- Kannada News Photo gallery Cricket photos Empty Stands in England vs New Zealand World Cup opener Match Fans deride empty stadium
ಮೊದಲ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದವರೆಷ್ಟು? ವಿಶ್ವಕಪ್ ಇತಿಹಾಸದಲ್ಲೇ ಇದು ದಾಖಲೆ
ICC World Cup 2023: ಕ್ರಿಕೆಟ್ ಧರ್ಮ ರಾಷ್ಟ್ರ ಎನಿಸಿಕೊಳ್ಳುವ ಭಾರತದಲ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ನಡೆಯುತ್ತಿದ್ದರೂ, ಪಂದ್ಯಗಳನ್ನು ನೋಡಲು ಜನರು ಬರುತ್ತಿಲ್ಲ ಎಂಬ ವದಂತಿ ಹಬ್ಬಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ನಿರೀಕ್ಷಿತ ಪ್ರೇಕ್ಷಕರು ಬಂದಿರಲಿಲ್ಲ.
Updated on: Oct 06, 2023 | 3:23 PM

ಬರೋಬ್ಬರಿ 13 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಏಕದಿನ ವಿಶ್ವಕಪ್ ನಡೆಯುತ್ತಿದೆ. ಲೀಗ್ನ ಮೊದಲ ಪಂದ್ಯವೇ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಲೀಗ್ಗೆ ಉತ್ತಮ ಆರಂಭ ಸಿಕ್ಕಂತ್ತಾಗಿದೆ.

ಟೂರ್ನಿಯ ಮೊದಲ ಪಂದ್ಯ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 283 ರನ್ಗಳ ಗುರಿ ನೀಡಿತು.

ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ತಂಡದ ಪರ ಇಬ್ಬರು ದಾಖಲೆಯ ಶತಕ ಸಿಡಿಸಿ, ಕಳೆದ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡರು.

ಆದರೆ ಕ್ರಿಕೆಟ್ ಧರ್ಮ ರಾಷ್ಟ್ರ ಎನಿಸಿಕೊಳ್ಳುವ ಭಾರತದಲ್ಲಿ ಬರೋಬ್ಬರಿ 13 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ನಡೆಯುತ್ತಿದ್ದರೂ, ಪಂದ್ಯಗಳನ್ನು ನೋಡಲು ಜನರು ಬರುತ್ತಿಲ್ಲ ಎಂಬ ವದಂತಿ ಹಬ್ಬಲಾರಂಭಿಸಿದೆ.

ಇದಕ್ಕೆ ಪೂರಕವಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ನಿರೀಕ್ಷಿತ ಪ್ರೇಕ್ಷಕರು ಬಂದಿರಲಿಲ್ಲ. ಪಂದ್ಯದ ಆರಂಭದಲ್ಲಿ ಕಂಡು ಬಂದ ದೃಶ್ಯಗಳೇ ಹೇಳುವಂತೆ ಇಡೀ ಕ್ರೀಡಾಂಗಣ ಖಾಲಿ ಹೊಡೆಯುತ್ತಿತ್ತು.

ಇದನ್ನು ಗಮನಿಸಿದ ನೆಟ್ಟಿಗರು ತರೆಹವಾರಿ ಟ್ವೀಟ್ ಮಾಡುವ ಮೂಲಕ ಬಿಸಿಸಿಐನ ಆಯೋಜನೆಯ ಸಾಮಥ್ಯ್ರದ ಬ್ಗಗೆ ಪ್ರಶ್ನೆ ಎತ್ತಿದ್ದರು. ಇದರಲ್ಲಿ ಪಾಕ್ ಮೂಲದವರು ಸೇರಿದ್ದರು.

ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು ಇಷ್ಟು ಸಂಖ್ಯೆಯ ಪ್ರೇಕ್ಷಕರು ಮೈದಾನಕ್ಕೆ ಬಂದಿದ್ದು, ಇದೇ ಮೊದಲು ಎಂದು ವರದಿಯಾಗಿದೆ.

ವಾಸ್ತವವಾಗಿ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ಕ್ರೀಡಾಂಗಣದಲ್ಲಿ ವೀಕ್ಷಿಸಿದವರ ಸಂಖ್ಯೆ 47.518 ಎಂದು ವರದಿಯಾಗಿದೆ. ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ಇಷ್ಟು ಸಂಖ್ಯೆಯ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ವೀಕ್ಷಿಸಿರುವುದು ದಾಖಲೆಯಾಗಿದೆ.

ಆದರೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಗಮನಿಸಿದಾಗ ಮೈದಾನದಲ್ಲಿ ಪ್ರೇಕ್ಷಕರ ಕೊರತೆ ಇರುವುದು ಎದ್ದು ಕಾಣುತ್ತದೆ. ಆದರೆ ಅದಕ್ಕೆ ಪ್ರಮುಖ ಕಾರಣ ಈ ಕ್ರೀಡಾಂಗಣದ ಗಾತ್ರ.

ವಾಸ್ತವವಾಗಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ 1.32 ಲಕ್ಷ ಜನ ಕುಳಿತು ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಆದರೆ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಲು 47 ಸಾವಿರ ಜನ ಸೇರಿದ್ದು, ಮೈದಾನ ಖಾಲಿ ಇರುವಂತೆ ತೋರುತ್ತಿತ್ತು ಎಂದು ವರದಿಯಾಗಿದೆ.




