ಭಾರತದ ವಿರುದ್ಧ ಅತಿರೇಕ ತೋರಿದ್ದ ಪಾಕ್ ನಾಯಕಿ ವಿರುದ್ಧ ಐಸಿಸಿ ಕ್ರಮ

Updated on: Sep 07, 2026 | 6:04 PM

ಭಾರತ-ಪಾಕಿಸ್ತಾನ ಮಹಿಳಾ ಏಷ್ಯಾಕಪ್ ಪಂದ್ಯದ ನಂತರ, ಪಾಕ್ ನಾಯಕಿ ಫಾತಿಮಾ ಸನಾಗೆ ICC ದಂಡ ವಿಧಿಸಿದೆ. ಶಫಾಲಿ ವರ್ಮಾ ಔಟ್ ಆದಾಗ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಕ್ಕಾಗಿ, ಫಾತಿಮಾ ಐಸಿಸಿ ನೀತಿ ಸಂಹಿತೆ ಆರ್ಟಿಕಲ್ 2.5 ಅನ್ನು ಉಲ್ಲಂಘಿಸಿದ್ದಾರೆ. ಅವರ ಪಂದ್ಯ ಶುಲ್ಕದ 10% ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಇದು ಅವರ ಎರಡನೇ ಅಪರಾಧವಾಗಿದೆ.

1 / 6
ಮಹಿಳಾ ಟಿ20 ಏಷ್ಯಾಕಪ್​ನ 9ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಇನ್ನು ಇದೇ ಪಂದ್ಯದಲ್ಲಿ ಐಸಿಸಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ(PC-PTI).

ಮಹಿಳಾ ಟಿ20 ಏಷ್ಯಾಕಪ್​ನ 9ನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಇನ್ನು ಇದೇ ಪಂದ್ಯದಲ್ಲಿ ಐಸಿಸಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದ ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ(PC-PTI).

2 / 6

ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾರನ್ನು ಔಟ್ ಮಾಡಿದ ಬಳಿಕ ಫಾತಿಮಾ ಸನಾ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಅಲ್ಲದೆ ಪೆವಿಲಿಯನ್​ಗೆ ಹೋಗುವಂತೆ ಶಫಾಲಿ ಕಡೆಗೆ ಕೈ ಸನ್ನೆ ಮಾಡಿದ್ದರು. ಇದು ಐಸಿಸಿ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಫಾತಿಮಾ ಸನಾ ಅವರ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಹಾಗೆಯೇ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ(PC-PTI).

3 / 6

ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ, ಫಾತಿಮಾ ಸನಾ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಉಲ್ಲಂಘನೆ ಮಾಡಿದ್ದಾರೆ. ಈ ನಿಯಮವು ಔಟ್ ಆದ ಬ್ಯಾಟ್ಸ್‌ಮನ್‌ ಎದುರು ಅವಮಾನಕರ ಅಥವಾ ಆಕ್ರಮಣಕಾರಿಯಾಗಿ ವರ್ತಿಸುವುದು ಮತ್ತು ಪ್ರಚೋದಿಸುವ ಪದಗಳು, ಕ್ರಿಯೆಗಳು ಅಥವಾ ಸನ್ನೆಗಳನ್ನು ಮಾಡುವುದನ್ನು ಸೂಚಿಸುತ್ತದೆ. ಫಾತಿಮಾ ಸನಾ ಈ ನಿಯಮವನ್ನು ಉಲ್ಲಂಘಿಸಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದಿದೆ(PC-PTI).

4 / 6

ಕಳೆದ 24 ತಿಂಗಳಲ್ಲಿ ಫಾತಿಮಾ ಮಾಡಿದ ಎರಡನೇ ಅಪರಾಧ ಇದು. ಇದರೊಂದಿಗೆ ಅವರ ಡಿಮೆರಿಟ್ ಪಾಯಿಂಟ್‌ಗಳ ಸಂಖ್ಯೆ ಎರಡಕ್ಕೆ ತಲುಪಿದೆ. ಆಗಸ್ಟ್ 6, 2025 ರಂದು ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿಯೂ ಅವರು ಈ ಹಿಂದೆ ಒಂದು ಡಿಮೆರಿಟ್ ಪಾಯಿಂಟ್ ಪಡೆದಿದ್ದರು(PC-PTI).

5 / 6

ಕುತೂಹಲಕಾರಿಯಾಗಿ, ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿದರೂ, ಫಾತಿಮಾ ಅವರ ಪ್ರದರ್ಶನ ಅದ್ಭುತವಾಗಿತ್ತು. ಅವರು ಮೂರು ವಿಕೆಟ್‌ಗಳನ್ನು ಪಡೆದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಇದೀಗ ಹೀನಾಯ ಸೋಲಿನ ಆಘಾತದಲ್ಲಿದ್ದ ಫಾತಿಮಾಗೆ ದಂಡದ ಶಾಕ್ ಕೂಡ ಎದುರಾಗಿದೆ(PC-PTI).

6 / 6

ಫಾತಿಮಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಪಂದ್ಯದ ರೆಫ್ರಿ ಸುಪ್ರಿಯಾ ದಾಸ್ ವಿಧಿಸಿರುವ ಶಿಕ್ಷೆಯನ್ನು ಒಪ್ಪಿಕೊಂಡಿದ್ದಾರೆ. ಆದ್ದರಿಂದ, ಔಪಚಾರಿಕ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ. ಲೆವೆಲ್ 1 ಅಪರಾಧಗಳಿಗೆ ಅಧಿಕೃತ ಎಚ್ಚರಿಕೆ, ಆಟಗಾರ ಪಂದ್ಯ ಶುಲ್ಕದ 50 ಪ್ರತಿಶತದವರೆಗೆ ದಂಡ ಮತ್ತು ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ವಿಧಿಸಲಾಗುತ್ತದೆ(PC-PTI).

Loading...
Unable to load recommendations.
Follow Us