Duleep Trophy 2024: ದುಲೀಪ್ ಟ್ರೋಫಿ ಮೊದಲ ಸುತ್ತಿನಿಂದ ಸೂರ್ಯಕುಮಾರ್ ಔಟ್

Updated on: Sep 02, 2024 | 10:17 PM

Suryakumar Yadav: ಸೆಪ್ಟೆಂಬರ್ 5 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಮಿಂಚಿ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಇರಾದೆಯಲ್ಲಿದ್ದ ಸೂರ್ಯಕುಮಾರ್ ಯಾದವ್​ಗೆ ಆಘಾತ ಎದುರಾಗಿದೆ. ಬುಚ್ಚಿಬಾಬು ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿದ್ದಾಗ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್ ಇದೀಗ ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನಿಂದ ಹೊರಬಿದ್ದಿದ್ದಾರೆ.

1 / 7
ಸೆಪ್ಟೆಂಬರ್ 5 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಮಿಂಚಿ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಇರಾದೆಯಲ್ಲಿದ್ದ ಸೂರ್ಯಕುಮಾರ್ ಯಾದವ್​ಗೆ ಆಘಾತ ಎದುರಾಗಿದೆ. ಬುಚ್ಚಿಬಾಬು ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿದ್ದಾಗ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್ ಇದೀಗ ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನಿಂದ ಹೊರಬಿದ್ದಿದ್ದಾರೆ.

ಸೆಪ್ಟೆಂಬರ್ 5 ರಿಂದ ಆರಂಭವಾಗಲಿರುವ ದುಲೀಪ್ ಟ್ರೋಫಿಯಲ್ಲಿ ಮಿಂಚಿ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಇರಾದೆಯಲ್ಲಿದ್ದ ಸೂರ್ಯಕುಮಾರ್ ಯಾದವ್​ಗೆ ಆಘಾತ ಎದುರಾಗಿದೆ. ಬುಚ್ಚಿಬಾಬು ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿದ್ದಾಗ ಗಾಯಗೊಂಡಿದ್ದ ಸೂರ್ಯಕುಮಾರ್ ಯಾದವ್ ಇದೀಗ ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನಿಂದ ಹೊರಬಿದ್ದಿದ್ದಾರೆ.

2 / 7

ಇತ್ತೀಚೆಗೆ ಬುಚ್ಚಿಬಾಬು ಟೂರ್ನಿಯಲ್ಲಿ ಮುಂಬೈ ಪರ ಆಡುತ್ತಿದ್ದಾಗ ಸೂರ್ಯ ಗಾಯಗೊಂಡಿದ್ದರು. ಆತನ ಕೈಗೆ ಗಾಯವಾಗಿತ್ತು. ಆರಂಭದಲ್ಲಿ ಸೂರ್ಯಕುಮಾರ್ ಅವರ ಗಾಯ ಅಷ್ಟೊಂದು ಗಂಭೀರವಾಗಿಲ್ಲ ಎಂದು ನಂಬಲಾಗಿತ್ತು. ಆದರೆ ಮೊದಲ ಸುತ್ತಿನಿಂದ ಹೊರಬಿದ್ದ ಬಳಿಕ ಭಾರತೀಯ ಅಭಿಮಾನಿಗಳ ಟೆನ್ಷನ್ ಕೊಂಚ ಹೆಚ್ಚಿದೆ.

3 / 7

ಇದಕ್ಕೆ ಕಾರಣವೂ ಇದ್ದು, ಇತ್ತೀಚೆಗಷ್ಟೇ ಸೂರ್ಯಕುಮಾರ್ ಯಾದವ್ ಭಾರತ ಟಿ20 ತಂಡದ ನಾಯಕತ್ವವಹಿಸಿಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಸೆಪ್ಟೆಂಬರ್ 19 ರಿಂದ ಬಾಂಗ್ಲಾದೇಶ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಆ ಬಳಿಕ ಅಕ್ಟೋಬರ್ 6ರಿಂದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ.

4 / 7

ಗಾಯದ ಕಾರಣ, ಸೂರ್ಯಕುಮಾರ್ ಬುಚ್ಚಿ ಬಾಬು ಅವರು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ​​XI ವಿರುದ್ಧದ ಪಂದ್ಯಾವಳಿಯ ಕೊನೆಯ ದಿನದಂದು ಆಡಲಿಲ್ಲ. ಪಿಟಿಐ ವರದಿಯ ಪ್ರಕಾರ, ಇಂಡಿಯಾ ಸಿ ಭಾಗವಾಗಿರುವ ಸೂರ್ಯ, ಸೆಪ್ಟೆಂಬರ್ 5 ರಿಂದ 8 ರವರೆಗೆ ಅನಂತಪುರದಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಯಲ್ಲಿ ಭಾರತ ಡಿ ವಿರುದ್ಧ ಆಡಬೇಕಿತ್ತು.

5 / 7

ಆದರೆ, ಸೂರ್ಯ ಈಗ ಸಂಪೂರ್ಣ ಫಿಟ್ ಆಗಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಹೋಗಲಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದಲ್ಲಿ ಭಾರತ ಎ ಮತ್ತು ಭಾರತ ಬಿ ತಂಡಗಳು ಮುಖಾಮುಖಿಯಾಗಲಿವೆ.

6 / 7

ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಪಡೆಯುವ ಕನಸು ಕಾಣುವ ಆಟಗಾರರಿಗೆ ದುಲೀಪ್ ಟ್ರೋಫಿ ಉತ್ತಮ ಅವಕಾಶವಾಗಿದೆ. ಈ ಟೂರ್ನಿಯಲ್ಲಿ ಆಟಗಾರರು ಛಾಪು ಮೂಡಿಸುವಲ್ಲಿ ಯಶಸ್ವಿಯಾದರೆ, ಬಾಂಗ್ಲಾದೇಶ ವಿರುದ್ಧದ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಅವರು ಆಯ್ಕೆಯನ್ನು ಪರಿಗಣಿಸಲಾಗುತ್ತದೆ.

7 / 7

ಹೀಗಾಗಿಯೇ ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಶುಭ್​ಮನ್ ಗಿಲ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಸೇರಿದಂತೆ ಹಲವು ಆಟಗಾರರು ಈ ಟೂರ್ನಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸದ್ಯ, ಟೆಸ್ಟ್ ತಂಡಕ್ಕೆ ಮರಳುವ ಸೂರ್ಯಕುಮಾರ್ ಅವರ ಯೋಜನೆ ವ್ಯರ್ಥವಾದಂತಿದೆ.

Loading...
Unable to load recommendations.
Follow Us