ಟಿ20 ವಿಶ್ವಕಪ್ ಆತಿಥ್ಯ ತಿರಸ್ಕರಿಸಿದ ಬಿಸಿಸಿಐ..!

Updated on: Aug 15, 2024 | 6:28 PM

Women's T20 World Cup 2024: ಅಕ್ಟೋಬರ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅನ್ನು ಭಾರತದಲ್ಲಿ ಆಯೋಜಿಸಲು ಬಿಸಿಸಿಐ ನಿರಾಕರಿಸಿದೆ ಎಂದು ಜಯ್ ಶಾ ಖಚಿತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಲ್ಲದೆ ಈ ನಿರಾಕರಣೆ ಜಯ್ ಶಾ ಕಾರಣವನ್ನೂ ನೀಡಿದ್ದು, ಭಾರತದಲ್ಲಿ ಪ್ರಸ್ತುತ ಮಾನ್ಸೂನ್‌ ನಡೆಯುತ್ತಿದೆ. ಹೀಗಾಗಿ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ ಎಂದು ಜಯ್​ ಶಾ ಹೇಳಿದ್ದಾರೆ.

1 / 5
ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಸಾರಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್‌ ಯಶಸ್ವಿಯಾಗಿ ಮುಗಿದಿದೆ. ಇದೀಗ ಮಹಿಳೆಯರ ಟಿ20 ವಿಶ್ವಕಪ್ ಸರದಿ. ಈ ಬಾರಿಯ ಮಹಿಳೆಯರ ಟಿ20 ವಿಶ್ವಕಪ್​ಗೆ ಬಾಂಗ್ಲಾದೇಶ ಆತಿಥ್ಯವಹಿಸುವ ಹಕ್ಕನ್ನು ಪಡೆದುಕೊಂಡಿದೆ. ಆದರೆ ಬಾಂಗ್ಲಾದೇಶದಲ್ಲಿ ಎದ್ದಿರುವ ಅಶಾಂತಿಯಿಂದಾಗಿ ಈ ಐಸಿಸಿ ಟೂರ್ನಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಸಾರಥ್ಯದಲ್ಲಿ ಪುರುಷರ ಟಿ20 ವಿಶ್ವಕಪ್‌ ಯಶಸ್ವಿಯಾಗಿ ಮುಗಿದಿದೆ. ಇದೀಗ ಮಹಿಳೆಯರ ಟಿ20 ವಿಶ್ವಕಪ್ ಸರದಿ. ಈ ಬಾರಿಯ ಮಹಿಳೆಯರ ಟಿ20 ವಿಶ್ವಕಪ್​ಗೆ ಬಾಂಗ್ಲಾದೇಶ ಆತಿಥ್ಯವಹಿಸುವ ಹಕ್ಕನ್ನು ಪಡೆದುಕೊಂಡಿದೆ. ಆದರೆ ಬಾಂಗ್ಲಾದೇಶದಲ್ಲಿ ಎದ್ದಿರುವ ಅಶಾಂತಿಯಿಂದಾಗಿ ಈ ಐಸಿಸಿ ಟೂರ್ನಿ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

2 / 5

ಇದಕ್ಕೆ ಪೂರಕವಾಗಿ ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಬಾಂಗ್ಲಾದೇಶದ ಬದಲು ಭಾರತ, ಶ್ರೀಲಂಕಾ ಹಾಗೂ ಯುಎಇಯಲ್ಲಿ ಟಿ20 ವಿಶ್ವಕಪ್ ಆಯೋಜಿಸಲು ಐಸಿಸಿ ತಯಾರಿ ನಡೆಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಐಸಿಸಿಯ ಈ ನಡೆಗೆ ಬಿಸಿಸಿಐ ಒಲ್ಲೆ ಎಂದಿದೆ. ಅಂದರೆ 20204 ರ ಮಹಿಳಾ ಟಿ20 ವಿಶ್ವಕಪ್ ಆತಿಥ್ಯವಹಿಸಿಕೊಳ್ಳಲು ಬಿಸಿಸಿಐ ನಿರಾಕರಿಸಿದೆ.

3 / 5

ಅಕ್ಟೋಬರ್‌ನಲ್ಲಿ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಅನ್ನು ಭಾರತದಲ್ಲಿ ಆಯೋಜಿಸಲು ಬಿಸಿಸಿಐ ನಿರಾಕರಿಸಿದೆ ಎಂದು ಜಯ್ ಶಾ ಖಚಿತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಅಲ್ಲದೆ ಈ ನಿರಾಕರಣೆ ಜಯ್ ಶಾ ಕಾರಣವನ್ನೂ ನೀಡಿದ್ದು, ಭಾರತದಲ್ಲಿ ಪ್ರಸ್ತುತ ಮಾನ್ಸೂನ್‌ ನಡೆಯುತ್ತಿದೆ. ಹೀಗಾಗಿ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ.

4 / 5

ಇದಲ್ಲದೆ ಮುಂದಿನ ಆವೃತ್ತಿಯ ಟಿ20 ವಿಶ್ವಕಪ್​ಗೆ ಭಾರತ ಆತಿಥ್ಯವಹಿಸುತ್ತಿದೆ. ಹೀಗಾಗಿ ನಾವು ವಿಶ್ವಕಪ್‌ಗಳನ್ನು ನಿರಂತರವಾಗಿ ಆಯೋಜಿಸಲು ಬಯಸುತ್ತೇವೆ ಎಂಬುದಕ್ಕೆ ಯಾವುದೇ ರೀತಿಯ ಸೂಚನೆ ನೀಡಲು ನಾನು ಬಯಸುವುದಿಲ್ಲ ಎಂದಿದ್ದಾರೆ.

5 / 5

ಇನ್ನು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮುಂಬರುವ ಟೆಸ್ಟ್ ಸರಣಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಜಯ್​ ಶಾ, ನಾವು ಇದಕ್ಕೆ ಸಂಬಂಧಿಸಿದಂತೆ ಇನ್ನು ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಮಾತನಾಡಿಲ್ಲ. ಅಲ್ಲಿ ಹೊಸ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಅವರು ನಮ್ಮನ್ನು ಸಂಪರ್ಕಿಸಬಹುದು ಅಥವಾ ನಾನು ಅವರನ್ನು ಸಂಪರ್ಕಿಸಿ ಈ ಬಗ್ಗೆ ನಿರ್ಧರಿಸುತ್ತೇವೆ. ಬಾಂಗ್ಲಾದೇಶ ಸರಣಿ ನಮಗೆ ಬಹಳ ಮುಖ್ಯವಾಗಿದೆ ಎಂದು ಜಯ್​ ಶಾ ಹೇಳಿದ್ದಾರೆ.

Loading...
Unable to load recommendations.
Follow Us