AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಫ್ರಿದಿಯನ್ನೇ ಹಿಂದಿಕ್ಕಿ ಹೀನಾಯ ದಾಖಲೆ ಬರೆದ ಬಾಬರ್ ಆಝಂ

Pakistan vs Zimbabwe: ಝಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಗೆಲುವು ದಾಖಲಿಸಿದೆ. ರಾವಲ್ಪಿಂಡಿಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ 20 ಓವರ್​​ಗಳಲ್ಲಿ 147 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಪಾಕಿಸ್ತಾನ್ ತಂಡ 19.2 ಓವರ್​​ಗಳಲ್ಲಿ ಚೇಸ್ ಮಾಡುವ ಮೂಲಕ 5 ವಿಕೆಟ್​​​ಗಳ ಜಯ ಸಾಧಿಸಿದೆ.

ಝಾಹಿರ್ ಯೂಸುಫ್
|

Updated on: Nov 19, 2025 | 10:53 AM

Share
ಬಾಬರ್ ಆಝಂ (Babar Azam)  ಪಾಕ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹೀನಾಯ ದಾಖಲೆಯೊಂದನ್ನು ಬರೆದಿದ್ದಾರೆ. ಅದು ಕೂಡ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿಯ ಅನಗತ್ಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. 

1 / 5
ರಾವಲ್ಪಿಂಡಿಯಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ಝೀರೋಗೆ ಔಟಾಗಿದ್ದಾರೆ. ಹೀಗೆ ಸೊನ್ನೆ ಸುತ್ತುವುದರೊಂದಿಗೆ ಪಾಕಿಸ್ತಾನದ ಡಕ್​ಮ್ಯಾನ್​​ಗಳ ಪಟ್ಟಿಯಲ್ಲಿ ಬಾಬರ್ ಮೂರನೇ ಸ್ಥಾನಕ್ಕೇರಿದ್ದಾರೆ. ಅದು ಸಹ ಅಫ್ರಿದಿಯನ್ನು ಹಿಂದಿಕ್ಕುವ ಮೂಲಕ.

2 / 5
ಪಾಕಿಸ್ತಾನ್ ಪರ 90 ಟಿ20 ಅಂತಾರಾಷ್ಟ್ರೀಯ ಇನಿಂಗ್ಸ್ ಆಡಿರುವ ಶಾಹಿದ್ ಅಫ್ರಿದಿ 8 ಬಾರಿ ಸೊನ್ನೆಗೆ ಔಟಾಗಿದ್ದರು. ಈ ಮೂಲಕ ಪಾಕ್ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಝೀರೋಗೆ ಔಟಾದ ಬ್ಯಾಟ್ಸ್​ಮನ್​​ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದರು.

3 / 5
ಇದೀಗ ಈ ಹೀನಾಯ ದಾಖಲೆಯನ್ನು ಬಾಬರ್ ಆಝಂ ತಮ್ಮದಾಗಿಸಿಕೊಂಡಿದ್ದಾರೆ. ಪಾಕ್ ಪರ ಈವರೆಗೆ 125 ಟಿ20 ಇನಿಂಗ್ಸ್ ಆಡಿರುವ ಬಾಬರ್ 9 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಪಾಕಿಸ್ತಾನ್ ಪರ ಟಿ20 ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಬಾರಿ ಸೊನ್ನೆ ಸುತ್ತಿದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

4 / 5
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಸೈಮ್ ಅಯ್ಯೂಬ್ ಹಾಗೂ ಉಮರ್ ಅಕ್ಮಲ್. ಪಾಕ್ ಪರ 50 ಟಿ20 ಇನಿಂಗ್ಸ್ ಆಡಿರುವ ಸೈಮ್ 10 ಬಾರಿ ಝೀರೋಗೆ ಔಟಾಗಿದ್ದಾರೆ. ಇನ್ನು ಉಮರ್ ಅಕ್ಮಲ್ 79 ಇನಿಂಗ್ಸ್​ಗಳಲ್ಲಿ 10 ಬಾರಿ ಸೊನ್ನೆ ಸುತ್ತಿದ್ದಾರೆ. ಈ ಮೂಲಕ ಪಾಕ್ ತಂಡದ ಡಕ್​ಮ್ಯಾನ್ ಎನಿಸಿಕೊಂಡಿದ್ದಾರೆ.

5 / 5