
ಇನ್ನೊಂದು ವಾರದಲ್ಲಿ ದೇಶೀಯ ಕ್ರಿಕೆಟ್ನ ಪ್ರಮುಖ ಟಿ20 ಟೂರ್ನಿಯಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಆರಂಭವಾಗಲಿದೆ. ಈಗಾಗಲೇ ಟೂರ್ನಿಗಾಗಿ ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿವೆ. ಇದರ ನಡುವೆ ಬರೋಡಾ ತಂಡ ತನ್ನ ಆಟಗಾರರ ಪಟ್ಟಿಯನ್ನು ಪ್ರಕಟಿಸಿದ್ದು, ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ತಂಡದಲ್ಲಿ ಸ್ಥಾನ ನೀಡಿಲ್ಲ. ಹೀಗಾಗಿ ಹಾರ್ದಿಕ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುವುದು ತಡವಾಗುವ ಸಾಧ್ಯತೆಯಿದೆ(PC-PTI).
33 ವರ್ಷದ ಹಾರ್ದಿಕ್ ಪಾಂಡ್ಯ ಸದ್ಯ ಗಾಯದಿಂದ ಬಳಲುತ್ತಿದ್ದು ಚೇತರಿಕೆಯ ಹಂತದಲ್ಲಿದ್ದಾರೆ. 2026ರ ಐಪಿಎಲ್ ಬಳಿಕ ಹಾರ್ದಿಕ್ ಯಾವುದೇ ಪಂದ್ಯದಲ್ಲಿ ಆಡಿಲ್ಲ. ಗಾಯದ ಸಮಸ್ಯೆಯಿಂದಾಗಿ ಹಲವು ಪ್ರಮುಖ ಅಂತರರಾಷ್ಟ್ರೀಯ ಪಂದ್ಯಗಳನ್ನೂ ಅವರು ತಪ್ಪಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಹಾರ್ದಿಕ್ ಅಲಭ್ಯರಾಗಿದ್ದಾರೆ(PC-PTI).
ಸೈಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ಪ್ರಕಟಿಸಿರುವ ಬರೋಡಾ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಕಾಣಿಸಿಕೊಂಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಸಹೋದರ ಕೃನಾಲ್ ಪಾಂಡ್ಯ ತಂಡದ ನಾಯಕತ್ವ ಮುಂದುವರಿಸಲಿದ್ದಾರೆ. 15 ಆಟಗಾರರ ಈ ತಂಡದಲ್ಲಿ ಜಿತೇಶ್ ಶರ್ಮಾ, ದೀಪಕ್ ಹೂಡಾ ಮತ್ತು ರಸಿಕ್ ಸಲಾಮ್ ಅವರಂತಹ ಪ್ರಮುಖ ಆಟಗಾರರಿಗೂ ಅವಕಾಶ ನೀಡಲಾಗಿದೆ(PC-PTI).
ಹಾರ್ದಿಕ್ ಪಾಂಡ್ಯ ಕೊನೆಯ ಬಾರಿಗೆ ಈ ವರ್ಷದ ಮಾರ್ಚ್ನಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನಾಡಿದ್ದರು. ನ್ಯೂಜಿಲೆಂಡ್ ವಿರುದ್ಧ ನಡೆದ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯವೇ ಅವರ ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ(PC-PTI).
ಕಳೆದ ತಿಂಗಳು ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ತವರಿನ ಏಕದಿನ ಸರಣಿಗಾಗಿ ಪ್ರಕಟಿಸಿದ್ದ ಭಾರತ ಎ ತಂಡದಲ್ಲೂ ಹಾರ್ದಿಕ್ಗೆ ಸ್ಥಾನ ನೀಡಲಾಗಿತ್ತು. ಆದರೆ ಮತ್ತೆ ಗಾಯ ಕಾಣಿಸಿಕೊಂಡಿದ್ದರಿಂದ ಸರಣಿಯಿಂದ ಹಿಂದೆ ಸರಿದಿದ್ದರು. 2026ರ ಐಪಿಎಲ್ ಬಳಿಕ ಅವರು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ(PC-PTI).
Published On - 6:57 pm, Sat, 7 November 26