AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೀಗೆ ಔಟಾಗಿದ್ದು ಇದೇ ಮೊದಲು..!

Australia vs England: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಪ್ರತಿಷ್ಠಿತ ಆ್ಯಶಸ್ ಸರಣಿ ಶುರುವಾಗಿದೆ. ಪರ್ತ್​ನಲ್ಲಿ ನಡೆಯುತ್ತಿರುವ ಈ ಸರಣಿಯ ಮೊದಲ ಮ್ಯಾಚ್​ನಲ್ಲೇ ಹೊಸ ಇತಿಹಾಸ ನಿರ್ಮಾಣವಾಗಿದೆ. ಹೀಗೆ ಹೊಸ ಇತಿಹಾಸ ಸೃಷ್ಟಿಸಿದ್ದು ಮಿಚೆಲ್ ಸ್ಟಾರ್ಕ್​​ ಹಾಗೂ ಜೋಫ್ರಾ ಆರ್ಚರ್. ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿದ್ದು ಮಾತ್ರ ಝಾಕ್ ಕ್ರಾಲಿ ಮತ್ತು ಜೇಕ್ ವೆದರಾಲ್ಡ್​.

ಝಾಹಿರ್ ಯೂಸುಫ್
|

Updated on: Nov 22, 2025 | 10:56 AM

Share
ಟೆಸ್ಟ್ ಕ್ರಿಕೆಟ್ ಶುರುವಾಗಿ ಬರೋಬ್ಬರಿ 148 ವರ್ಷಗಳಾಗಿವೆ. ಈ 148 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಮೂರು ಇನಿಂಗ್ಸ್​ನಲ್ಲೂ ಆರಂಭಿಕ ದಾಂಡಿಗರು ಸೊನ್ನೆ ಸುತ್ತಿದ್ದಾರೆ. ಅಂದರೆ ಟೆಸ್ಟ್​ ಪಂದ್ಯದ ಮೊದಲ ಮೂರು ಇನಿಂಗ್ಸ್​ನಲ್ಲಿ ಆರಂಭಿಕ ಜೊತೆಯಾಟ ಮೂಡಿಬರದೇ ಇರುವುದು ಇದೇ ಮೊದಲು.

1 / 6
ಪರ್ತ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್​ ಆರಂಭಿಕ ಆಘಾತ ನೀಡಿದ್ದರು. ಈ ಪಂದ್ಯದ ಮೊದಲ ಓವರ್​ನ 6ನೇ ಎಸೆತದಲ್ಲೇ ಝಾಕ್ ಕ್ರಾಲಿ (0) ವಿಕೆಟ್ ಕಬಳಿಸಿದ್ದರು.

2 / 6
ಇದಾದ ಬಳಿಕ ಆಸ್ಟ್ರೇಲಿಯಾ ತಂಡದ ಮೊದಲ ಇನಿಂಗ್ಸ್​ನ ಮೊದಲ ಓವರ್​ನಲ್ಲೇ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಘಾತ ನೀಡಿದ್ದರು. ಮೊದಲ ಓವರ್​ನ 2ನೇ ಎಸೆತದಲ್ಲೇ ಜೇಕ್ ವೆದರಾಲ್ಡ್ (0) ವಿಕೆಟ್ ಕಬಳಿಸಿ ಆರ್ಚರ್ ಇಂಗ್ಲೆಂಡ್ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟಿದ್ದರು.

3 / 6
ಇನ್ನು ದ್ವಿತೀಯ ಇನಿಂಗ್ಸ್​ನ ಮೊದಲ ಓವರ್​ನಲ್ಲೇ ಆಂಗ್ಲ ಪಡೆಗೆ ಮಿಚೆಲ್ ಸ್ಟಾರ್ಕ್ ಬಿಗ್ ಶಾಕ್ ನೀಡಿದರು. ಈ ಬಾರಿ ಕೂಡ ಸ್ಟಾರ್ಕ್​ ಬಲೆಗೆ ಬಿದ್ದದ್ದು ಝಾಕ್ ಕ್ರಾಲಿ. ದ್ವಿತೀಯ ಇನಿಂಗ್ಸ್​ನ ಮೊದಲ ಓವರ್​ನ 5ನೇ ಎಸೆತದಲ್ಲೇ ಕ್ರಾಲಿಯನ್ನು ಎಲ್​ಬಿಡಬ್ಲ್ಯೂ ಮಾಡುವಲ್ಲಿ ಮಿಚೆಲ್ ಸ್ಟಾರ್ಕ್​ ಯಶಸ್ವಿಯಾಗಿದ್ದಾರೆ.

4 / 6
ಅಂದರೆ ಈ ಪಂದ್ಯದ ಮೊದಲ ಮೂರು ಇನಿಂಗ್ಸ್​ನಲ್ಲೂ ಆರಂಭಿಕ ಜೋಡಿಯ ಜೊತೆಯಾಟ ಬಂದಿರಲಿಲ್ಲ. ಮೂರು ಇನಿಂಗ್ಸ್​ನಲ್ಲೂ ಓರ್ವ ಆರಂಭಿಕ ಶೂನ್ಯಕ್ಕೆ ಔಟಾಗಿದ್ದಾರೆ. ಹೀಗೆ ಪಂದ್ಯವೊಂದರ ಮೂರು ಇನಿಂಗ್ಸ್​ಗಳಲ್ಲೂ ಒಂದೇ ರನ್ನಿನ ಆರಂಭಿಕ ಜೊತೆಯಾಟ ಮೂಡಿಬರದೇ ಟೆಸ್ಟ್ ಪಂದ್ಯ ನಡೆದಿರುವುದು ಇದೇ ಮೊದಲು.

5 / 6
ಕಳೆದ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಯಾವತ್ತೂ ಮೂರು ಇನಿಂಗ್ಸ್​ನಲ್ಲೂ ತಂಡದ ಸ್ಕೋರ್ ಖಾತೆ ತೆರೆಯುವ ಮುನ್ನವೇ ಆರಂಭಿಕ ದಾಂಡಿಗ ಔಟಾದ ನಿದರ್ಶನವಿಲ್ಲ. ಇದೀಗ ಝಾಕ್ ಕ್ರಾಲಿ (2 ಇನಿಂಗ್ಸ್​ಗಳಲ್ಲೂ) ಹಾಗೂ ಜೇಕ್ ವೆದರಾಲ್ಡ್ ಸೊನ್ನೆ ಸುತ್ತುವ ಮುನ್ನವ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

6 / 6
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ

ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು

ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್

ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?

ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!

ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್

ಅಲ್ಲಾ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ: ಮುಫ್ತಿ

ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಂ ಮನೆಯಲ್ಲಿ ಪ್ರಸಾದ ವ್ಯವಸ್ಥೆ

ಬೆಳಗಾವಿ ಉತ್ಸವದಲ್ಲಿ ಡಾಲಿ ಮಾಸ್ ಡೈಲಾಗ್; ಅಭಿಮಾನಿಗಳ ಖುಷಿ ನೋಡಿ..

2026ರಲ್ಲಿ ಮೀನ ರಾಶಿಗೆ ಸಾಡೇಸಾತಿ ಇದ್ದರೂ, ಆರ್ಥಿಕ ಚೇತರಿಕೆ, ಆಸ್ತಿ ಯೋಗ