IPL 2025: ಐಪಿಎಲ್​ನ ಎಲ್ಲಾ ಆವೃತ್ತಿಗಳನ್ನು ಆಡಿರುವ ಈ 4 ಆಟಗಾರರ ಬಗ್ಗೆ ನಿಮಗೆಷ್ಟು ಗೊತ್ತು?

Updated on: Mar 16, 2025 | 9:38 PM

4 IPL Legends Play 18th Season: 2008ರಿಂದ ಆರಂಭವಾದ ಐಪಿಎಲ್‌ನ 18ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಮತ್ತು ಮನೀಶ್ ಪಾಂಡೆ ಅವರು ಆಡಲಿದ್ದಾರೆ. ಇದು ಈ ನಾಲ್ವರು ಆಟಗಾರರಿಗೆ ವಿಶೇಷ ಸೀಸನ್ ಆಗಿದೆ. ಕೊಹ್ಲಿ ಒಂದೇ ಫ್ರಾಂಚೈಸಿಗೆ ಆಡುತ್ತಿದ್ದರೆ, ಧೋನಿ, ರೋಹಿತ್ ಮತ್ತು ಪಾಂಡೆ ವಿವಿಧ ತಂಡಗಳಿಗೆ ಆಡಿದ್ದಾರೆ.

1 / 6
2008 ರಲ್ಲಿ ಆರಂಭವಾದ ಐಪಿಎಲ್‌ ಇದುವರೆಗೆ 17 ಆವೃತ್ತಿಗಳನ್ನು ಕಂಡಿದೆ. ಇದೀಗ 18ನೇ ಆವೃತ್ತಿಗೆ 10 ತಂಡಗಳಿ ತಯಾರಿ ನಡೆಸಿವೆ. ಈ ಆವೃತ್ತಿಗೂ ಮುನ್ನ, ಮೊದಲ ಸೀಸನ್‌ನಿಂದ ಇಲ್ಲಿಯವರೆಗೆ ಈ ಲೀಗ್‌ನಲ್ಲಿ 4 ಆಟಗಾರರು ಆಡುತ್ತಿದ್ದು, ವಿಶೇಷವೆಂದರೆ ಈ ನಾಲ್ವರು ಆಟಗಾರರು ಈ ಬಾರಿಯೂ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸಲು ಸನ್ನದ್ಧರಾಗಿದ್ದಾರೆ.

2008 ರಲ್ಲಿ ಆರಂಭವಾದ ಐಪಿಎಲ್‌ ಇದುವರೆಗೆ 17 ಆವೃತ್ತಿಗಳನ್ನು ಕಂಡಿದೆ. ಇದೀಗ 18ನೇ ಆವೃತ್ತಿಗೆ 10 ತಂಡಗಳಿ ತಯಾರಿ ನಡೆಸಿವೆ. ಈ ಆವೃತ್ತಿಗೂ ಮುನ್ನ, ಮೊದಲ ಸೀಸನ್‌ನಿಂದ ಇಲ್ಲಿಯವರೆಗೆ ಈ ಲೀಗ್‌ನಲ್ಲಿ 4 ಆಟಗಾರರು ಆಡುತ್ತಿದ್ದು, ವಿಶೇಷವೆಂದರೆ ಈ ನಾಲ್ವರು ಆಟಗಾರರು ಈ ಬಾರಿಯೂ ಮೈದಾನದಲ್ಲಿ ಅಭಿಮಾನಿಗಳನ್ನು ರಂಜಿಸಲು ಸನ್ನದ್ಧರಾಗಿದ್ದಾರೆ.

2 / 6

ಈ ಬಾರಿಯ ಐಪಿಎಲ್ ನಾಲ್ಕು ಆಟಗಾರರಿಗೆ ತುಂಬಾ ವಿಶೇಷವಾಗಲಿದೆ. ಈ ಆಟಗಾರರು ಸತತ 18 ನೇ ಸೀಸನಲ್ಲೂ ಕಣಕ್ಕಿಳಿಯಲಿದ್ದಾರೆ. ಈ ಆಟಗಾರರಲ್ಲಿ ವಿರಾಟ್ ಕೊಹ್ಲಿ ಮಾತ್ರ ಒಂದೇ ಫ್ರಾಂಚೈಸಿಗಾಗಿ ಎಲ್ಲಾ ಸೀಸನ್​ಗಳನ್ನು ಆಡಿದ್ದಾರೆ. ಅವರಲ್ಲದೆ, ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ಮನೀಶ್ ಪಾಂಡೆ ಕೂಡ ತಮ್ಮ 18 ನೇ ಸೀಸನ್ ಆಡಲಿದ್ದಾರೆ.

3 / 6

ಐಪಿಎಲ್‌ನ ಅತ್ಯಂತ ಜನಪ್ರಿಯ ಆಟಗಾರರಲ್ಲಿ ವಿರಾಟ್ ಕೊಹ್ಲಿ ಹೆಸರು ಸೇರಿದೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ನಾಯಕರಾಗಿಯೂ ಮುನ್ನಡೆಸಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯ ಜೊತೆಗೆ ಹಲವಾರು ದಾಖಲೆಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಈ ಬಾರಿಯೂ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳಲು ಸಿದ್ಧರಾಗಿದ್ದಾರೆ.

4 / 6

ವಿರಾಟ್ ಕೊಹ್ಲಿಯಂತೆ ಎಂಎಸ್ ಧೋನಿ ಕೂಡ ಕಳೆದ 17 ಆವೃತ್ತಿಗಳನ್ನು ಆಡಿದ್ದಾರೆ. ಇದರಲ್ಲಿ ಒಮ್ಮೆ ಮಾತ್ರ ತಂಡ ಬದಲಿಸಿರುವ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಬಾರಿ (2010, 2011, 2018, 2021 ಮತ್ತು 2023) ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಎಸ್​ಕೆ ಫ್ರಾಂಚೈಸಿಯನ್ನು 2ವರ್ಷ ನಿಷೇಧಿಸಿದ್ದರಿಂದ ಧೋನಿ, ಪುಣೆ ಸೂಪರ್​ಜೈಂಟ್ಸ್ ತಂಡದ ಪರ ಆಡಿದ್ದರು.

5 / 6

ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಈ ಲೀಗ್‌ನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ರೋಹಿತ್ ನಾಯಕತ್ವದಲ್ಲಿ ಮುಂಬೈ ಐದು ಬಾರಿ (2013, 2015, 2017, 2019, ಮತ್ತು 2020) ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ.

6 / 6

ಮನೀಶ್ ಪಾಂಡೆ ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟಿಗರಾಗಿದ್ದು, ಐಪಿಎಲ್‌ನಲ್ಲಿ ಹಲವು ತಂಡಗಳ ಭಾಗವಾಗಿದ್ದಾರೆ. ಮನೀಶ್ ಪಾಂಡೆ ತಮ್ಮ ವೃತ್ತಿಜೀವನದಲ್ಲಿ ಅನೇಕ ಪಂದ್ಯ ಗೆಲ್ಲುವ ಪ್ರದರ್ಶನಗಳನ್ನು ನೀಡಿದ್ದಾರೆ. ಹಾಗೆಯೇ ಐಪಿಎಲ್​ನಲ್ಲಿ ಮೊದಲ ಶತಕ ಸಿಡಿಸಿದ ದಾಖಲೆಯೂ ಮನೀಶ್ ಹೆಸರಿನಲ್ಲಿದೆ. ಮನೀಶ್ ಇಲ್ಲಿಯವರೆಗೆ ಐಪಿಎಲ್‌ನಲ್ಲಿ 7 ತಂಡಗಳ ಪರ ಆಡಿದ್ದಾರೆ.

Loading...
Unable to load recommendations.
Follow Us