AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICC Test Rankings: ಸಾರ್ವಕಾಲಿಕ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅತ್ಯಧಿಕ ಅಂಕಗಳಿಸಿದ ಬ್ಯಾಟರ್​ ಯಾರು ಗೊತ್ತಾ?

All-Time Test Batting Rankings: ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿರುವ ಟಾಪ್-10 ಬ್ಯಾಟ್ಸ್​ಮನ್​ಗಳ ಪಟ್ಟಿ ಈ ಕೆಳಗಿನಂತಿದೆ...

TV9 Web
| Edited By: |

Updated on:Jun 22, 2023 | 10:51 PM

Share
ICC Test Rankings: ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಅಗ್ರಸ್ಥಾನವನ್ನು ಇಂಗ್ಲೆಂಡ್​ನ ಜೋ ರೂಟ್  ಅಲಂಕರಿಸಿದ್ದಾರೆ. ವಿಶೇಷ ಎಂದರೆ ರೂಟ್ ಒಟ್ಟು 887 ಅಂಕಗಳನ್ನು ಗಳಿಸಿದ್ದಾರೆ.

1 / 14
ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧದ ಮುಂದಿನ 4 ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಜೋ ರೂಟ್ ಟಾಪ್-10 ಗೆ ಎಂಟ್ರಿ ಕೊಡಬಹುದು. ಹಾಗಿದ್ರೆ ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿರುವ ಟಾಪ್-10 ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ಎಂದು ನೋಡೋಣ...

2 / 14
1- ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ): ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಡಾನ್ ಬ್ರಾಡ್ಮನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಬ್ರಾಡ್ಮನ್ ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಪಟ್ಟಿಯಲ್ಲಿ​ ಒಟ್ಟು 961 ಅಂಕಗಳನ್ನು ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

3 / 14
2- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): ಆಸೀಸ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಸ್ಟೀವ್ ಸ್ಮಿತ್ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವುದು ವಿಶೇಷ. ಒಟ್ಟು 947 ಅಂಕಗಳ ಮೂಲಕ ಸ್ಮಿತ್ ಆಲ್​ ಟೈಮ್ ಟೆಸ್ಟ್ ಬ್ಯಾಟರ್​ಗಳ ರ್ಯಾಂಕಿಂಗ್​ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

4 / 14
3- ಲೆನ್ ಹಟ್ಟನ್ (ಇಂಗ್ಲೆಂಡ್): 1937 ರಿಂದ 1955 ರವರೆಗೆ ಇಂಗ್ಲೆಂಡ್ ಪರ ಆಡಿದ್ದ ಲೆನ್ ಹಟ್ಟನ್ ಒಟ್ಟು 945 ಅಂಕಗಳನ್ನು ಪಡೆದಿದ್ದರು. ಈ ಮೂಲಕ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

5 / 14
4- ಜ್ಯಾಕ್ ಹಾಬ್ಸ್ (ಇಂಗ್ಲೆಂಡ್): 1908 ರಿಂದ 1930 ರವರೆಗೆ ಇಂಗ್ಲೆಂಡ್ ಪರ ಬ್ಯಾಟ್ ಬೀಸಿದ್ದ ಜ್ಯಾಕ್ ಹಾಬ್ಸ್ ಒಟ್ಟು 942 ಅಂಕಗಳಿಸಿದ್ದರು. ಅಲ್ಲದೆ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

6 / 14
5- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): ಪಂಟರ್ ಖ್ಯಾತಿಯ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 2006 ರಲ್ಲಿ ಒಟ್ಟು 942	ಅಂಕ ಪಡೆದಿದ್ದರು. ಈ ಮೂಲಕ ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ.

7 / 14
6- ಪೀಟರ್ ಮೇ (ಇಂಗ್ಲೆಂಡ್): 1956 ರಲ್ಲಿ ಇಂಗ್ಲೆಂಡ್​ನ ಬ್ಯಾಟರ್ ಪೀಟರ್ ಮೇ ಒಟ್ಟು 941 ಅಂಕಗಳನ್ನು ಪಡೆದಿದ್ದರು. ಈ ಮೂಲಕ ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.

8 / 14
7- ಗ್ಯಾರಿ ಸೋಬರ್ಸ್​ (ವೆಸ್ಟ್ ಇಂಡೀಸ್): 1954 ರಿಂದ 1974 ರವರೆಗೆ ವೆಸ್ಟ್ ಇಂಡೀಸ್ ಪರ ಆಡಿದ್ದ ಗ್ಯಾರಿ ಸೋಬರ್ಸ್ ಒಟ್ಟು 938 ಅಂಕಗಳಿಸಿದ್ದರು. ಈ ಸರ್ವಶ್ರೇಷ್ಠ ಸಾಧನೆಯೊಂದಿಗೆ ಸೋಬರ್ಸ್ 7ನೇ ಸ್ಥಾನ ಅಲಂಕರಿಸಿದ್ದಾರೆ.

9 / 14
8- ಕುಮಾರ ಸಂಗಾಕ್ಕರ (ಶ್ರೀಲಂಕಾ): 2007 ರಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಾಕ್ಕರ ಒಟ್ಟು 938 ಅಂಕಗಳನ್ನು ಗಳಿಸಿದ್ದರು. ಈ ಮೂಲಕ ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದ್ದಾರೆ.

10 / 14
9- ಕ್ಲೈಡ್ ವಾಲ್ಕಾಟ್ (ವೆಸ್ಟ್ ಇಂಡೀಸ್): 1955 ರಲ್ಲಿ ವೆಸ್ಟ್ ಇಂಡೀಸ್​ನ ಕ್ಲೈಡ್ ವಾಲ್ಕಾಟ್ ಶ್ರೇಯಾಂಕ ಪಟ್ಟಿಯಲ್ಲಿ 938 ಅಂಕಗಳಿಸಿದ್ದರು. ಈ ಮೂಲಕ ಟಾಪ್-10 ಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದ್ದಾರೆ.

11 / 14
10- ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್): ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ವಿವ್ ರಿಚರ್ಡ್ಸ್ 1981ರ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 938 ಅಂಕಗಳನ್ನು ಪಡೆದಿದ್ದರು. ಈ ಮೂಲಕ ಟಾಪ್-10 ರಲ್ಲಿ ಕೊನೆಯ ಸ್ಥಾನ ಅಲಂಕರಿಸಿದ್ದಾರೆ.

12 / 14
11- ವಿರಾಟ್ ಕೊಹ್ಲಿ (ಭಾರತ): ಸಾರ್ವಕಾಲಿಕ ಟೆಸ್ಟ್​​ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಅತ್ಯಧಿಕ ಅಂಕಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ 2018 ರಲ್ಲಿ ಒಟ್ಟು 937 ಅಂಕಗಳನ್ನು ಪಡೆದಿದ್ದರು. ಅಲ್ಲದೆ ಈ ಪಟ್ಟಿಯಲ್ಲಿ 11ನೇ ಸ್ಥಾನ ಅಲಂಕರಿಸಿದ್ದಾರೆ.

13 / 14
ಇದೀಗ 887 ಅಂಕಗಳನ್ನು ಪಡೆದಿರುವ ಜೋ ರೂಟ್ ಆ್ಯಶಸ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೆ ಸಾರ್ವಕಾಲಿಕ ಟೆಸ್ಟ್ ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್-10 ರಲ್ಲಿ ಕಾಣಿಸಿಕೊಳ್ಳಬಹುದು.

14 / 14

Published On - 8:30 pm, Thu, 22 June 23

ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ​​ಜೋಶಿ ಟಕ್ಕರ್

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ

ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ

ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ

ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ