ದಿಗ್ಗಜ ತಂಡಗಳನ್ನೇ ಹಿಂದಿಕ್ಕಿದ ಅಫ್ಘಾನಿಸ್ತಾನ; ಐಸಿಸಿ ರ‍್ಯಾಂಕಿಂಗ್‌ನಲ್ಲಿ ಐತಿಹಾಸಿಕ ಸಾಧನೆ

Updated on: Nov 02, 2026 | 6:00 PM

ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ICC ಪುರುಷರ ಏಕದಿನ ಶ್ರೇಯಾಂಕದಲ್ಲಿ ಅಗ್ರ ಆರರಲ್ಲಿ ಸ್ಥಾನ ಪಡೆದಿದೆ. ಶ್ರೀಲಂಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡಗಳನ್ನು ಹಿಂದಿಕ್ಕಿ 6ನೇ ಸ್ಥಾನಕ್ಕೇರಿದೆ. ಇದು ಅಫ್ಘಾನಿಸ್ತಾನದ ಸ್ಥಿರ ಪ್ರದರ್ಶನ ಮತ್ತು ವಿಶ್ವ ಕ್ರಿಕೆಟ್‌ನಲ್ಲಿ ಅವರ ನಿರಂತರ ಪ್ರಗತಿಗೆ ಸಾಕ್ಷಿಯಾಗಿದೆ. ಈ ಅಮೋಘ ಪ್ರದರ್ಶನವು ತಂಡದ ಶ್ರಮದ ಫಲವಾಗಿದೆ.

1 / 6
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದೇ ಮೊದಲ ಬಾರಿಗೆ ಐಸಿಸಿ ಪುರುಷರ ಏಕದಿನ ತಂಡಗಳ ಶ್ರೇಯಾಂಕದಲ್ಲಿ ಅಗ್ರ ಆರರಲ್ಲಿ ಸ್ಥಾನ ಪಡೆದಿದೆ. ಮಾಜಿ ವಿಶ್ವ ಚಾಂಪಿಯನ್ ತಂಡಗಳಾದ ಶ್ರೀಲಂಕಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಹಿಂದಿಕ್ಕಿರುವ ಅಫ್ಘಾನಿಸ್ತಾನ, ಇದೀಗ ಆರನೇ ಸ್ಥಾನಕ್ಕೇರಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡದ ಈವರೆಗಿನ ಅತ್ಯುತ್ತಮ ಶ್ರೇಯಾಂಕವಾಗಿದೆ(PC-PTI).

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಇದೇ ಮೊದಲ ಬಾರಿಗೆ ಐಸಿಸಿ ಪುರುಷರ ಏಕದಿನ ತಂಡಗಳ ಶ್ರೇಯಾಂಕದಲ್ಲಿ ಅಗ್ರ ಆರರಲ್ಲಿ ಸ್ಥಾನ ಪಡೆದಿದೆ. ಮಾಜಿ ವಿಶ್ವ ಚಾಂಪಿಯನ್ ತಂಡಗಳಾದ ಶ್ರೀಲಂಕಾ, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಹಿಂದಿಕ್ಕಿರುವ ಅಫ್ಘಾನಿಸ್ತಾನ, ಇದೀಗ ಆರನೇ ಸ್ಥಾನಕ್ಕೇರಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡದ ಈವರೆಗಿನ ಅತ್ಯುತ್ತಮ ಶ್ರೇಯಾಂಕವಾಗಿದೆ(PC-PTI).

2 / 6

ಕಳೆದ ಕೆಲವು ವರ್ಷಗಳಿಂದ ಅಫ್ಘಾನಿಸ್ತಾನ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರಗತಿ ಸಾಧಿಸುತ್ತಿದೆ. 2009ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ತಂಡ, ಅಂದಿನಿಂದ ತನ್ನ ಸ್ಥಿರ ಪ್ರದರ್ಶನದ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಳ್ಳುತ್ತಿದೆ(PC-PTI).

3 / 6

ಅಫ್ಘಾನಿಸ್ತಾನ ತಂಡದ ಈ ಸಾಧನೆ ಹಲವು ಕಾರಣಗಳಿಂದ ವಿಶೇಷವಾಗಿದೆ. ಈಗಾಗಲೇ ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಹಿಂದಿಕ್ಕಿದ್ದ ಅಫ್ಘಾನಿಸ್ತಾನ, ಇದೀಗ ಶ್ರೀಲಂಕಾವನ್ನೂ ಹಿಂದಿಕ್ಕಿ ಮೊದಲ ಬಾರಿಗೆ ಅಗ್ರ ಆರು ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ(PC-PTI).

4 / 6

ತಂಡದ ನಿರಂತರ ಉತ್ತಮ ಪ್ರದರ್ಶನ ಹಾಗೂ ಬಲಿಷ್ಠ ಕ್ರಿಕೆಟ್ ರಾಷ್ಟ್ರಗಳ ವಿರುದ್ಧ ದಾಖಲಿಸಿರುವ ಐತಿಹಾಸಿಕ ಗೆಲುವುಗಳು ಈ ಯಶಸ್ಸಿಗೆ ಪ್ರಮುಖ ಕಾರಣವಾಗಿವೆ. 2009ರಲ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟ ಅಫ್ಘಾನಿಸ್ತಾನ, ಈವರೆಗೆ ಆಡಿರುವ 191 ಪಂದ್ಯಗಳಲ್ಲಿ 96 ಪಂದ್ಯಗಳನ್ನು ಗೆದ್ದಿದೆ. ಗೆಲುವು-ಸೋಲಿನ ಅನುಪಾತ 1.09ರಷ್ಟಿದ್ದು, ತಂಡದ ಪ್ರಗತಿಗೆ ಇದು ಸಾಕ್ಷಿಯಾಗಿದೆ(PC-PTI).

5 / 6

ಇತ್ತೀಚಿನ ದಿನಗಳಲ್ಲಿ ಅಫ್ಘಾನಿಸ್ತಾನ ತಂಡ ನೀಡುತ್ತಿರುವ ಅಮೋಘ ಪ್ರದರ್ಶನವೇ ಈ ಏರಿಕೆಗೆ ಪ್ರಮುಖ ಕಾರಣವಾಗಿದೆ. ಐರ್ಲೆಂಡ್ ವಿರುದ್ಧದ ವಿದೇಶಿ ಸರಣಿಯಲ್ಲಿ 4-0 ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ಇದಾದ ಬಳಿಕ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ಒಳಗೊಂಡ ತ್ರಿಕೋನ ಸರಣಿಯಲ್ಲಿ ಅಜೇಯವಾಗಿ ಅಭಿಯಾನ ಮುಗಿಸಿತ್ತು(PC-PTI).

6 / 6

ಇನ್ನು ಏಕದಿನ ಕ್ರಿಕೆಟ್ ಮಾತ್ರವಲ್ಲದೆ, ಟಿ20 ಮಾದರಿಯಲ್ಲೂ ಅಫ್ಘಾನಿಸ್ತಾನದ ಗೆಲುವಿನ ಓಟ ಮುಂದುವರಿದಿದೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಭಾನುವಾರ ಶಾರ್ಜಾದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಏಳು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸರಣಿಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡಿತು(PC-PTI).

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us