ಈ ಚಿತ್ರದಲ್ಲಿರುವ ವಿದೇಶಿ ಆಟಗಾರನನ್ನು ಗುರುತಿಸಬಲ್ಲಿರಾ?

WTC Final: ವಿಶೇಷ ಎಂದರೆ 34 ವರ್ಷದ ಸ್ಕಾಟ್ ಬೋಲ್ಯಾಂಡ್ ಆಸ್ಟ್ರೇಲಿಯಾ ಪರ ಇದುವರೆಗೆ ಆಡಿರುವುದು ಕೇವಲ 8 ಟೆಸ್ಟ್​ ಪಂದ್ಯಗಳನ್ನು ಮಾತ್ರ. ಅಷ್ಟರಲ್ಲಾಗಲೇ 33 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on: Jun 12, 2023 | 7:23 PM

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿದು ಆಸ್ಟ್ರೇಲಿಯಾ ತಂಡವು ಜಯಭೇರಿ ಬಾರಿಸಿದೆ. ಈ ಗೆಲುವಿನ ರೂವಾರಿಗಳೆಂದರೆ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್ ಹಾಗೂ ಸ್ಕಾಟ್ ಬೋಲ್ಯಾಂಡ್.

1 / 8
ಅದರಲ್ಲೂ ಜೋಶ್ ಹ್ಯಾಝಲ್​ವುಡ್​ ಗಾಯಗೊಂಡಿದ್ದರಿಂದ ಕಣಕ್ಕಿಳಿದಿದ್ದ ಬೋಲ್ಯಾಂಡ್ ಅತ್ಯುತ್ತಮ ದಾಳಿ ಸಂಘಟಿಸಿದ್ದರು. ವೊಬಲ್ ಎಸೆತಗಳ ಮೂಲಕ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್​ಮನ್​ಗಳನ್ನು ಕಾಡಿದ ಬೋಲ್ಯಾಂಡ್ ಇದೀಗ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ.

2 / 8
ವಿಶೇಷ ಎಂದರೆ 34 ವರ್ಷದ ಸ್ಕಾಟ್ ಬೋಲ್ಯಾಂಡ್ ಆಸ್ಟ್ರೇಲಿಯಾ ಪರ ಇದುವರೆಗೆ ಆಡಿರುವುದು ಕೇವಲ 8 ಟೆಸ್ಟ್​ ಪಂದ್ಯಗಳನ್ನು ಮಾತ್ರ. ಅಷ್ಟರಲ್ಲಾಗಲೇ 33 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು 14 ಏಕದಿನ ಪಂದ್ಯಗಳಿಂದ 16 ವಿಕೆಟ್ ಪಡೆದರೆ, 3 ಟಿ20 ಪಂದ್ಯಗಳಿಂದ 3 ವಿಕೆಟ್ ಕಬಳಿಸಿದ್ದಾರೆ.

3 / 8
ಇಲ್ಲಿ ಮತ್ತೊಂದು ಕುತೂಹಲಕಾರಿ ವಿಷಯ ಎಂದರೆ ಸ್ಕಾಟ್ ಬೋಲ್ಯಾಂಡ್ ಟೆಸ್ಟ್ ಕ್ರಿಕೆಟ್​ನಲ್ಲಿ ಕಳೆದ ವರ್ಷ ಪಾದರ್ಪಣೆ ಮಾಡಿದ್ದರೂ, 2016 ರಲ್ಲೇ ಟಿ20 ಕ್ರಿಕೆಟ್​ಗೆ ಪರಿಚಿತರಾಗಿದ್ದರು. ಅದರಲ್ಲೂ ಐಪಿಎಲ್​ನಲ್ಲೂ ಕಾಣಿಸಿಕೊಂಡಿದ್ದರು ಎಂಬುದು ವಿಶೇಷ.

4 / 8
ಹೌದು, 2016 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ಪರ ಸ್ಕಾಟ್ ಬೋಲ್ಯಾಂಡ್ 2 ಪಂದ್ಯಗಳನ್ನಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯವಾಡಿದ್ದ ಬೋಲ್ಯಾಂಡ್ 3 ಓವರ್​ಗಳಲ್ಲಿ 23 ರನ್ ನೀಡಿದ್ದರು. ಆದರೆ ಯಾವುದೇ ವಿಕೆಟ್ ಪಡೆಯುವಲ್ಲಿ ಸಫಲರಾಗಿರಲಿಲ್ಲ.

5 / 8
ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿದಿದ್ದ ಸ್ಕಾಟ್ ಬೋಲ್ಯಾಂಡ್ 4 ಓವರ್​ಗಳಲ್ಲಿ 31 ರನ್ ನೀಡಿ 2 ವಿಕೆಟ್ ಕಬಳಿಸಿ ಮಿಂಚಿದ್ದರು. ಆದರೆ ಇದಾದ ಬಳಿಕ ಅವರಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದರೊಂದಿಗೆ ಐಪಿಎಲ್ ಕೆರಿಯರ್ ಕೂಡ ಕೊನೆಗೊಂಡಿತು.

6 / 8
ಆದರೆ ಇದಾದ ಬಳಿಕ ಅವರಿಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದರೊಂದಿಗೆ ಐಪಿಎಲ್ ಕೆರಿಯರ್ ಕೂಡ ಕೊನೆಗೊಂಡಿತು.

7 / 8
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಕರಾರುವಾಕ್ ದಾಳಿ ಸಂಘಟಿಸಿ 5 ವಿಕೆಟ್ ಕಬಳಿಸಿ ಮಿಂಚಿರುವ ಸ್ಕಾಟ್ ಬೋಲ್ಯಾಂಡ್ ಮುಂಬರುವ ಐಪಿಎಲ್​ನಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

8 / 8
Follow us