ಕಾಂಗರೂಗಳನ್ನು ಅವರ ನೆಲದಲ್ಲಿ ಮಣಿಸಿ ಭಾರತದ ದಾಖಲೆ ಸರಿಗಟ್ಟಿದ ಇಂಗ್ಲೆಂಡ್‌

Updated on: Dec 27, 2025 | 4:02 PM

Ashes 4th Test: ಆಶಸ್ ಸರಣಿಯ 4ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದೆ. ಇದು ಕಾಂಗರೂಗಳ ನಾಡಿನಲ್ಲಿ 15 ವರ್ಷಗಳ ನಂತರ ಇಂಗ್ಲೆಂಡ್‌ಗೆ ದೊರೆತ ಮೊದಲ ಟೆಸ್ಟ್ ವಿಜಯವಾಗಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ದಾಖಲೆಯನ್ನು ಸರಿಗಟ್ಟಿದೆ. 2011ರ ನಂತರ ಆಸ್ಟ್ರೇಲಿಯಾದಲ್ಲಿ ಗೆದ್ದಿದ್ದು ತಂಡಕ್ಕೆ ದೊಡ್ಡ ನೈತಿಕ ಸ್ಥೈರ್ಯ ತಂದಿದೆ.

1 / 5
ಆಶಸ್ ಸರಣಿಯಲ್ಲಿ ಸತತ 3 ಪಂದ್ಯಗಳನ್ನು ಸೋತು, ಸರಣಿಯನ್ನು ಕಳೆದುಕೊಂಡಿದ್ದ ಇಂಗ್ಲೆಂಡ್‌ ತಂಡ 4ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಸೋಲಿನ ಸರಣಿಯನ್ನು ಅಂತ್ಯಗೊಳಿಸಿದೆ. ಆತಿಥೇಯ ಆಸ್ಟ್ರೇಲಿಯಾವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಇಂಗ್ಲೆಂಡ್‌, ಕಾಂಗರೂಗಳ ನಾಡಲ್ಲಿ 15 ವರ್ಷಗಳ ನಂತರ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತು. ಇದಕ್ಕೂ ಮೊದಲು, ಇಂಗ್ಲೆಂಡ್ 2011 ರಲ್ಲಿ ನಡೆದ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾವನ್ನು ಅವರದ್ದೇ ನೆಲದಲ್ಲಿ ಮಣಿಸಿತ್ತು.

2 / 5
ಈ ಗೆಲುವಿನೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯಧಿಕ ಗೆಲುವು ಸಾಧಿಸಿದ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದೆ. ಈ ಮೂಲಕ ಭಾರತದ ದಾಖಲೆಯನ್ನು ಸರಿಗಟ್ಟಿದೆ. ಎರಡೂ ತಂಡಗಳು ಡಬ್ಲ್ಯೂಟಿಸಿಯಲ್ಲಿ ಒಟ್ಟು 35 ಪಂದ್ಯಗಳನ್ನು ಗೆದ್ದಿದ್ದು, ಒಟ್ಟು 39 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ, ಡಬ್ಲ್ಯೂಟಿಸಿಯಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ದಾಖಲೆಯನ್ನು ಹೊಂದಿದೆ.

3 / 5
ಮೇಲೆ ಹೇಳಿದಂತೆ ಸುಮಾರು 15 ವರ್ಷಗಳ ನಂತರ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿದೆ. ಇದಕ್ಕೂ ಮೊದಲು 2011 ರ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿದ್ದ ಆಗಿನ ಇಂಗ್ಲೆಂಡ್‌ ತಂಡವನ್ನು ಆಂಡ್ರ್ಯೂ ಸ್ಟ್ರಾಸ್ ಮುನ್ನಡೆಸಿದ್ದರು. ಆ ಟೆಸ್ಟ್ ಪಂದ್ಯದಲ್ಲಿ ಅಲಸ್ಟೈರ್ ಕುಕ್ ಅದ್ಭುತ ಪ್ರದರ್ಶನ ನೀಡಿ 189 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಅಂದಿನಿಂದ ಇಂಗ್ಲೆಂಡ್ ಕಾಂಗರೂಗಳ ನಾಡಲ್ಲಿ ಟೆಸ್ಟ್ ಪಂದ್ಯ ಗೆದ್ದಿರಲಿಲ್ಲ.

4 / 5
ಇನ್ನು ಈ ಪಂದ್ಯದಲ್ಲಿ  ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಆಸೀಸ್ 152 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಟಂಗ್ ಐದು ವಿಕೆಟ್‌ಗಳನ್ನು ಪಡೆದರೆ, ಇತ್ತ ಇಂಗ್ಲೆಂಡ್‌ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 110 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 42 ರನ್‌ಗಳ ಮುನ್ನಡೆ ಪಡೆದುಕೊಂಡಿತು.

5 / 5
ಎರಡನೇ ಇನ್ನಿಂಗ್ಸ್‌ನಲ್ಲಿ, ಇಂಗ್ಲೆಂಡ್ ಪರ ಬೌಲಿಂಗ್​ನಲ್ಲಿ ಮಿಂಚಿದ ಬ್ರೈಡನ್ ಕಾರ್ಸ್ ನಾಲ್ಕು ವಿಕೆಟ್‌ಗಳನ್ನು ಪಡೆದರೆ, ಬೆನ್ ಸ್ಟೋಕ್ಸ್ ಮೂರು ವಿಕೆಟ್‌ಗಳನ್ನು ಗಳಿಸಿದರು. ಹೀಗಾಗಿ ಆಸ್ಟ್ರೇಲಿಯಾ 132 ರನ್‌ಗಳಿಗೆ ಆಲೌಟ್ ಆಗಿ, ಇಂಗ್ಲೆಂಡ್ ಗೆಲುವಿಗೆ 175 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ಜ್ಯಾಕ್ ಕ್ರಾಲಿ (37), ಬೆನ್ ಡಕೆಟ್ (34) ಮತ್ತು ಜಾಕೋಬ್ ಬೆಥೆಲ್ (40) ನಿರ್ಣಾಯಕ ಇನ್ನಿಂಗ್ಸ್‌ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.