
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ಲೇಆಫ್ ಸುತ್ತಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಬೇಕಿದ್ದರೆ ಪವರ್ಪ್ಲೇನಲ್ಲೇ ಮೂರು ವಿಕೆಟ್ ಕಬಳಿಸಬೇಕು. (PC: IPL)

ಒಂದು ವೇಳೆ ಗುಜರಾತ್ ಟೈಟಾನ್ಸ್ ತಂಡದ ಈ ಮೂವರು ಬ್ಯಾಟರ್ಗಳ ವಿಕೆಟ್ ಮೊದಲ 6 ಓವರ್ಗಳಲ್ಲೇ ಸಿಕ್ಕರೆ ಆರ್ಸಿಬಿ ತಂಡ ಅರ್ಧ ಪಂದ್ಯ ಗೆದ್ದಂತೆ. ಏಕೆಂದರೆ ಈ ಬಾರಿ ಗುಜರಾತ್ ಟೈಟಾನ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿರುವುದು ಈ ಮೂವರು ಬ್ಯಾಟರ್ಗಳು ಮಾತ್ರ. ಅವರೆಂದರೆ... (PC: IPL)

ಸಾಯಿ ಸುದರ್ಶನ್: ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ದಾಂಡಿಗ ಸಾಯಿ ಸುದರ್ಶನ್ ಈ ಬಾರಿ 14 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 157.92ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಅವರು ಕಲೆಹಾಕಿರುವುದು ಬರೋಬ್ಬರಿ 638 ರನ್ಗಳು. ಇದರ ನಡುವೆ 29 ಸಿಕ್ಸ್ ಹಾಗೂ 62 ಫೋರ್ಗಳನ್ನು ಬಾರಿಸಿದ್ದಾರೆ. (PC: IPL)

ಶುಭ್ಮನ್ ಗಿಲ್: ಸಾಯಿ ಸುದರ್ಶನ್ ಜೊತೆಗೂಡಿ ಇನಿಂಗ್ಸ್ ಆರಂಭಿಸುತ್ತಿರುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್ಮನ್ ಗಿಲ್ ಈ ಬಾರಿ 161.68 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವುದು ವಿಶೇಷ. ಈ ಮೂಲಕ 14 ಇನಿಂಗ್ಸ್ಗಳಿಂದ 616 ರನ್ ಕಲೆಹಾಕಿದ್ದಾರೆ. ಇದರ ನಡುವೆ ಗಿಲ್ ಬ್ಯಾಟ್ನಿಂದ 30 ಸಿಕ್ಸ್ ಹಾಗೂ 57 ಫೋರ್ಗಳು ಮೂಡಿಬಂದಿವೆ. (PC: IPL)

ಜೋಸ್ ಬಟ್ಲರ್: ಗುಜರಾತ್ ಟೈಟಾನ್ಸ್ ಪರ 14 ಇನಿಂಗ್ಸ್ ಆಡಿರುವ ಜೋಸ್ ಬಟ್ಲರ್ 155ರ ಸ್ಟ್ರೈಕ್ ರೇಟ್ನಲ್ಲಿ ಒಟ್ಟು 469 ರನ್ ಕಲೆಹಾಕಿದ್ದಾರೆ. ಈ ವೇಳೆ 24 ಸಿಕ್ಸ್ ಹಾಗೂ 46 ಫೋರ್ಗಳನ್ನು ಬಾರಿಸಿದ್ದಾರೆ. (PC: IPL)

ಈ ಮೂವರನ್ನು ಹೊರತುಪಡಿಸಿ ಗುಜರಾತ್ ಟೈಟಾನ್ಸ್ ತಂಡದ ಯಾವುದೇ ಬ್ಯಾಟರ್ 350 ಕ್ಕಿಂತ ಹೆಚ್ಚಿನ ಸ್ಕೋರ್ಗಳಿಸಿಲ್ಲ. ಅಂದರೆ ಗುಜರಾತ್ ಟೈಟಾನ್ಸ್ ತಂಡ ಬ್ಯಾಟಿಂಗ್ ಶಕ್ತಿ ಸಾಯಿ ಸುದರ್ಶನ್, ಜೋಸ್ ಬಟ್ಲರ್ ಹಾಗೂ ಶುಭ್ಮನ್ ಗಿಲ್. ಈ ಮೂವರನ್ನು ಆರ್ಸಿಬಿ ಬೇಗನೆ ಔಟ್ ಮಾಡಿದರೆ ಅರ್ಧ ಪಂದ್ಯ ಗೆದ್ದಂತೆ. (PC: IPL)
Published On - 2:10 pm, Tue, 26 May 26