Rashid Khan: ಟೆಸ್ಟ್ ಕ್ರಿಕೆಟ್​ನಿಂದ ದೀರ್ಘ ರಜೆ ತೆಗೆದುಕೊಂಡ ರಶೀದ್ ಖಾನ್

|

Updated on: Aug 30, 2024 | 9:36 PM

Rashid Khan: ಇದೇ ಸೆಪ್ಟೆಂಬರ್ 9 ರಿಂದ ಭಾರತದ ಗ್ರೇಟರ್ ನೋಯ್ಡಾದಲ್ಲಿ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುಎ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಅಫ್ಘಾನಿಸ್ತಾನ ತಂಡವನ್ನು ಸಹ ಪ್ರಕಟಿಸಲಾಗಿದೆ. ಈ ನಡುವೆ ಅಫ್ಘಾನ್ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಪ್ಲೇಯರ್ ರಶೀದ್ ಖಾನ್ ಟೆಸ್ಟ್ ಕ್ರಿಕೆಟ್​ನಿಂದ ಧೀರ್ಘ ರಜೆ ತೆಗೆದುಕೊಂಡಿದ್ದಾರೆ.

1 / 6
ಇದೇ ಸೆಪ್ಟೆಂಬರ್ 9 ರಿಂದ ಭಾರತದ ಗ್ರೇಟರ್ ನೋಯ್ಡಾದಲ್ಲಿ ಅಫ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ನಡುಎ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಅಫ್ಘಾನಿಸ್ತಾನ ತಂಡವನ್ನು ಸಹ ಪ್ರಕಟಿಸಲಾಗಿದೆ. ಈ ನಡುವೆ ಅಫ್ಘಾನ್ ಪಾಳಯದಿಂದ ಆಘಾತಕ್ಕಾರಿ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಪ್ಲೇಯರ್ ರಶೀದ್ ಖಾನ್ ಟೆಸ್ಟ್ ಕ್ರಿಕೆಟ್​ನಿಂದ ಧೀರ್ಘ ರಜೆ ತೆಗೆದುಕೊಂಡಿದ್ದಾರೆ.

2 / 6
ವಾಸ್ತವವಾಗಿ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಬಳಿಕ ರಶೀದ್ ಖಾನ್ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ನಂತರ 4 ತಿಂಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ಇತ್ತೀಚೆಗೆ ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ತಂಡದ ಪರ ಕಣಕ್ಕಿಳಿದಿದ್ದ ರಶೀದ್, ತಮ್ಮ ನಾಯಕತ್ವದಲ್ಲಿ ತಂಡವನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದರು.

3 / 6
ಆದರೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದರೊಂದಿಗೆ ರಶೀದ್ ಖಾನ್ ಮುಂದಿನ ಕೆಲವು ತಿಂಗಳುಗಳ ಕಾಲ ಟೆಸ್ಟ್ ಮಾದರಿಯಿಂದ ದೂರವಿರಲು ನಿರ್ಧರಿಸಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮೂಲವೊಂದು ರಶೀದ್ ಮತ್ತು ತಂಡದ ಮ್ಯಾನೇಜ್‌ಮೆಂಟ್ ಅವರ ಬೆನ್ನಿನ ಸಮಸ್ಯೆಯ ದೃಷ್ಟಿಯಿಂದ ದೀರ್ಘ ಸ್ವರೂಪದ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳಲು ಪರಸ್ಪರ ನಿರ್ಧರಿಸಿದ್ದಾರೆ ಎಂದು ಹೇಳಿದೆ.

4 / 6
ವರದಿಯ ಪ್ರಕಾರ ಮುಂದಿನ ಆರು ತಿಂಗಳಿಂದ ಒಂದು ವರ್ಷದವರೆಗೆ ಟೆಸ್ಟ್ ಕ್ರಿಕೆಟ್​ನಿಂದ ರಶೀದ್ ಖಾನ್ ದೂರ ಉಳಿಯಲಿದ್ದಾರೆ. ಟೆಸ್ಟ್‌ನಲ್ಲಿ ರಶೀದ್, ಒಂದು ತುದಿಯಿಂದ ನಿರಂತರವಾಗಿ ಬೌಲ್ ಮಾಡಬೇಕಾಗುತ್ತದೆ. ಹೀಗಾಗಿ ನಿರಂತರವಾಗಿ ಬೌಲ್ ಮಾಡಲು ರಶೀದ್​ಗೆ ಸಾಧ್ಯವಿಲ್ಲ. ಅಲ್ಲದೆ ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರಶೀದ್ ಉಪಸ್ಥಿತಿ ಅವಶ್ಯಕವಾಗಿರುವುದರಿಂದ ಟೆಸ್ಟ್ ಮಾದರಿಯಿಂದ ದೂರವಿರಲು ನಿರ್ಧರಿಸಿದ್ದಾರೆ.

5 / 6
ರಶೀದ್ ಅಫ್ಘಾನಿಸ್ತಾನ ಪರ ಐದು ಟೆಸ್ಟ್, 103 ಏಕದಿನ ಮತ್ತು 93 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್​ನಲ್ಲಿ ಆಡಿರುವ ಐದು ಪಂದ್ಯಗಳಲ್ಲಿ ರಶೀದ್, 22.35 ಸರಾಸರಿಯಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರು ನಾಲ್ಕು ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

6 / 6
ಅಫ್ಘಾನಿಸ್ತಾನ ಟೆಸ್ಟ್ ತಂಡ: ಹಶ್ಮತುಲ್ಲಾ ಶಾಹಿದಿ (ನಾಯಕ), ಇಬ್ರಾಹಿಂ ಝದ್ರಾನ್, ರಿಯಾಜ್ ಹಸನ್, ಅಬ್ದುಲ್ ಮಲಿಕ್, ರಹಮತ್ ಶಾ, ಬಹಿರ್ ಶಾ ಮೆಹಬೂಬ್, ಇಕ್ರಮ್ ಅಲಿಖೇಲ್ (ವಿಕೆಟ್ ಕೀಪರ್), ಶಾಹಿದುಲ್ಲಾ ಕಮಾಲ್, ಗುಲ್ಬದಿನ್ ನೈಬ್, ಅಫ್ಸರ್ ಝಜೈ (ವಿಕೆಟ್ ಕೀಪರ್), ಅಜ್ಮತುಲ್ಲಾ, ಅಕ್ಮಾನ್ ಉಮರ್ಝಾಹಿ, ಎಸ್. ರೆಹಮಾನ್, ಖೈಸ್ ಅಹ್ಮದ್, ಜಹೀರ್ ಖಾನ್, ನಿಜತ್ ಮಸೂದ್, ಫರೀದ್ ಅಹ್ಮದ್ ಮಲಿಕ್, ನವೀದ್ ಜದ್ರಾನ್, ಖಲೀಲ್ ಅಹ್ಮದ್ ಮತ್ತು ಯಾಮ್ ಅರಬ್.