- Kannada News Photo gallery Congress Leaders celebrates KPCC President dk shivakumar birthday During Legislature Party meet In Bengaluru
DK Shivakumar Birthday: ಸಿಎಂ ಕುರ್ಚಿ ಜಟಾಪಟಿ ಮಧ್ಯೆ ಅದ್ದೂರಿಯಾಗಿ ಡಿಕೆ ಶಿವಕುಮಾರ್ ಹುಟ್ಟುಹಬ್ಬ ಆಚರಿಸಿದ ಕಾಂಗ್ರೆಸ್ ನಾಯಕರು
ಕಾಂಗ್ರೆಸ್ ಕರ್ನಾಟಕ ಕುರುಕ್ಷೇತ್ರ ಗೆದ್ದಾಗಿದೆ. ಪ್ರಚಂಡ ಬಹುಮತ ಪಡೆದಿರೋ ಕಾಂಗ್ರೆಸ್‌ನಲ್ಲಿ ಇದೀಗ ಸಿಎಂ ಕುರ್ಚಿ ಫೈಟ್ ತೀವ್ರಗೊಂಡಿದೆ. ಕೆಪಿಸಿಸಿ ಸಾರಥಿ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ಕುರ್ಚಿಗಾಗಿ ಪಟ್ಟು ಹಿಡಿದಿದ್ದಾರೆ. ಚುನಾವಣೆಗೂ ಮುನ್ನ ಒಗ್ಗಟ್ಟಿನ ಮಂತ್ರ ಜಪಿಸಿದ ಉಭಯ ನಾಯಕರು ಈಗ ಸಿಎಂ ಕುರ್ಚಿಗೆ ಪಟ್ಟು ಬಿಗಿಗೊಳಿಸಿದ್ದಾರೆ. ಸಿಎಂ ಹುದ್ದೆಯ ಪೈಪೋಟಿ ನಡುವೆಯೂ ಕಾಂಗ್ರೆಸ್ ನಾಯಕರು ಡಿಕೆ ಶಿವಕುಮಾರ್ ಅವರಿಗೆ ಕೇಕ್ ತಿನ್ನಿಸಿ ಹುಟ್ಟುಹಬ್ಬದ ಶಭಾಶಯ ಕೋರಿದರು.
Updated on: May 15, 2023 | 6:57 AM

ಮುಖ್ಯಮಂತ್ರಿ ಸ್ಥಾನದ ಜಟಾಪಟಿ ಮಧ್ಯೆಯೂ 63ನೇ ವಸಂತಕ್ಕೆ ಕಾಲಿಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಸಿಎಂ ಹುದ್ದೆಗೆ ಪೈಪೋಟಿ ಇದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಕ್ ತಿನ್ನಿಸಿ, ಶುಭಾಶಯ ತಿಳಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಮಾಜಿ ಸಚಿವ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್ ಮತ್ತಿತರರು ಜತೆಗಿದ್ದರು ಹುಟ್ಟು ಹಬ್ಬದ ಸಂಭ್ರಮ ಮುಗಿಸಿ, ಶಾಂಗ್ರಿಲಾ ಹೋಟೆಲ್ ನಿಂದ ತೆರಳುತ್ತಿರುವ ನಾಯಕರು ಒಬ್ಬೊಬ್ಬರಾಗಿ ತಮ್ಮ ತಮ್ಮ ಮನೆಗೆ ತೆರಳುತ್ತಿರುವ ಕೈ ನಾಯಕರು

ರಾಜ್ಯದ ಮೂಲೆಮೂಲೆಗಳಿಂದ ಕಾರ್ಯಕರ್ತರು, ಮುಖಂಡರು ಹುಟ್ಟುಹಬ್ಬದ ಶುಭಾಶಯ ಹೇಳುತ್ತಿರುವ ಹಿನ್ನೆಲೆ ಟ್ವಿಟ್ ಮೂಲಕ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ ಅವರು, ನನ್ನ ಜೀವನ ಕರ್ನಾಟಕದ ಜನರ ಸೇವೆಗೆ ಮುಡಿಪಾಗಿದೆ ನನ್ನ ಹುಟ್ಟುಹಬ್ಬದ ಮುನ್ನಾದಿನದಂದು, ಕರ್ನಾಟಕದ ಜನರು ನನಗೆ ಅತ್ಯುತ್ತಮ ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದ್ದಾರೆ ನನ್ನ ಕಾಂಗ್ರೆಸ್ ಕುಟುಂಬಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ-ಡಿಕೆ ಶಿವಕುಮಾರ್

congress MlAs lobbying for ministerial post in karnataka

ಹಿರಿಯ ನಾಯಕ ಸುಶೀಲ್ ಕುಮಾರ್ ಶಿಂಧೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಸಿಂಗ್, ದೀಪಕ್ ಬಬಾರಿಯಾರನ್ನ ವೀಕ್ಷಕರಾಗಿ ಹೈಕಮಾಂಡ್ ಕಳಿಸಿತ್ತು. ಮೊದಲ ಶಾಸಕಾಂಗ ಸಭೆಯಲ್ಲಿ ಪ್ರತಿಯೊಬ್ಬ ಶಾಸಕರೂ ತಮ್ಮ ಅಭಿಪ್ರಾಯವನ್ನ ತಿಳಿಸಿದ್ರು.





