
ಟೀಮ್ ಇಂಡಿಯಾ ವಿರುದ್ಧ ನ್ಯೂಝಿಲೆಂಡ್ ದಾಂಡಿಗ ಗ್ಲೆನ್ ಫಿಲಿಪ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದೂ ಸಹ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ. ಈ ಸೆಂಚುರಿಯೊಂದಿಗೆ ಗ್ಲೆನ್ ಫಿಲಿಪ್ಸ್ ವೆಸ್ಟ್ ಇಂಡೀಸ್ ನಾಯಕ ಶಾಯ್ ಹೋಪ್ ಬರೆದಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. (PC: Gettyimages)
ಆಕ್ಲೆಂಡ್ನ ಈಡನ್ ಪಾರ್ಕ್‌ನಲ್ಲಿ ನಡೆದ ಭಾರತದ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಗ್ಲೆನ್ ಫಿಲಿಪ್ಸ್ ಕೇವಲ 49 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 6 ಫೋರ್ಗಳೊಂದಿಗೆ 107 ರನ್ ಚಚ್ಚಿದ್ದರು. ಈ 107 ರನ್ಗಳೊಂದಿಗೆ ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಫಿಲಿಪ್ಸ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. (PC: Gettyimages)
ಅಂದರೆ ಟೀಮ್ ಇಂಡಿಯಾ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ಭರ್ಜರಿ ದಾಖಲೆಯೊಂದು ಗ್ಲೆನ್ ಫಿಲಿಪ್ಸ್ ಹೆಸರಿಗೆ ಸೇರ್ಪಡೆಯಾಗಿದೆ. ಇದಕ್ಕೂ ಮುನ್ನ ಈ ದಾಖಲೆ ವೆಸ್ಟ್ ಇಂಡೀಸ್ ತಂಡದ ನಾಯಕ ಶಾಯ್ ಹೋಪ್ ಹೆಸರಿನಲ್ಲಿತ್ತು. (PC: Gettyimages)
2026 ರಲ್ಲಿ ನಡೆದ ಭಾರತದ ವಿರುದ್ಧ ಟಿ20 ಸರಣಿಯಲ್ಲಿ ಶಾಯ್ ಹೋಪ್ 4 ಇನಿಂಗ್ಸ್ಗಳ ಮೂಲಕ ಬರೋಬ್ಬರಿ 261 ರನ್ ಚಚ್ಚಿದ್ದರು. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಟಿ20 ಸರಣಿಯೊಂದರಲ್ಲಿ ಗರಿಷ್ಠ ರನ್ ಪೇರಿಸಿದ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು. (PC: Gettyimages)
ಇದೀಗ ಈ ದಾಖಲೆಯನ್ನು ಗ್ಲೆನ್ ಫಿಲಿಪ್ಸ್ ಅಳಿಸಿ ಹಾಕಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಟೀಮ್ ಇಂಡಿಯಾ ವಿರುದ್ಧದ ಸರಣಿಯ ಮೊದಲ 4 ಪಂದ್ಯಗಳ ಮೂಲಕ ಫಿಲಿಪ್ಸ್ ಬರೋಬ್ಬರಿ 276 ರನ್ (ಎರಡು ಅರ್ಧಶತಕ, ಒಂದು ಶತಕ) ಕಲೆಹಾಕಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ವಿರುದ್ಧ ಟಿ20 ಸರಣಿಯೊಂದರಲ್ಲಿ ಅತ್ಯಧಿಕ ರನ್ ಪೇರಿಸಿದ ಬ್ಯಾಟರ್ ಎಂಬ ಭರ್ಜರಿ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. (PC: Gettyimages)
ಈ ದಾಖಲೆಯ ಜೊತೆಗೆ ನ್ಯೂಝಿಲೆಂಡ್ ಪರ ಅತಿ ಹೆಚ್ಚು ಟಿ20 ಶತಕ ಸಿಡಿಸಿದ ಕಾಲಿನ್ ಮನ್ರೊ ಮತ್ತು ಫಿನ್ ಅಲೆನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇದರೊಂದಿಗೆ ನಾಲ್ಕನೇ ಕ್ರಮಾಂಕ ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಕಣಕ್ಕಿಳಿದು ಅತಿ ಹೆಚ್ಚು ಟಿ20 ಶತಕ ಬಾರಿಸಿದ ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ (3 ಶತಕ) ಅವರ ದಾಖಲೆಯನ್ನು ಕೂಡ ಗ್ಲೆನ್ ಫಿಲಿಪ್ಸ್ ಸಮಗಟ್ಟಿದ್ದಾರೆ. ಹಾಗೆಯೇ ಕಾಲಿನ್ ಮನ್ರೋ (2017) ಬಳಿಕ ಟೀಮ್ ಇಂಡಿಯಾ ವಿರುದ್ಧ ಟಿ20 ಸೆಂಚುರಿ ಸಿಡಿಸಿದ ನ್ಯೂಝಿಲೆಂಡ್ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. (PC: Gettyimages)