GT vs CSK: ಇಂದಿನ ಮ್ಯಾಚ್​ನಲ್ಲಿ RCB ಪಾಲಿಗೆ ಯಾರು ಗೆಲ್ಲಬೇಕು?

Updated on: May 21, 2026 | 10:50 AM

IPL 2026, GT vs CSK: ಐಪಿಎಲ್​ನ 66ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಣಕ್ಕಿಳಿಯಲಿವೆ. ಅಹಮದಾಬಾದ್​ನಲ್ಲಿ ನಡೆಯಲಿರುವ ಈ ಪಂದ್ಯವು ಸಿಎಸ್​ಕೆ ಪಾಲಿಗೆ ನಿರ್ಣಾಯಕ. ಏಕೆಂದರೆ ಈ ಮ್ಯಾಚ್​ನಲ್ಲಿ ಚೆನ್ನೈ ಪಡೆ ಸೋತರೆ ಐಪಿಎಲ್ ಪ್ಲೇಆಫ್​ ರೇಸ್​ನಿಂದ ಹೊರಬೀಳಲಿದೆ.

1 / 6
IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 66ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಜರುಗಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ತುಂಬಾ ಮಹತ್ವದ್ದು. (PC: IPL)

2 / 6
ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಗುಜರಾತ್ ಟೈಟಾನ್ಸ್ 18 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಕಾಯ್ದುಕೊಳ್ಳುವ ಮೂಲಕ ಮೊದಲ ಕ್ವಾಲಿಫೈಯರ್ ಆಡುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು. ಅತ್ತ ಪ್ಲೇಆಫ್ ರೇಸ್​ನಲ್ಲಿ ಉಳಿಯಬೇಕಿದ್ದರೆ ಈ ಮ್ಯಾಚ್​ನಲ್ಲಿ ಸಿಎಸ್​ಕೆ ತಂಡ ಗೆಲ್ಲಲೇಬೇಕು. (PC: IPL)

3 / 6
ಹೀಗಾಗಿ ಎರಡೂ ತಂಡಗಳಿಂದ ಈ ಮ್ಯಾಚ್​ನಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಈ ಪೈಪೋಟಿ ನಡುವೆ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಯಾರು ಗೆಲ್ಲಬೇಕು ಎಂದು ನೋಡುವುದಾದರೆ... ಚೆನ್ನೈ ಸೂಪರ್ ಕಿಂಗ್ಸ್. (PC: IPL)

4 / 6
ಅಂದರೆ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದರೆ ಆರ್​ಸಿಬಿ ತಂಡವು ಮೊದಲ ಕ್ವಾಲಿಫೈಯರ್ ಆಡುವುದು ಖಚಿತವಾಗಲಿದೆ. ಏಕೆಂದರೆ ಇಂದಿನ ಪಂದ್ಯದಲ್ಲಿ 16 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ಸೋತರೆ,  18 ಅಂಕಗಳನ್ನು ಹೊಂದಿರುವ ಆರ್​ಸಿಬಿ ಮೊದಲ ಕ್ವಾಲಿಫೈಯರ್​ಗೆ ನೇರ ಅರ್ಹತೆ ಪಡೆಯಲಿದೆ. (PC: IPL)

5 / 6
ಏಕೆಂದರೆ ಪ್ರಸ್ತುತ ಸನ್ನಿವೇಶದಲ್ಲಿ 18 ಅಂಕಗಳನ್ನು ಪಡೆಯಲು ಅವಕಾಶ ಇರುವುದು ಸನ್​ರೈಸರ್ಸ್ ಹೈದರಾಬಾದ್ ಹಾಗು ಗುಜರಾತ್ ಟೈಟಾನ್ಸ್ ತಂಡಗಳಿಗೆ ಮಾತ್ರ. ಇಲ್ಲಿ ಗುಜರಾತ್ ಟೈಟಾನ್ಸ್ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಅತ್ತ ಆರ್​ಸಿಬಿ ತಂಡವು ಕೊನೆಯ ಮ್ಯಾಚ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋತರೂ 18 ಅಂಕಗಳೊಂದಿಗೆ ಟಾಪ್-2 ನಲ್ಲೇ ಕಾಣಿಸಿಕೊಳ್ಳಲಿದೆ. (PC: IPL)

6 / 6
ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆಲ್ಲುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಈ ಮೂಲಕ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಆರ್​ಸಿಬಿ ಪಡೆ ಮೊದಲ ಕ್ವಾಲಿಫೈಯರ್ ಪಂದ್ಯವಾಡುವುದನ್ನು ಖಚಿತಪಡಿಸಿಕೊಳ್ಳಬಹುದು. (PC: IPL)

Published On - 10:41 am, Thu, 21 May 26

Follow Us