- Kannada News Photo gallery Cricket photos Happy Birthday Sachin Tendulkar: Sachin's Centuries Against Each Team
Sachin Tendulkar: ಸಚಿನ್ ಯಾವ ತಂಡದ ವಿರುದ್ಧ ಎಷ್ಟು ಶತಕ ಬಾರಿಸಿದ್ದರು? ಇಲ್ಲಿದೆ ಮಾಹಿತಿ
Happy Birthday Sachin Tendulkar: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಏಪ್ರಿಲ್ 24, 1973 ರಲ್ಲಿ ಮುಂಬೈನಲ್ಲಿ ಜನಿಸಿದ ಸಚಿನ್ ಟೀಮ್ ಇಂಡಿಯಾ ಪರ ಬರೋಬ್ಬರಿ 24 ವರ್ಷಗಳ ಕಾಲ ಆಡಿದ್ದರು ಎಂದರೆ ನಂಬಲೇಬೇಕು. ಅಂದರೆ ತಮ್ಮ ಜೀವನದ ಅರ್ಧಭಾಗವನ್ನು ಕ್ರಿಕೆಟ್ ದೇವರು ಭಾರತ ತಂಡಕ್ಕಾಗಿ ಮೀಸಲಿಟ್ಟಿದ್ದಾರೆ. ಈ ವೇಳೆ ಒಟ್ಟು 100 ಶತಕಗಳನ್ನು ಸಹ ಸಿಡಿಸಿದ್ದಾರೆ. ಈ ಶತಕಗಳು ಯಾವ ತಂಡಗಳ ಪರ ಮೂಡಿಬಂದಿದ್ದವು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...
Updated on:Apr 24, 2024 | 8:30 AM

Sachin Tendulkar: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿ ಹಲವು ವಿಶ್ವ ದಾಖಲೆಗಳಿವೆ. ಅವುಗಳಲ್ಲಿ ನೂರು ಶತಕಗಳ ಸಾಧನೆ ಪ್ರಮುಖವಾದವು. ಏಕೆಂದರೆ ತೆಂಡೂಲ್ಕರ್ ಅವರನ್ನು ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ನೂರು ಶತಕಗಳನ್ನು ಬಾರಿಸಿಲ್ಲ.

ಇತ್ತ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ನಲ್ಲಿ 49 ಶತಕಗಳು ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 51 ಶತಕಗಳನ್ನು ಬಾರಿಸುವ ಮೂಲಕ ಸೆಂಚುರಿಗಳ ಸರದಾರ ಎನಿಸಿಕೊಂಡಿದ್ದಾರೆ. ಹಾಗಿದ್ರೆ ಸಚಿನ್ ತೆಂಡೂಲ್ಕರ್ ಯಾವ ತಂಡದ ವಿರುದ್ಧ ಎಷ್ಟು ಸೆಂಚುರಿಗಳನ್ನು ಸಿಡಿಸಿದ್ದರು ಎಂಬುದನ್ನು ತಿಳಿಯೋಣ...

1- ಆಸ್ಟ್ರೇಲಿಯಾ: ಸಚಿನ್ ತೆಂಡೂಲ್ಕರ್ ಅತೀ ಹೆಚ್ಚು ಶತಕ ಬಾರಿಸಿದ್ದು ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ ಎಂಬುದು ವಿಶೇಷ. ಆಸೀಸ್ ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಒಟ್ಟು 20 ಶತಕಗಳನ್ನು ಸಿಡಿಸಿದ್ದಾರೆ.

2- ಶ್ರೀಲಂಕಾ: ಲಂಕಾ ವಿರುದ್ಧ ಸಚಿನ್ ತೆಂಡೂಲ್ಕರ್ ಅವರ ಬ್ಯಾಟ್ನಿಂದ ಒಟ್ಟು 17 ಶತಕಗಳು ಮೂಡಿಬಂದಿವೆ.

3- ಸೌತ್ ಆಫ್ರಿಕಾ: ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಅಬ್ಬರಿಸಿರುವ ಸಚಿನ್ ಒಟ್ಟು 12 ಶತಕಗಳನ್ನು ಸಿಡಿಸಿದ್ದಾರೆ.

4- ಇಂಗ್ಲೆಂಡ್: ಆಂಗ್ಲರ ವಿರುದ್ಧ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದ ಸಚಿನ್ ಒಟ್ಟು 9 ಶತಕಗಳನ್ನು ಬಾರಿಸಿದ್ದಾರೆ.

5- ನ್ಯೂಝಿಲೆಂಡ್: ಕಿವೀಸ್ ಪಡೆಯ ವಿರುದ್ಧ ಸಚಿನ್ ಬ್ಯಾಟ್ನಿಂದ ಒಟ್ಟು 9 ಸೆಂಚುರಿಗಳು ಮೂಡಿಬಂದಿವೆ.

6- ಝಿಂಬಾಬ್ವೆ: ಸಚಿನ್ ತೆಂಡೂಲ್ಕರ್ ಝಿಂಬಾಬ್ವೆ ವಿರುದ್ಧ ಒಟ್ಟು 8 ಶತಕಗಳನ್ನು ಬಾರಿಸಿದ್ದಾರೆ.

7- ಪಾಕಿಸ್ತಾನ್: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ವಿರುದ್ಧ ಅಬ್ಬರಿಸುತ್ತಿದ್ದ ಸಚಿನ್ ತೆಂಡೂಲ್ಕರ್ ಒಟ್ಟು 7 ಶತಕ ಬಾರಿಸಿ ಮಿಂಚಿದ್ದಾರೆ.

8- ವೆಸ್ಟ್ ಇಂಡೀಸ್: ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಸಚಿನ್ ಬ್ಯಾಟ್ನಿಂದ ಒಟ್ಟು 7 ಶತಕಗಳು ಮೂಡಿಬಂದಿವೆ.

9- ಬಾಂಗ್ಲಾದೇಶ್: ನೆರೆಯ ಬಾಂಗ್ಲಾದೇಶ್ ವಿರುದ್ಧ ಸಚಿನ್ ತೆಂಡೂಲ್ಕರ್ ಒಟ್ಟು 6 ಶತಕಗಳನ್ನು ಬಾರಿಸಿದ್ದರು.

10- ಕೀನ್ಯಾ: ಸಚಿನ್ ಕೀನ್ಯಾ ತಂಡದ ವಿರುದ್ಧ ಒಟ್ಟು 4 ಸೆಂಚುರಿಗಳನ್ನು ಬಾರಿಸಿದ್ದರು.

11- ನಮೀಬಿಯಾ: ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 1 ಶತಕ ಸಿಡಿಸಿದ್ದರು.
Published On - 8:27 am, Wed, 24 April 24
