ಗಿಲ್ ಮೊದಲ ಆಯ್ಕೆಯಲ್ಲ..! ಗುಜರಾತ್‌ಗೆ ಈ 5 ಆಟಗಾರರ ಮೇಲೆ ಒಲವು
Gujarat Titans IPL 2025: ಗುಜರಾತ್ ಟೈಟಾನ್ಸ್ ತಂಡವು ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಐದು ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ಇದರಲ್ಲಿ ನಾಯಕ ಶುಭ್‌ಮನ್ ಗಿಲ್, ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಸೇರಿದ್ದಾರೆ.
Updated on: Oct 29, 2024 | 10:46 PM

ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ಯಾವ್ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತಿದೆ ಎಂಬುದರ ಬಗ್ಗೆ ಕ್ಷಣಕ್ಷಣಕ್ಕೂ ರೋಚಕತೆ ಹೆಚ್ಚಾಗುತ್ತಿದೆ. ಅದರಂತೆ ಈಗಾಗಲೇ ಯಾವ್ಯಾವ ತಂಡಗಳು ಯಾರ್ಯಾರನ್ನು ಉಳಿಸಿಕೊಳ್ಳಲಿದೆ ಎಂಬುದರ ಬಗ್ಗೆ ಒಂದು ಚಿತ್ರಣ ಸ್ಪಷ್ಟವಾಗಿದೆ. ಅದರಂತೆ 2023 ರ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡದ ಬಗ್ಗೆಯೂ ದೊಡ್ಡ ಸುದ್ದಿ ಹೊರಬಿದ್ದಿದೆ.

ಹರಾಜಿಗೂ ಮುನ್ನ ಉಳಿಸಿಕೊಳ್ಳಲು ನಿರ್ಧರಿಸಿರುವ ಐವರು ಆಟಗಾರರ ಹೆಸರನ್ನು ಗುಜರಾತ್ ಬಹುತೇಕ . ಅಂತಿಮಗೊಳಿಸಿದೆ. ಈ ಪಟ್ಟಿಯಲ್ಲಿ ನಾಲ್ಕು ಭಾರತೀಯ ಆಟಗಾರರಿದ್ದು, ಒಬ್ಬ ವಿದೇಶಿ ಆಟಗಾರನಿದ್ದಾನೆ. ಭಾರತದ ನಾಲ್ವರು ಆಟಗಾರರಲ್ಲಿ ತಂಡದ ನಾಯಕರಾಗಿದ್ದ ಶುಭ್‌ಮನ್ ಗಿಲ್ ಇರುವುದು ಖಚಿತವಾಗಿದೆ. ವರದಿಗಳ ಪ್ರಕಾರ, ತಂಡವು ಗಿಲ್ ಅವರನ್ನು ನಾಯಕನಾಗಿ ಉಳಿಸಿಕೊಳ್ಳಲು ಬಯಸಿದೆ.

ಆದರೆ ಶುಭ್‌ಮನ್ ಗಿಲ್ ತಂಡದ ಮೊದಲ ಆಯ್ಕೆಯಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ. ಗಿಲ್ಗೂ ಮುಖ್ಯವಾಗಿ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಅವರನ್ನು ಮೊದಲ ಆಯ್ಕೆಯಾಗಿ ಗುಜರಾತ್ ನೋಡುತ್ತಿದೆ ಎಂಬುದು ವರದಿಯಾಗಿದೆ. ಪಿಟಿಐ ವರದಿ ಪ್ರಕಾರ, ಗುಜರಾತ್ ಟೈಟಾನ್ಸ್ ಮೆಗಾ ಹರಾಜಿಗೂ ಮುನ್ನ ಆ ಐವರು ಆಟಗಾರರ ಹೆಸರನ್ನು ಅಂತಿಮಗೊಳಿಸಿದ್ದು, ತಂಡವು ಉಳಿಸಿಕೊಳ್ಳುವ ಉತ್ಸಾಹದಲ್ಲಿದೆ.

ಈ ಪಟ್ಟಿಯಲ್ಲಿ ಶುಭ್‌ಮನ್ ಗಿಲ್, ರಶೀದ್ ಖಾನ್ ಮತ್ತು ಸಾಯಿ ಸುದರ್ಶನ್ ಹೆಸರು ಸೇರಿದೆ. ಇದಲ್ಲದೇ ರಾಹುಲ್ ತೆವಾಟಿಯಾ ಮತ್ತು ಶಾರುಖ್ ಖಾನ್ ಅವರನ್ನು ಉಳಿಸಿಕೊಳ್ಳಲು ಗುಜರಾತ್ ಬಯಸಿದೆ. ಕಳೆದ ಋತುವಿನಲ್ಲಿ ಗಿಲ್ ನಾಯಕತ್ವದಲ್ಲಿ ಗುಜರಾತ್ ಪ್ರದರ್ಶನವು ವಿಶೇಷವೇನಾಗಿರಲಿಲ್ಲ. ತಂಡವು ಎಂಟನೇ ಸ್ಥಾನದೊಂದಿಗೆ ಪಂದ್ಯಾವಳಿಯನ್ನು ಕೊನೆಗೊಳಿಸಿತು.

ಆದಾಗ್ಯೂ, ರಶೀದ್ ಖಾನ್ ಕಳೆದ ಎರಡು ಸೀಸನ್ಗಳಲ್ಲಿ ತಂಡದ ದೊಡ್ಡ ಟ್ರಂಪ್ ಕಾರ್ಡ್ ಆಗಿದ್ದಾರೆ. ಮೊದಲ ಸೀಸನ್ಲ್ಲಿ 19 ವಿಕೆಟ್ ಪಡೆದಿದ್ದ ರಶೀದ್, 2023ರಲ್ಲಿ 27 ವಿಕೆಟ್ ಪಡೆದಿದ್ದರು. ತನ್ನ ಸ್ಪಿನ್‌ನ ಮ್ಯಾಜಿಕ್ ಮೂಲಕ ರಶೀದ್ ಗುಜರಾತ್‌ಗೆ ಅನೇಕ ಪಂದ್ಯಗಳಲ್ಲಿ ಸ್ಮರಣೀಯ ಗೆಲುವು ತಂದುಕೊಡುವಲ್ಲಿ ಬ್ಯಾಟಿಂಗ್ನಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.

ಇನ್ನು ದೇಶೀ ಸ್ಟಾರ್ ಸಾಯಿ ಸುದರ್ಶನ್ ಕಳೆದ ಸೀಸನ್ನಲ್ಲಿ ಗುಜರಾತ್ ಪರ ಅದ್ಭುತ ಪ್ರದರ್ಶನ ನೀಡಿದ್ದರು. ಮತ್ತು ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. ಹೀಗಾಗಿ ಅವರು ತಂಡದಲ್ಲಿ ಉಳಿಯುವುದು ಖಚಿತವಾಗಿದೆ. ಇವರಲ್ಲದೆ ತಮ್ಮ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ಶಾರುಖ್ ಖಾನ್ ಜೊತೆಗೆ ರಾಹುಲ್ ತೆವಾಟಿಯಾ ಕೂಡ ತಂಡದಲ್ಲಿ ಉಳಿಯುವ ಸಾಧ್ಯತೆಗಳಿವೆ.

ರಾಹುಲ್ ಗುಜರಾತ್ ತಂಡದ ಅತಿದೊಡ್ಡ ಮ್ಯಾಚ್ ಫಿನಿಶರ್ ಆಗಿದ್ದಾರೆ. ತೆವಾಟಿಯಾ ಕೊನೆಯ ಓವರ್‌ಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ಗುಜರಾತ್‌ಗೆ ಅನೇಕ ಪಂದ್ಯಗಳನ್ನು ಏಕಾಂಗಿಯಾಗಿ ಗೆಲ್ಲಿಸಿಕೊಟ್ಟಿದ್ದಾರೆ. ಬ್ಯಾಟ್ ಮಾತ್ರವಲ್ಲದೆ ತನ್ನ ಸ್ಪಿನ್ ಮೂಲಕವು ತಂಡಕ್ಕೆ ನೆರವಾಗುವ ಕೌಶಲ್ಯ ತೆವಾಟಿಯಾಗೆ ಗೊತ್ತಿದೆ.



















