20 ಎಸೆತ ಎಸೆಯಲು 34 ಸಾವಿರ ಕಿ.ಮೀ ಪ್ರಯಾಣಿಸಿದ ಆ್ಯಡಂ ಝಂಪಾ
Oval Invincibles vs Trent Rockets, Final: ದಿ ಹಂಡ್ರೆಡ್ ಲೀಗ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಓವಲ್ ಇನ್ವಿನ್ಸಿಬಲ್ಸ್ ತಂಡವು 100 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿಯು. ಈ ಗುರಿಯನ್ನು ಬೆನ್ನತ್ತಿದ ಟ್ರೆಂಟ್ ರಾಕೆಟ್ಸ್ ತಂಡವು 100 ಎಸೆತಗಳಲ್ಲಿ 142 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡವು 26 ರನ್ಗಳ ಜಯ ಸಾಧಿಸಿ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Updated on:Sep 01, 2025 | 9:36 AM

ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಕೇವಲ 20 ಎಸೆತಗಳನ್ನು ಎಸೆಯಲು 34 ಕಿ.ಮೀ ಪ್ರಯಾಣಿಸಿದ್ದಾರೆ ಎಂದರೆ ನಂಬುತ್ತೀರಾ? ಹೌದು, ಝಂಪಾ ಒಂದೇ ಒಂದು ಪಂದ್ಯವಾಡಲು ಬರೋಬ್ಬರಿ 34000 ಕಿ.ಮೀ ಪ್ರಯಾಣ ಬೆಳೆಸಿದ್ದಾರೆ. ಅದು ಸಹ ಆಸ್ಟ್ರೇಲಿಯಾ ಟು ಇಂಗ್ಲೆಂಡ್.

ದಿ ಹಂಡ್ರೆಡ್ ಲೀಗ್ನಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡದಲ್ಲಿದ್ದ ರಶೀದ್ ಖಾನ್ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯಲು ಯುಎಇಗೆ ತೆರಳಿದ್ದರು. ಇತ್ತ ರಶೀದ್ ಖಾನ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಆಸ್ಟ್ರೇಲಿಯಾ ಸ್ಪಿನ್ನರ್ ಆ್ಯಡಂ ಝಂಪಾ ಅವರನ್ನು ಆಯ್ಕೆ ಮಾಡಲಾಗಿತ್ತು.

ಆದರೆ ಆ್ಯಡಂ ಝಂಪಾ ಇಂಗ್ಲೆಂಡ್ಗೆ ಪ್ರಯಾಣಿಸುವ ಮುನ್ನವೇ ಓವಲ್ ಇನ್ವಿನ್ಸಿಬಲ್ಸ್ ತಂಡ ಫೈನಲ್ಗೆ ಪ್ರವೇಶಿಸಿದೆ. ಅದರಂತೆ ಫೈನಲ್ ಪಂದ್ಯಕ್ಕಾಗಿ ಝಂಪಾ ಆಸ್ಟ್ರೇಲಿಯಾದಿಂದ ಲಂಡನ್ಗೆ ಪ್ರಯಾಣಿಸಿದ್ದಾರೆ. ಆಸ್ಟ್ರೇಲಿಯಾದಿಂದ ಲಂಡನ್ ದೂರ 17 ಸಾವಿರ ಕಿಲೋ ಮೀಟರ್.

ಅದರಂತೆ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿದ ಆ್ಯಡಂ ಝಂಪಾ 20 ಎಸೆತಗಳನ್ನು ಎಸೆದು 21 ರನ್ ನೀಡಿ 1 ವಿಕೆಟ್ ಕಬಳಿಸಿದ್ದಾರೆ. ಈ ಗೆಲುವಿನೊಂದಿಗೆ ಝಂಪಾ ಇದೀಗ ಆಸ್ಟ್ರೇಲಿಯತ್ತ ಮುಖ ಮಾಡಿದ್ದಾರೆ. ಅಂದರೆ 20 ಎಸೆತಗಳನ್ನು ಎಸೆಯಲು ಆ್ಯಡಂ ಝಂಪಾ ಪ್ರಯಾಣಿಸಿರುವುದು ಬರೋಬ್ಬರಿ 34 ಸಾವಿರ ಕಿಲೋ ಮೀಟರ್ ಎಂಬುದೇ ಅಚ್ಚರಿ.

ಆಸ್ಟ್ರೇಲಿಯಾ ಸ್ಪಿನ್ನರ್ನ ಕ್ರಿಕೆಟ್ ಮೇಲಿನ ಕಮಿಟ್ಮೆಂಟ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಸದ್ಯ ಹಂಡ್ರೆಡ್ ಲೀಗ್ ಮುಗಿಸಿರುವ ಆ್ಯಡಂ ಝಂಪಾ ಅಕ್ಟೋಬರ್ನಲ್ಲಿ ನಡೆಯಲಿರುವ ನ್ಯೂಝಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ದಿ ಹಂಡ್ರೆಡ್ ಲೀಗ್ ಫೈನಲ್: ಲಂಡನ್ನ ಲಾರ್ಡ್ಸ್ ಮೈದಾನದಲ್ಲಿ ನಡೆದ ದಿ ಹಂಡ್ರೆಡ್ ಲೀಗ್ನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಓವಲ್ ಇನ್ವಿನ್ಸಿಬಲ್ಸ್ ತಂಡವು 100 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಟ್ರೆಂಟ್ ರಾಕೆಟ್ಸ್ ತಂಡವು 100 ಎಸೆತಗಳಲ್ಲಿ 142 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡವು 26 ರನ್ಗಳ ಜಯ ಸಾಧಿಸಿ ದಿ ಹಂಡ್ರೆಡ್ ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Published On - 9:30 am, Mon, 1 September 25
