- Kannada News Photo gallery Cricket photos Ashwin takes hilarious picture of Axar, Patel, Ravindra and Jadeja
20, 24, 8, 8: ಭಾರತ-ನ್ಯೂಜಿಲೆಂಡ್ ಆಟಗಾರರ ಈ ಫೋಟೋ ವಿಶೇಷತೆಯೇನು ಗೊತ್ತಾ?
India vs New zealand: ಮೂರನೇ ದಿನದಾಟ 140 ರನ್ಗಳಿಸಿದ್ದ ನ್ಯೂಜಿಲೆಂಡ್ ನಾಲ್ಕನೇ ದಿನದಾಟದ ಮೊದಲ ಸೆಷನ್ನಲ್ಲೇ ಆಲೌಟ್ ಆಗಿದ್ದು ವಿಶೇಷ. ಜಯಂತ್ ಯಾದವ್ ಅವರ ಸ್ಪಿನ್ ಮೋಡಿಗೆ ಯಾವುದೇ ಬ್ಯಾಟ್ಸ್ಮನ್ಗಳಿಗೂ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಅದರಂತೆ 167 ರನ್ಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿದೆ.
Updated on: Dec 06, 2021 | 2:55 PM

ಭಾರತ-ನ್ಯೂಜಿಲೆಂಡ್ ವಿರುದ್ದ 2ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. 2ನೇ ಇನಿಂಗ್ಸ್ನಲ್ಲಿ 540 ರನ್ಗಳ ಗುರಿ ಪಡೆದ ನ್ಯೂಜಿಲೆಂಡ್ 4ನೇ ದಿನದಾಟದಲ್ಲೇ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿದೆ.

ಮೂರನೇ ದಿನದಾಟ 140 ರನ್ಗಳಿಸಿದ್ದ ನ್ಯೂಜಿಲೆಂಡ್ ನಾಲ್ಕನೇ ದಿನದಾಟದ ಮೊದಲ ಸೆಷನ್ನಲ್ಲೇ ಆಲೌಟ್ ಆಗಿದ್ದು ವಿಶೇಷ. ಜಯಂತ್ ಯಾದವ್ ಅವರ ಸ್ಪಿನ್ ಮೋಡಿಗೆ ಯಾವುದೇ ಬ್ಯಾಟ್ಸ್ಮನ್ಗಳಿಗೂ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಲಿಲ್ಲ. ಅದರಂತೆ 167 ರನ್ಗೆ ಆಲೌಟ್ ಆಗಿ ಹೀನಾಯ ಸೋಲನುಭವಿಸಿದೆ.

ಇತ್ತ ಭಾರತ ತಂಡವು 372 ರನ್ಗಳ ಜಯ ಸಾಧಿಸುವ ಮೂಲಕ ದಾಖಲೆಯ ಗೆಲುವನ್ನು ತನ್ನದಾಗಿಸಿಕೊಂಡಿದೆ. ಅಷ್ಟೇ ಅಲ್ಲದೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಟೀಮ್ ಇಂಡಿಯಾ ಪರ ಅಶ್ವಿನ್ ಹಾಗೂ ಜಯಂತ್ ಯಾದವ್ ತಲಾ 4 ವಿಕೆಟ್ ಪಡೆದು ಮಿಂಚಿದ್ದಾರೆ.

ಈ ಭರ್ಜರಿ ಸರಣಿ ಗೆಲುವಿನ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋ ವೈರಲ್ ಆಗಲು ಕಾರಣ, ನಾಲ್ವರು ಆಟಗಾರರ ಒಂದೇ ಹೆಸರು. ಹೌದು, ಟೀಮ್ ಇಂಡಿಯಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಹಾಗೂ ನ್ಯೂಜಿಲೆಂಡ್ ಎಜಾಝ್ ಪಟೇಲ್ ಹಾಗೂ ರಚಿನ್ ರವೀಂದ್ರ ಈ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇಲ್ಲಿ ಅಕ್ಷರ್ ಹಾಗೂ ಎಜಾಝ್ ಅವರ ಸರ್ನೇಮ್ ಪಟೇಲ್ ಆಗಿದ್ದರೆ, ಅತ್ತ ಜಡೇಜಾ ಮೊದಲ ಹೆಸರು ರವೀಂದ್ರ ಹಾಗೆಯೇ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ಅವರ ಸರ್ ನೇಮ್ ಕೂಡ ರವೀಂದ್ರ...ಹೀಗಾಗಿ ಈ ನಾಲ್ವರನ್ನು ನಿಲ್ಲಿಸಿ ಇಬ್ಬರ ಹೆಸರಿನ ಫೋಟೋ ಕ್ಲಿಕ್ಕಿಸಿದ್ದಾರೆ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್. ಇದೀಗ ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅಂದಹಾಗೆ ಎಜಾಝ್ ಪಟೇಲ್ ಹಾಗೂ ರಚಿನ್ ರವೀಂದ್ರ ಭಾರತೀಯ ಮೂಲದ ನ್ಯೂಜಿಲೆಂಡ್ ಕ್ರಿಕೆಟಿಗರು ಎಂಬುದು ವಿಶೇಷ.
