
ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಹಾಗೂ ಅಂತಿಮ ಟೆಸ್ಟ್ ಪಂದ್ಯ ಸೆಪ್ಟೆಂಬರ್ 9 ರಿಂದ ಎಡ್ಜ್ಬಾಸ್ಟನ್ನಲ್ಲಿ ಆರಂಭವಾಗಲಿದೆ. ಈಗಾಗಲೇ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಇದೀಗ ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲುವ ಇರಾದೆಯೊಂದಿಗೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಪ್ರಕಟಿಸಲಾಗಿದೆ(PC-PTI).
ಕೊನೆಯ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ 15 ಸದಸ್ಯರ ತಂಡದಿಂದ ಬ್ರೈಡನ್ ಕಾರ್ಸೆ ಅವರನ್ನು ಮತ್ತೊಮ್ಮೆ ಹೊರಗಿಡಲಾಗಿದೆ. ಹೆಡಿಂಗ್ಲೆ ಟೆಸ್ಟ್ ನಂತರ ಪಾರ್ಟಿಯಲ್ಲಿ ಭಾಗವಹಿಸಿದ್ದ ಕಾರ್ಸೆ ಜಗಳ ಮಾಡಿಕೊಂಡಿದ್ದರು. ಇದರಿಂದ ಅವರನ್ನು ಪೊಲೀಸರು ಕೈಕೋಳ ಹಾಕಿ ಬಂಧಿಸಿದ್ದರು. ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಕಾರ್ಸೆ ಅವರನ್ನು ಲಾರ್ಡ್ಸ್ ಟೆಸ್ಟ್ನಿಂದ ಕೈಬಿಡಲಾಗಿತ್ತು(PC-PTI).
ಇದೀಗ ಅವರನ್ನು ಎಡ್ಜ್‌ಬಾಸ್ಟನ್ ಟೆಸ್ಟ್ನಿಂದಲೂ ಕೈಬಿಡಲಾಗಿದೆ. ಬ್ರೈಡನ್ ಕಾರ್ಸೆ ಜೊತೆಗೆ, ವೇಗಿ ಮ್ಯಾಥ್ಯೂ ಫಿಶರ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಸೋನಿ ಬೇಕರ್ ಅವರನ್ನು 15 ಸದಸ್ಯರ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ(PC-PTI).
ಎಡ್ಜ್‌ಬಾಸ್ಟನ್ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಜೋ ರೂಟ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಸೋನಿ ಬೇಕರ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಸ್ಯಾಮ್ ಕುಕ್, ಜೋರ್ಡಾನ್ ಕಾಕ್ಸ್, ಬೆನ್ ಡಕೆಟ್, ಎಮಿಲಿಯೊ ಗೇ, ಡ್ಯಾನ್ ಲಾರೆನ್ಸ್, ಓಲಿ ಪೋಪ್, ಓಲಿ ರಾಬಿನ್ಸನ್, ಜೇಮಿ ಸ್ಮಿತ್, ಜೋಶ್ ಟಂಗ್(PC-PTI).
ಪಾಕಿಸ್ತಾನ ಈಗಾಗಲೇ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಮತ್ತು 103 ರನ್‌ಗಳಿಂದ ಸೋತಿದ್ದ ಪಾಕಿಸ್ತಾನ ಲಾರ್ಡ್ಸ್ ಟೆಸ್ಟ್ ಅನ್ನು 194 ರನ್‌ಗಳಿಂದ ಸೋತಿದೆ. ಈ ಸೋಲಿನ ನಂತರ, ಏಳು ಪಾಕಿಸ್ತಾನಿ ಆಟಗಾರರನ್ನು ಮನೆಗೆ ಕಳುಹಿಸಲಾಗಿದೆ. ಮುಖ್ಯ ಕೋಚ್ ಸರ್ಫ್ರಾಜ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ಸಹ ವಜಾಗೊಳಿಸಲಾಗಿದೆ(PC-PTI).