David Warner: ಡೇವಿಡ್ ವಾರ್ನರ್ ನಿವೃತ್ತಿ ಘೋಷಣೆ

| Updated By: ಝಾಹಿರ್ ಯೂಸುಫ್

Updated on: Feb 10, 2024 | 10:07 AM

David Warner: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದ ಮೂಲಕ ಟಿ20 ಕ್ರಿಕೆಟ್​ನಲ್ಲಿ ಡೇವಿಡ್ ವಾರ್ನರ್ 100 ಪಂದ್ಯಗಳನ್ನಾಡಿದ ವಿಶೇಷ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಸಾಧನೆಯ ಬೆನ್ನಲ್ಲೇ ಇದೀಗ ಚುಟುಕು ಕ್ರಿಕೆಟ್​ಗೂ ವಿದಾಯ ಹೇಳಲು ಮುಂದಾಗಿರುವುದಾಗಿ ವಾರ್ನರ್ ತಿಳಿಸಿದ್ದಾರೆ.

1 / 5
ಏಕದಿನ ಮತ್ತು ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ (David Warner) ಇದೀಗ ಟಿ20 ಕ್ರಿಕೆಟ್​ಗೂ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ. ಅದಕ್ಕೂ ಮುನ್ನ ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲು ಬಯಸಿದ್ದಾರೆ.

2 / 5
ಅಂದರೆ ಮುಂಬರುವ ಟಿ20 ವಿಶ್ವಕಪ್​ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸುವುದಾಗಿ ಡೇವಿಡ್ ವಾರ್ನರ್ ತಿಳಿಸಿದ್ದಾರೆ. ಇದರೊಂದಿಗೆ 2024 ರಲ್ಲಿ ವಾರ್ನರ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನ ಕೊನೆಗೊಳ್ಳುವುದು ಖಚಿತವಾದಂತಾಗಿದೆ.

3 / 5
ಆಸ್ಟ್ರೇಲಿಯಾ ಪರ 100ನೇ ಟಿ20 ಪಂದ್ಯವಾಡಿದ ಬಳಿಕ ಮಾತನಾಡಿದ ಡೇವಿಡ್ ವಾರ್ನರ್, ವೆಸ್ಟ್ ಇಂಡೀಸ್ ವಿರುದ್ಧದ ಈ ಪ್ರದರ್ಶನ ಖುಷಿ ನೀಡಿದೆ. ಇನ್ನು ನನ್ನ ಮುಂದಿರುವುದು ಕೇವಲ ತಿಂಗಳು ಮಾತ್ರ. ಹೀಗಾಗಿ ಇದೇ ಫಾರ್ಮ್ ಅನ್ನು ಮುಂದುವರೆಸಲು ಬಯಸುತ್ತೇನೆ. ಏಕೆಂದರೆ ಟಿ20 ವಿಶ್ವಕಪ್​ ಬಳಿಕ ನಾನು ಟಿ20 ಕ್ರಿಕೆಟ್​ಗೂ ವಿದಾಯ ಹೇಳುತ್ತಿದ್ದೇನೆ ವಾರ್ನರ್ ತಿಳಿಸಿದ್ದಾರೆ.

4 / 5
37ರ ವರ್ಷದ ವಾರ್ನರ್ ಜನವರಿ 1 ರಂದು ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಅಲ್ಲದೆ ಜನವರಿ 6 ರಂದು ಕೊನೆಯ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್​ಗೂ ಗುಡ್ ಬೈ ಹೇಳಿದ್ದರು. ಇದೀಗ ಮುಂಬರುವ ಟಿ20 ವಿಶ್ವಕಪ್​ ಮೂಲಕ ಚುಟುಕು ಕ್ರಿಕೆಟ್​ಗೂ ಡೇವಿಡ್ ವಾರ್ನರ್ ನಿವೃತ್ತಿ ಘೋಷಿಸಿದ್ದಾರೆ.

5 / 5
ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡವು ಬಿ ಗ್ರೂಪ್​ನಲ್ಲಿದ್ದು, ಈ ಗುಂಪಿನಲ್ಲಿ ಇಂಗ್ಲೆಂಡ್, ನಮೀಬಿಯಾ, ಒಮಾನ್ ಮತ್ತು ಸ್ಕಾಟ್ಲೆಂಡ್​ ತಂಡಗಳಿವೆ. ಈ ತಂಡಗಳ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಈ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿರುವ ಆಸ್ಟ್ರೇಲಿಯಾ ತಂಡವು ವಾರ್ನರ್​ಗೆ ವಿಶ್ವಕಪ್ ಗೆಲುವಿನ ವಿದಾಯ ನೀಡಲಿದ್ದಾರಾ ಕಾದು ನೋಡಬೇಕಿದೆ.