Hardik Pandya: ಆಸ್ಟ್ರೇಲಿಯಾ ವಿರುದ್ಧದ ಗೆಲುವಿಗೆ ಯಾರು ಕಾರಣ?: ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಆಡಿದ ಮಾತುಗಳೇನು ಕೇಳಿ

Updated on: Mar 18, 2023 | 8:32 AM

India vs Australia 1st ODI: ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಗೆಲುವಿಗೆ ಕಾರಣರಾದವರನ್ನು ಹಾಡಿಹೊಗಳಿದ್ದಾರೆ.

1 / 8
ಬಾರ್ಡರ್- ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡ ನಂತರ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡೋ- ಆಸೀಸ್ ಪ್ರಥಮ ಏಕದಿನದಲ್ಲಿ ಟೀಮ್ ಇಂಡಿಯ 5 ವಿಕೆಟ್​ಗಳಿಂದ ಗೆದ್ದು ಬೀಗಿತು.

ಬಾರ್ಡರ್- ಗವಾಸ್ಕರ್ ಟ್ರೋಫಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ವಶಪಡಿಸಿಕೊಂಡ ನಂತರ ಇದೀಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೇ ಭಾರತ ಭರ್ಜರಿ ಜಯ ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಇಂಡೋ- ಆಸೀಸ್ ಪ್ರಥಮ ಏಕದಿನದಲ್ಲಿ ಟೀಮ್ ಇಂಡಿಯ 5 ವಿಕೆಟ್​ಗಳಿಂದ ಗೆದ್ದು ಬೀಗಿತು.

2 / 8

ಈ ಗೆಲುವಿನ ಮೂಲಕ ಹಾರ್ದಿಕ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಗೆಲುವಿಗೆ ಕಾರಣರಾದವರನ್ನು ಹಾಡಿಹೊಗಳಿದ್ದಾರೆ.

3 / 8

ಈ ಪಂದ್ಯದಲ್ಲಿ ನಾವು ಎರಡು ಬಾರಿ ಒತ್ತಡಕ್ಕೆ ಸಿಲುಕಿದೆವು. ಈ ಸಂದರ್ಭದಲ್ಲಿ ನಾವು ಮುನ್ನುಗ್ಗದೆ ಸಮಯಕ್ಕಾಗಿ ಕಾದು ಪರಿಸ್ಥಿತಿಯನ್ನು ಉತ್ತಮವಾಗಿ ಅರ್ಥಹಿಸಿದೆವು. ಒಂದು ಸಲ ಲಯಕಂಡುಕೊಂಡರೆ ನಾವು ಟಾಪ್​ನಲ್ಲಿ ಇರುತ್ತೇವೆ. ನಮ್ಮ ತಂಡ ಅದನ್ನು ಮಾಡಿತು ಎಂದು ಹೇಳಿದ್ದಾರೆ.

4 / 8

ನಮ್ಮ ತಂಡದ ಫೀಲ್ಡಿಂಗ್ ಇಂದು ಅದ್ಭುತವಾಗಿತ್ತು. ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಅನೇಕ ಅವಕಾಶಗಳನ್ನು ನಾವು ಮಾಡಿಕೊಟ್ಟೆವು ಅದನ್ನು ಫೀಲ್ಡರ್​ಗಳು ಚೆನ್ನಾಗಿ ಉಪಯೋಗಿಸಿಕೊಂಡಿದ್ದಾರೆ. ಅದರಲ್ಲೂ ರವೀಂದ್ರ ಜಡೇಜಾ ಮತ್ತು ಶುಭ್​ಮನ್ ಗಿಲ್ ಹಿಡಿದ ಕ್ಯಾಚ್ ಅತ್ಯುತ್ತಮವಾಗಿತ್ತು - ಹಾರ್ದಿಕ್ ಪಾಂಡ್ಯ.

5 / 8

ಜಡೇಜಾ ಬಗ್ಗೆ ಮಾತನಾಡುವುದಾದರೆ, ಅವರು ತಮ್ಮ ಘನತೆಗೆ ತಕ್ಕಂತೆ ಆಡಿದ್ದಾರೆ. ಏಕದಿನ ಕ್ರಿಕೆಟ್​ನಿಂದ ವಿರಾಮ ಪಡೆದುಕೊಂಡು ಬಂದು ಅವರು ಪಂದ್ಯವನ್ನು ಉತ್ತಮವಾಗಿ ಫಿನಿಶ್ ಮಾಡಿದರು. ಮುಖ್ಯವಾಗಿ ಕೆಎಲ್ ರಾಹುಲ್​ಗೆ ಅತ್ಯುತ್ತಮ ಸಾಥ್​ ನೀಡಿದರು. ಇವರಿಬ್ಬರ ಜೊತೆಯಾಟ ಭರ್ಜರಿ ಆಗಿತ್ತು. ಇವರಿಬ್ಬರ ಬ್ಯಾಟಿಂಗ್ ನಮಗೆ ಆತ್ಮವಿಶ್ವಾಸ ತುಂಬಿದೆ - ಹಾರ್ದಿಕ್ ಪಾಂಡ್ಯ.

6 / 8

ಇಲ್ಲಿ ತುಂಬಾ ಬಿಸಿಲಿತ್ತು. ಆದರೂ ನಾನು ಬೌಲಿಂಗ್ ಮಾಡುವಾಗ ಎಂಜಾಯ್ ಮಾಡಿದೆ. ಬ್ಯಾಟಿಂಗ್ ಮಾಡುವಾಗ ಕೂಡ ಖುಷಿ ಆಯಿತು. ಇದೊಂದು ನಮಗೆ ಸಿಕ್ಕ ಅತ್ಯುತ್ತಮ ಗೆಲುವು. ತಂಡ ನೀಡಿದ ಪ್ರದರ್ಶನದ ಬಗ್ಗೆ ಹೆಮ್ಮೆ ಇದೆ ಎಂಬುದು ಹಾರ್ದಿಕ್ ಪಾಂಡ್ಯ ಮಾತು.

7 / 8

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 35.4 ಓವರ್​​ಗಳಲ್ಲಿ ಕೇವಲ 188 ರನ್​ಗೆ ಆಲೌಟ್ ಆಯಿತು. ಮಿಚೆಲ್ ಮಾರ್ಶ್ 65 ಎಸೆತಗಳಲ್ಲಿ 81 ರನ್ ಸಿಡಿಸಿದ್ದು ಬಿಟ್ಟರೆ ಉಳಿದವರು ವೈಫಲ್ಯ ಅನುಭವಿಸಿದರು. ಭಾರತ ಪರ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ 3 ವಿಕೆಟ್ ಪಡೆದರೆ ಜಡೇಜಾ 2 ವಿಕೆಟ್ ಕಿತ್ತರು.

8 / 8

ಸುಲಭ ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ ನಂತರ ಕೆಎಲ್ ರಾಹುಲ್ (ಅಜೇಯ 75) ಹಾಗೂ ರವೀಂದ್ರ ಜಡೇಜಾ (ಅಜೇಯ 45) ಅವರ ಶತಕದ ಜೊತೆಯಾಟದ ನೆರವಿನಿಂದ 39.5 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್ ಬಾರಿಸಿ 5 ವಿಕೆಟ್​ಗಳ ಜಯ ಸಾಧಿಸಿತು.

Loading...
Unable to load recommendations.
Follow Us