Duleep Trophy 2024: ದುಲೀಪ್ ಟ್ರೋಫಿಯಲ್ಲಿ ಕನ್ನಡಿಗನ ಕಮಾಲ್; ಕೇವಲ 8 ರನ್​ಗಳಿಂದ ಶತಕ ಮಿಸ್

Updated on: Sep 13, 2024 | 6:43 PM

Devdutt Padikkal: ದುಲೀಪ್ ಟ್ರೋಫಿಯ ಮೂರನೇ ಪಂದ್ಯ ಭಾರತ ಎ ಮತ್ತು ಭಾರತ ಡಿ ನಡುವೆ ನಡೆಯುತ್ತಿದೆ. ಭಾರತ ಡಿ ಪರ ಆಡುತ್ತಿರುವ ದೇವದತ್ ಪಡಿಕ್ಕಲ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 124 ಎಸೆತಗಳನ್ನು ಎದುರಿಸಿ 15 ಬೌಂಡರಿಗಳ ಸಹಿತ 92 ರನ್ ಕಲೆಹಾಕಿದರು. ಆದರೆ ಕೇವಲ 8 ರನ್​ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಪಡಿಕ್ಕಲ್ ಅವರ ಇನ್ನಿಂಗ್ಸ್ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತದೆ.

1 / 8
ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ ಯುವ ಆಟಗಾರರು ದುಲೀಪ್ ಟ್ರೋಫಿಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಅಂತವರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಕನ್ನಡಿಗ ದೇವದತ್ ಪಡಿಕ್ಕಲ್ ಹೆಸರೂ ಸೇರಿದೆ. ಈ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ ಯುವ ಆಟಗಾರರು ದುಲೀಪ್ ಟ್ರೋಫಿಯಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಅಂತವರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಕನ್ನಡಿಗ ದೇವದತ್ ಪಡಿಕ್ಕಲ್ ಹೆಸರೂ ಸೇರಿದೆ. ಈ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಸಿಡಿಸಿ ಪಡಿಕ್ಕಲ್ ಎಲ್ಲರ ಗಮನ ಸೆಳೆದಿದ್ದಾರೆ.

2 / 8

ದುಲೀಪ್ ಟ್ರೋಫಿಯ ಮೂರನೇ ಪಂದ್ಯ ಭಾರತ ಎ ಮತ್ತು ಭಾರತ ಡಿ ನಡುವೆ ನಡೆಯುತ್ತಿದೆ. ಭಾರತ ಡಿ ಪರ ಆಡುತ್ತಿರುವ ದೇವದತ್ ಪಡಿಕ್ಕಲ್ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 124 ಎಸೆತಗಳನ್ನು ಎದುರಿಸಿ 15 ಬೌಂಡರಿಗಳ ಸಹಿತ 92 ರನ್ ಕಲೆಹಾಕಿದರು. ಆದರೆ ಕೇವಲ 8 ರನ್​ಗಳಿಂದ ಶತಕ ವಂಚಿತರಾದರು. ಆದಾಗ್ಯೂ ಪಡಿಕ್ಕಲ್ ಅವರ ಇನ್ನಿಂಗ್ಸ್ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತದೆ.

3 / 8

ಏಕೆಂದರೆ ಭಾರತ ಡಿ ತಂಡದ ಪರ ಪಡಿಕ್ಕಲ್ ಹೊರತಾಗಿ ಬೇರೆ ಯಾವ ಬ್ಯಾಟರ್​ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಾಗಲಿಲ್ಲ. ಇದಕ್ಕೆ ಉದಾಹರಣೆಯಾಗಿ ಪಡಿಕ್ಕಲ್ ಅವರ 92 ರನ್​ಗಳನ್ನು ಸೇರಿಸಿ ಇಡೀ ತಂಡ ಕೇವಲ 183 ರನ್​ಗಳಿಗೆ ಆಲೌಟ್ ಆಯಿತು.

4 / 8

ಒಂದು ವೇಳೆ ಪಡಿಕ್ಕಲ್ ಈ ಬಿಗ್ ಇನ್ನಿಂಗ್ಸ್ ಆಡಿರದಿದ್ದರೆ, ಭಾರತ ಡಿ ತಂಡದ ಸ್ಥಿತಿ ಇನ್ನು ಶೋಚನೀಯವಾಗಿರುತ್ತಿತ್ತು. ಇನ್ನು ಈ ಪಂದ್ಯದಲ್ಲಿ 92 ರನ್​ಗಳ ಸ್ಮರಣೀಯ ಇನ್ನಿಂಗ್ಸ್ ಆಡಿರುವ ಪಡಿಕ್ಕಲ್, ದುಲೀಪ್ ಟ್ರೋಫಿಯ ಮೊದಲ ಸುತ್ತಿನಲ್ಲೂ ಅರ್ಧಶತಕ ಸಿಡಿಸಿದ್ದರು.

5 / 8

2021 ರಲ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಪ್ರಾರಂಭಿಸಿದ ದೇವದತ್ ಪಡಿಕ್ಕಲ್ ಶ್ರೀಲಂಕಾ ಪ್ರವಾಸದಲ್ಲಿ ಟಿ20 ತಂಡಕ್ಕೆ ಆಯ್ಕೆಯಾಗಿದ್ದರು. ಈ ಪ್ರವಾಸದಲ್ಲಿ ಎರಡು ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದ ಅವರು 38 ರನ್ ಗಳಿಸಿದರು. ಆದರೆ ಇದಾದ ಬಳಿಕ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಸಿಗಲಿಲ್ಲ.

6 / 8

ಈ ವರ್ಷದ ಆರಂಭದಲ್ಲಿ, ದೇವದತ್ ಪಡಿಕ್ಕಲ್​ಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ 65 ರನ್ ಗಳಿಸಿದರು. ಆದರೆ ಇದೀಗ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ತಂಡದಲ್ಲಿ ಸ್ಥಾನ ನೀಡಿಲ್ಲ.

7 / 8

ದೇವದತ್ ಪಡಿಕ್ಕಲ್ ಇತ್ತೀಚಿನ ದಿನಗಳಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದುವರೆಗೆ 33 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 44.30ರ ಸರಾಸರಿಯಲ್ಲಿ 2348 ರನ್ ಗಳಿಸಿದ್ದಾರೆ. ಇದರಲ್ಲಿ 14 ಅರ್ಧಶತಕಗಳು ಮತ್ತು 6 ಶತಕಗಳು ಸೇರಿವೆ.

8 / 8

ಇದಲ್ಲದೇ, ಲಿಸ್ಟ್ ಎ ಕ್ರಿಕೆಟ್​ನಲ್ಲಿ ಇದುವರೆಗೆ 30 ಪಂದ್ಯಗಳನ್ನಾಡಿರುವ ಪಡಿಕ್ಕಲ್ 81.52 ಸರಾಸರಿಯಲ್ಲಿ 1875 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕ ಮತ್ತು 8 ಶತಕಗಳು ಸೇರಿವೆ. ಮತ್ತೊಂದೆಡೆ, ಟಿ20 ಕ್ರಿಕೆಟ್‌ನಲ್ಲಿ ಅವರು ಇಲ್ಲಿಯವರೆಗೆ 2806 ರನ್ ಗಳಿಸಿದ್ದಾರೆ.

Loading...
Unable to load recommendations.
Follow Us