ವೀಕಾರಕ್ಕೆ ಮುಂದಾಗಿದೆ. ಒಂದೊಂದೇ ಹಗರಣ ಕುರಿತು ಬಿಜೆಪಿ-ಜೆಡಿಎಸ್ ವಿರುದ್ಧ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿದೆ.