- Kannada News Photo gallery Cricket photos Asia Cup 2025:5 indian Players play 1st T20I Match against pakistan
IND vs PAK: ಪಾಕ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದ್ದಾರೆ ಭಾರತದ ಈ ಐವರು ಆಟಗಾರರು
India vs Pakistan Asia Cup 2025: ಸೆಪ್ಟೆಂಬರ್ 14 ರಂದು ನಡೆಯುವ ಏಷ್ಯಾಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಭಾರತ ತಂಡದಲ್ಲಿ ಹಲವು ಆಟಗಾರರು ಪಾಕಿಸ್ತಾನ ವಿರುದ್ಧ ತಮ್ಮ ಮೊದಲ ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡಲಿದ್ದಾರೆ. ಇದರಲ್ಲಿ ಐದು ಆಟಗಾರರು ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಈ ಪಂದ್ಯ ಭಾರತಕ್ಕೆ ಸೂಪರ್-4 ಹಂತಕ್ಕೆ ಪ್ರವೇಶಿಸಲು ಅತ್ಯಂತ ಮಹತ್ವದ್ದಾಗಿದೆ.
Updated on: Sep 13, 2025 | 5:31 PM

ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾಕಪ್ ಪಂದ್ಯ ನಡೆಯಲಿದೆ. ಇದು ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಎರಡನೇ ಪಂದ್ಯವಾಗಿದ್ದು, ಭಾರತೀಯ ತಂಡವು ಸೂಪರ್ -4 ಗೆ ಟಿಕೆಟ್ ಪಡೆಯುವತ್ತ ಗಮನ ಹರಿಸಿದೆ. ಎರಡೂ ತಂಡಗಳು ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ, ಟೀಂ ಇಂಡಿಯಾದ ಕೆಲವು ಆಟಗಾರರು ಪಾಕ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನಾಡಲಿದ್ದಾರೆ.

ಈ ಬಾರಿ ಭಾರತ ತಂಡದಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಒಂದು ಟಿ20 ಅಂತರರಾಷ್ಟ್ರೀಯ ಪಂದ್ಯವನ್ನು ಆಡದ ಎಂಟು ಆಟಗಾರರು ಇದ್ದಾರೆ. ಅವರಲ್ಲಿ ಶುಭ್ಮನ್ ಗಿಲ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ರಿಂಕು ಸಿಂಗ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಕುಲದೀಪ್ ಯಾದವ್ ಮತ್ತು ಹರ್ಷಿತ್ ರಾಣಾ ಸೇರಿದ್ದಾರೆ.

ಅಂತಹ ಪರಿಸ್ಥಿತಿಯಲ್ಲಿ, ಈ ಬಾರಿ ಭಾರತದ ಅನೇಕ ಆಟಗಾರರು ಪಾಕಿಸ್ತಾನ ವಿರುದ್ಧ ಮೊದಲ ಬಾರಿಗೆ ಟಿ20 ಪಂದ್ಯವನ್ನು ಆಡಲಿದ್ದಾರೆ. ಇದರಲ್ಲಿ ಪ್ಲೇಯಿಂಗ್ 11 ನಲ್ಲಿ ಆಯ್ಕೆಯಾಗಲಿರುವ ಐವರು ಆಟಗಾರರು ಪಾಕಿಸ್ತಾನ ವಿರುದ್ಧ ಚೊಚ್ಚಲ ಟಿ20ಪಂದ್ಯವನ್ನು ಆಡಲಿದ್ದಾರೆ.

ಯುಎಇ ವಿರುದ್ಧ ಆಡಿದ್ದ ಟೀಂ ಇಂಡಿಯಾದ ಪ್ಲೇಯಿಂಗ್ 11 ರಲ್ಲಿ, ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಮತ್ತು ಕುಲ್ದೀಪ್ ಯಾದವ್ ಪಾಕಿಸ್ತಾನ ವಿರುದ್ಧ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಇವರಲ್ಲಿ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಪಾಕಿಸ್ತಾನ ವಿರುದ್ಧ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಆದರೆ, ಶುಭ್ಮನ್ ಗಿಲ್ ಮತ್ತು ಕುಲ್ದೀಪ್ ಯಾದವ್ ಪಾಕಿಸ್ತಾನ ತಂಡದ ವಿರುದ್ಧ ಏಕದಿನ ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ.

ಇದನ್ನು ಹೊರತುಪಡಿಸಿ ಪಾಕಿಸ್ತಾನ ವಿರುದ್ಧ ಟಿ20 ಪಂದ್ಯಗಳನ್ನು ಆಡಿದ ಒಟ್ಟು 7 ಆಟಗಾರರು ಟೀಂ ಇಂಡಿಯಾ ತಂಡದಲ್ಲಿದ್ದಾರೆ. ಈ 7 ಆಟಗಾರರಲ್ಲಿ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ಸೇರಿದ್ದಾರೆ.

ಈ ಪೈಕಿ ಅರ್ಷದೀಪ್ ಸಿಂಗ್ ಮಾತ್ರ ಟೀಂ ಇಂಡಿಯಾದ ಕೊನೆಯ ಪಂದ್ಯದಲ್ಲಿ ಆಡುವ 11 ರ ಭಾಗವಾಗಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುತ್ತಾರರೋ, ಇಲ್ಲವೋ ಎಂಬುದು ಇನ್ನೂ ದೊಡ್ಡ ಸಸ್ಪೆನ್ಸ್ ಆಗಿದೆ.




