
ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಆಝಂ ಏಕದಿನ ಕ್ರಿಕೆಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಸಹ 141 ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಕಲೆಹಾಕುವ ಮೂಲಕ. ಈ ಭರ್ಜರಿ ಪ್ರದರ್ಶನದೊಂದಿಗೆ ಬಾಬರ್ ಸೌತ್ ಆಫ್ರಿಕಾದ ಹಾಶಿಮ್ ಆಮ್ಲ ಹಾಗೂ ಭಾರತದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. (PC: Gettyimages)
ಭಾನುವಾರ (ಅ.18) ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ಕೇವಲ 57 ಎಸೆತಗಳಲ್ಲಿ 45 ರನ್ ಬಾರಿಸಿದ್ದರು. ಈ ನಲ್ವತ್ತೈದು ರನ್ಗಳೊಂದಿಗೆ ಬಾಬರ್ ಏಕದಿನ ಕ್ರಿಕೆಟ್ನಲ್ಲಿ 141 ಇನಿಂಗ್ಸ್ಗಳಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. (PC: Gettyimages)
ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಸೌತ್ ಆಫ್ರಿಕಾದ ಹಾಶಿಮ್ ಆಮ್ಲ ಹೆಸರಿನಲ್ಲಿತ್ತು. ಸೌತ್ ಆಫ್ರಿಕಾ ಪರ 181 ಏಕದಿನ ಪಂದ್ಯಗಳನ್ನಾಡಿರುವ ಹಾಶಿಮ್ 141 ಇನಿಂಗ್ಸ್ಗಳ ಮೂಲಕ 6,626 ರನ್ ಕಲೆಹಾಕಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ 141 ಇನಿಂಗ್ಸ್ಗಳಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. (PC: Gettyimages)
ಇದಾದ ಬಳಿಕ ಈ ದಾಖಲೆಯ ಸನಿಹಕ್ಕೆ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ಬಂದಿದ್ದರು. ಕಿಂಗ್ ಕೊಹ್ಲಿ 141 ಏಕದಿನ ಇನಿಂಗ್ಸ್ಗಳಲ್ಲಿ 6,224 ರನ್ ಪೇರಿಸಿದರೂ ಹಾಶಿಮ್ ಆಮ್ಲ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ. (PC: Gettyimages)
ಇದೀಗ ವಿರಾಟ್ ಕೊಹ್ಲಿ ಹಾಗೂ ಹಾಶಿಮ್ ಆಮ್ಲ ಅವರ ದಾಖಲೆಯನ್ನು ಬಾಬರ್ ಆಝಂ ಮುರಿದಿದ್ದಾರೆ. ಈವರೆಗೆ 141 ಏಕದಿನ ಇನಿಂಗ್ಸ್ ಆಡಿರುವ ಬಾಬರ್ ಒಟ್ಟು 6,671 ರನ್ ಕಲೆಹಾಕಿದ್ದಾರೆ. ಈ ಮೂಲಕ 141 ಏಕದಿನ ಇನಿಂಗ್ಸ್ಗಳಲ್ಲಿ ಗರಿಷ್ಠ ರನ್ ಪೇರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Gettyimages)