- Kannada News Photo gallery Cricket photos Cricketer Yuvraj Singh enters luxury spirits market with own brand
ಮದ್ಯ ಮಾರಾಟಕ್ಕಿಳಿದ ಯುವರಾಜ್ ಸಿಂಗ್
Yuvraj Singh: ಯುವರಾಜ್ ಸಿಂಗ್ ಗಿಂತ ಮೊದಲು, ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ದಂತಕಥೆಯ ಆಲ್‌ರೌಂಡರ್ ಇಯಾನ್ ಬೋಥಮ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್‌ನ ಮಾಜಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಕೆವಿನ್ ಪೀಟರ್ಸನ್ ಕೂಡ ಮದ್ಯ ವ್ಯವಹಾರಕ್ಕೆ ಪ್ರವೇಶಿಸಿದ್ದರು.
Updated on: Dec 09, 2025 | 2:24 PM

ಟೀಮ್ ಇಂಡಿಯಾ ಲೆಜೆಂಡ್ ಯುವರಾಜ್ ಸಿಂಗ್ (Yuvraj Singh) ಹೊಸ ಬಿಸಿನೆಸ್ಗೆ ಕೈ ಹಾಕಿದ್ದಾರೆ. ಅದು ಕೂಡ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ. ಹೌದು, ಯುವರಾಜ್ ಸಿಂಗ್ ಮದ್ಯ ಲೋಕಕ್ಕೆ ಕಾಲಿಟ್ಟಿದ್ದಾರೆ. "ಫಿನೋ" ಹೆಸರಿನ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ವೊಂದನ್ನು ಯುವಿ ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. ಗುರುಗ್ರಾಮ್‌ನಲ್ಲಿ ನಡೆದ ಹೊಸ ಬ್ರ್ಯಾಂಡ್ ಲಾಂಚಿಂಗ್ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಮೊಹಮ್ಮದ್ ಕೈಫ್ ಹಾಗೂ ಯುಜ್ವೇಂದ್ರ ಚಹಲ್ ಕಾಣಿಸಿಕೊಂಡಿದ್ದರು.

"ಫಿನೋ" ಅನ್ನು ಭಾರತದಲ್ಲಿ ಹರಿಯಾಣ, ದೆಹಲಿ, ಮಹಾರಾಷ್ಟ್ರ ಮತ್ತು ಆಯ್ದ ಸುಂಕ ರಹಿತ ಅಂಗಡಿಗಳಲ್ಲಿ ಮಾರಾಟ ಮಾಡಲಿದ್ದಾರೆ. ಈ ಮದ್ಯದ ಆರಂಭಿಕ ಬೆಲೆ ಸುಮಾರು 14,000 ರೂ. ಎಂದರೆ ನಂಬಲೇಬೇಕು. "ವೈಫಲ್ಯವು ಒಂದು ಆಯ್ಕೆಯಲ್ಲ" ಟ್ಯಾಗ್ ಲೈನ್ ಹೊಂದಿರುವ ಈ ಆಲ್ಕೋಹಾಲ್ ಉತ್ಪನ್ನವು ಈಗಾಗಲೇ ಮುಂಬೈನಲ್ಲಿ ಖರೀದಿಗೆ ಲಭ್ಯವಿದಿದೆ.

ಯುವರಾಜ್ ಸಿಂಗ್ ಗಿಂತ ಮೊದಲು, ಇಂಗ್ಲೆಂಡ್‌ನ ಮಾಜಿ ನಾಯಕ ಮತ್ತು ದಂತಕಥೆಯ ಆಲ್‌ರೌಂಡರ್ ಇಯಾನ್ ಬೋಥಮ್, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಇಂಗ್ಲೆಂಡ್‌ನ ಮಾಜಿ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಕೆವಿನ್ ಪೀಟರ್ಸನ್ ಕೂಡ ಮದ್ಯ ವ್ಯವಹಾರಕ್ಕೆ ಪ್ರವೇಶಿಸಿದ್ದರು.

ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಇಯಾನ್ ಬೋಥಮ್ ಈಗ ಒಂದು ಪ್ರಮುಖ ವೈನ್ ಕಂಪನಿಯನ್ನು ನಡೆಸುತ್ತಿದ್ದಾರೆ. 2018 ರಲ್ಲಿ ಸ್ಥಾಪಿಸಲಾದ ಈ ವೈನ್ ಕಂಪೆನಿಯು ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಮಾರಾಟವನ್ನು ವಿಸ್ತರಿಸಿಕೊಂಡಿದೆ.

ಹಾಗೆಯೇ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 'ಪಾಂಟಿಂಗ್ ವೈನ್ಸ್' ಎಂಬ ವೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅವರ ಕಂಪನಿಯ ವೈನ್‌ಗಳು ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಲಭ್ಯವಿದೆ.

ಇಂಗ್ಲೆಂಡ್‌ನ ಮಾಜಿ ವೇಗಿ ಜೇಮ್ಸ್ ಅ್ಯಂಡರ್ಸನ್ ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ. 2015 ರಲ್ಲಿ ಅ್ಯಂಡರ್ಸನ್ ' ಜಿಮ್ಮಿ ಅ್ಯಂಡರ್ಸನ್ ನಂಬರ್ ಕಲೆಕ್ಷನ್' ಹೆಸರಿನ ವೈನ್ ಪರಿಚಯಿಸಿದ್ದರು. ಈ ಕಂಪೆನಿಯ ವೈನ್‌ಗಳು ಇಂಗ್ಲೆಂಡ್ನಲ್ಲಿ ಲಭ್ಯವಿದೆ.




