ಒಂದೊಂದೇ ಇನಿಂಗ್ಸ್​ ಬಳಿಕ ಸೊನ್ನೆ ಸುತ್ತುವ ಅಭಿಷೇಕ್ ಶರ್ಮಾ

Updated on: Feb 09, 2026 | 3:21 PM

Abhishek Sharma: ಅಭಿಷೇಕ್ ಶರ್ಮಾ ಕಳೆದ 6 ಇನಿಂಗ್ಸ್​​​ಗಳಲ್ಲಿ ಎರಡು ಸ್ಫೋಟಕ ಅರ್ಧಶತಕ ಸಿಡಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 35 ಎಸೆತಗಳಲ್ಲಿ 84 ರನ್ ಬಾರಿಸಿದ್ದರು. ಇದಾದ ಬಳಿಕ ನ್ಯೂಝಿಲೆಂಡ್ ವಿರುದ್ಧವೇ ಮೂರನೇ ಟಿ20 ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅಜೇಯ 68 ರನ್ ಚಚ್ಚಿದ್ದರು. ಈ ವಿಸ್ಫೋಟಕ ಅರ್ಧಶತಕಗಳ ಹೊರತಾಗಿಯೂ ಅಭಿಷೇಕ್ ಶರ್ಮಾ ಅವರ ಬ್ಯಾಟಿಂಗ್ ಟೀಮ್ ಇಂಡಿಯಾ ಚಿಂತೆಗೆ ಕಾರಣವಾಗಿದೆ.

1 / 6
ಟಿ20 ಕ್ರಿಕೆಟ್​​ನಲ್ಲಿನ ಡೇಂಜರಸ್ ಬ್ಯಾಟ್ಸ್​ಮನ್​​ಗಳಲ್ಲಿ ಅಭಿಷೇಕ್ ಶರ್ಮಾ (Abhishek Sharma) ಕೂಡ ಒಬ್ಬರು. ಈಗಾಗಲೇ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಯುವ ದಾಂಡಿಗ ಸಂಚಲನ ಸೃಷ್ಟಿಸಿದ್ದಾರೆ. ಈ ಸಂಚಲನದ ಹೊರತಾಗಿಯೂ ಅಭಿ ಬ್ಯಾಟಿಂಗ್ ಮಾಡುತ್ತಿರುವುದು ಆಲ್ ಅಥವಾ ನಥಿಂಗ್ ಸ್ಟ್ರೈಲ್​​ನಲ್ಲಿ.

ಟಿ20 ಕ್ರಿಕೆಟ್​​ನಲ್ಲಿನ ಡೇಂಜರಸ್ ಬ್ಯಾಟ್ಸ್​ಮನ್​​ಗಳಲ್ಲಿ ಅಭಿಷೇಕ್ ಶರ್ಮಾ (Abhishek Sharma) ಕೂಡ ಒಬ್ಬರು. ಈಗಾಗಲೇ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಯುವ ದಾಂಡಿಗ ಸಂಚಲನ ಸೃಷ್ಟಿಸಿದ್ದಾರೆ. ಈ ಸಂಚಲನದ ಹೊರತಾಗಿಯೂ ಅಭಿ ಬ್ಯಾಟಿಂಗ್ ಮಾಡುತ್ತಿರುವುದು ಆಲ್ ಅಥವಾ ನಥಿಂಗ್ ಸ್ಟ್ರೈಲ್​​ನಲ್ಲಿ.

2 / 6

ಅಂದರೆ ಅಭಿಷೇಕ್ ಶರ್ಮಾ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಇದಕ್ಕೆ ಸಾಕ್ಷಿ ಅವರು ಕಳೆದ 6 ಇನಿಂಗ್ಸ್​​ಗಳಲ್ಲಿ ಕಲೆಹಾಕಿರುವ ಸ್ಕೋರ್. ಈ ಆರು ಇನಿಂಗ್ಸ್​​ಗಳಲ್ಲಿ ಅವರು ಮೂರು ಬಾರಿ ಸೊನ್ನೆ ಸುತ್ತಿದ್ದಾರೆ ಎಂಬುದೇ ಅಚ್ಚರಿ. ಇದಾಗ್ಯೂ ಅವರು ಔಟ್ ಆಫ್ ಫಾರ್ಮ್​ನಲ್ಲಿಲ್ಲ ಎಂಬುದು ಸಹ ಉಲ್ಲೇಖಾರ್ಹ.

3 / 6

ಏಕೆಂದರೆ ನಾಗ್​​ಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 35 ಎಸೆತಗಳಲ್ಲಿ 84 ರನ್ ಚಚ್ಚಿದ್ದರು. ಆದರೆ ರಾಯ್​ಪುರದಲ್ಲಿ ನಡೆದ 2ನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು.

4 / 6

ಇನ್ನು ಗುವಾಹಟಿಯಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಮೂರನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ 68 ರನ್ ಚಚ್ಚಿದ್ದರು. ಆದರೆ ವಿಶಾಖಪಟ್ಟಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಮತ್ತೆ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

5 / 6

ಇದಾದ ಬಳಿಕ ತಿರುವನಂತಪುರದಲ್ಲಿ ನಡೆದ ನ್ಯೂಝಿಲೆಂಡ್ ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 16 ಎಸೆತಗಳಲ್ಲಿ 30 ರನ್ ಚಚ್ಚಿದ್ದರು. ಇದೀಗ ಟಿ20 ವಿಶ್ವಕಪ್​​ನ ಮೊದಲ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಶೂನ್ಯಕ್ಕೆ ಔಟಾಗಿದ್ದಾರೆ. ಅಂದರೆ ಅಭಿಷೇಕ್ ಶರ್ಮಾ ಪ್ರತಿ ಇನಿಂಗ್ಸ್ ಬಳಿಕ ಸೊನ್ನೆ ಸುತ್ತಿದ್ದಾರೆ.

6 / 6

ಅಂದರೆ ಒಂದು ಇನಿಂಗ್ಸ್​​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಅಭಿಷೇಕ್ ಶರ್ಮಾ, ಮತ್ತೊಂದು ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಕಳೆದ 6 ಪಂದ್ಯಗಳಲ್ಲಿ ಅವರು ಮೂರು ಬಾರಿ ಡಕ್ ಔಟ್ ಆಗಿರುವುದು. ಅಂದರೆ ಅತ್ತ ಭರ್ಜರಿ ಫಾರ್ಮ್​​ನಲ್ಲಿದ್ದರೂ ಅಭಿಷೇಕ್ ಶರ್ಮಾ ಒಂದೊಂದೇ ಇನಿಂಗ್ಸ್​​ಗಳ ಸೊನ್ನೆ ಸುತ್ತುತ್ತಿರುವುದು ಇದೀಗ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿದೆ.

Loading...
Unable to load recommendations.
Follow Us