Lahiru Thirimanne: ಭೀಕರ ರಸ್ತೆ ಅಪಘಾತ: ಶ್ರೀಲಂಕಾ ಕ್ರಿಕೆಟಿಗ ಆಸ್ಪತ್ರೆಗೆ ದಾಖಲು

Edited By:

Updated on: Mar 14, 2024 | 1:43 PM

Lahiru Thirimanne: 2010 ರಲ್ಲಿ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದ ತಿರಿಮನ್ನೆ ಒಟ್ಟು 197 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಅಲ್ಲದೆ 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ 34 ವರ್ಷ ಎಡಗೈ ದಾಂಡಿಗ ತಿರಿಮನ್ನೆ ವಿವಿಧ ಲೀಗ್​ಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ಲೆಜೆಂಡ್ಸ್ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲೂ ಅವರು ಕಾಣಿಸಿಕೊಂಡಿದ್ದರು.

1 / 5
ಶ್ರೀಲಂಕಾದ ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಂಕಾದ ಮಾಜಿ ಕ್ರಿಕೆಟಿಗ ಲಹಿರು ತಿರಿಮನ್ನೆ ಗಾಯಗೊಂಡಿದ್ದಾರೆ. ಮಾರ್ಚ್​ 14, ಗುರುವಾರದಂದು ಈ ಅವಘಡ ಸಂಭವಿಸಿದ್ದು, ಶ್ರೀಲಂಕಾ ಕ್ರಿಕೆಟಿಗನಿದ್ದ ಕಾರಿನ ಮುಂಭಾಗ ಜಖಂಗೊಂಡಿದೆ. ಇದೇ ವೇಳೆ ಕಾರಿನಲ್ಲಿದ್ದವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಿದ್ದಾರೆ.

ಶ್ರೀಲಂಕಾದ ಅನುರಾಧಪುರದ ತಿರಪನ್ನೆ ಎಂಬಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಲಂಕಾದ ಮಾಜಿ ಕ್ರಿಕೆಟಿಗ ಲಹಿರು ತಿರಿಮನ್ನೆ ಗಾಯಗೊಂಡಿದ್ದಾರೆ. ಮಾರ್ಚ್​ 14, ಗುರುವಾರದಂದು ಈ ಅವಘಡ ಸಂಭವಿಸಿದ್ದು, ಶ್ರೀಲಂಕಾ ಕ್ರಿಕೆಟಿಗನಿದ್ದ ಕಾರಿನ ಮುಂಭಾಗ ಜಖಂಗೊಂಡಿದೆ. ಇದೇ ವೇಳೆ ಕಾರಿನಲ್ಲಿದ್ದವರನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಿದ್ದಾರೆ.

2 / 5

ತಿರಿಮನ್ನೆ ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ನಗರದ ತಿರಪನ್ನೆ ಎಂಬಲ್ಲಿ ಅವರ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಡಿಕ್ಕಿ ರಭಸಕ್ಕೆ ಲಾರಿಯು ಉರುಳಿ ಬಿದ್ದಿರುವುದು ಕಾಣಬಹುದು. ಇದಾಗ್ಯೂ ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

3 / 5

ಪ್ರಸ್ತುತ ವರದಿಯ ಪ್ರಕಾರ, ಮಾಜಿ ಕ್ರಿಕೆಟಿಗನಿಗೆ ಕೇವಲ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

4 / 5

2010 ರಲ್ಲಿ ಶ್ರೀಲಂಕಾ ಪರ ಪಾದಾರ್ಪಣೆ ಮಾಡಿದ್ದ ತಿರಿಮನ್ನೆ ಅವರು 2022 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದಾಗ್ಯೂ ಲೀಗ್​ ಕ್ರಿಕೆಟ್​ನಲ್ಲಿ ಮುಂದುವರೆದಿರುವ ಲಹಿರು ಇತ್ತೀಚೆಗೆ ಮುಕ್ತಾಯಗೊಂಡಿದ್ದ ಲೆಜೆಂಡ್ಸ್​ ಕ್ರಿಕೆಟ್ ಟ್ರೋಫಿಯಲ್ಲೂ ಭಾಗವಹಿಸಿದ್ದರು.

5 / 5

ಶ್ರೀಲಂಕಾ ಪರ 44 ಟೆಸ್ಟ್ ಪಂದ್ಯಗಳನ್ನಾಡಿರುವ ಲಹಿರು ತಿರಿಮನ್ನೆ 3 ಶತಕಗಳೊಂದಿಗೆ 2088 ರನ್ ಕಲೆಹಾಕಿದ್ದರು. ಇನ್ನು 127 ಏಕದಿನ ಪಂದ್ಯಗಳಿಂದ 3164 ರನ್ ಬಾರಿಸಿದ್ದಾರೆ. ಈ ವೇಳೆ 4 ಶತಕ ಹಾಗೂ 21 ಅರ್ಧಶತಕಗಳನ್ನು ಸಿಡಿಸಿದ್ದರು. ಹಾಗೆಯೇ ಶ್ರೀಲಂಕಾ ಪರ 26 ಟಿ20 ಪಂದ್ಯಗಳನ್ನಾಡಿರುವ ಅವರು 291 ರನ್ ಕಲೆಹಾಕಿದ್ದರು. ಇದೀಗ ನಿವೃತ್ತರಾಗಿರುವ 34 ವರ್ಷದ ಲಹಿರು ತಿರಿಮನ್ನೆ ವಿವಿಧ ಲೀಗ್​ಗಳಲ್ಲಿ ಭಾಗವಹಿಸುತ್ತಿದ್ದಾರೆ.

Published On - 1:27 pm, Thu, 14 March 24

Loading...
Unable to load recommendations.
Follow Us