ಬರೋಬ್ಬರಿ ೩೭ ಸಿಕ್ಸ್… ಫಿನ್ ಅಲೆನ್ ಆರ್ಭಟ
Finn Allen Record: ಬಿಗ್ ಬ್ಯಾಷ್ ಲೀಗ್‌ನಲ್ಲಿ ಫಿನ್ ಅಲೆನ್ ಆರ್ಭಟ ಮುಂದುವರೆದಿದೆ. ಈ ಆರ್ಭಟದೊಂದಿಗೆ ಕಿವೀಸ್ ದಾಂಡಿಗ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಮತ್ತೋರ್ವ ಸ್ಫೋಟಕ ದಾಂಡಿಗ ಮಿಚೆಲ್ ಓವನ್ ಅವರ ದಾಖಲೆಯನ್ನು ಮುರಿಯುವ ಮೂಲಕ. ಆ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ....
Updated on: Jan 21, 2026 | 8:24 AM

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ (BBL 15) ನ್ಯೂಝಿಲೆಂಡ್ ಬ್ಯಾಟರ್ ಫಿನ್ ಅಲೆನ್ (Finn Allen) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ ಸಿಕ್ಸರ್ ಗಳ ಸುರಿಮಳೆಯೊಂದಿಗೆ ಎಂಬುದು ವಿಶೇಷ.

ಬಿಗ್ ಬ್ಯಾಷ್ ಲೀಗ್‌ನ ಸೀಸನ್ 15 ರ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ವಿರುದ್ಧ ಪರ್ತ್ ಸ್ಕಾಚರ್ಸ್ ಪರ ಕಣಕ್ಕಿಳಿದ ಫಿನ್ ಅಲೆನ್ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಫೋರ್ ಗಳೊಂದಿಗೆ 49 ರನ್ ಕಲೆಹಾಕಿದ್ದರು. ಈ ನಾಲ್ಕು ಸಿಕ್ಸರ್ ಗಳೊಂದಿಗೆ ಭರ್ಜರಿ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಬಾರಿಯ ಬಿಗ್ ಬ್ಯಾಷ್ ಲೀಗ್‌ನಲ್ಲಿ 10 ಇನಿಂಗ್ಸ್ ಆಡಿರುವ ಫಿನ್ ಅಲೆನ್ ಈವರೆಗೆ ಬರೋಬ್ಬರಿ 37 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಬಿಬಿಎಲ್ ಇತಿಹಾಸದಲ್ಲೇ ಸೀಸನ್ ವೊಂದರಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಮಿಚೆಲ್ ಓವನ್ ಹೆಸರಿನಲ್ಲಿತ್ತು. 2024-25 ರ ಬಿಗ್ ಬ್ಯಾಷ್ ಲೀಗ್ ಸೀಸನ್ ನಲ್ಲಿ ಬರೋಬ್ಬರಿ 36 ಸಿಕ್ಸರ್ ಸಿಡಿಸಿ ಮಿಚೆಲ್ ಓವನ್ ಈ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಫಿನ್ ಅಲೆನ್ ಅಳಿಸಿ ಹಾಕಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಸಿಕ್ಸರ್ ಗಳ ಸುರಿಮಳೆಗೈದಿರುವ ಅಲೆನ್ ಒಟ್ಟು 37 ಸಿಕ್ಸ್ ಸಿಡಿಸಿ ಬಿಗ್ ಬ್ಯಾಷ್ ಲೀಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
