ದಾಖಲೆಯ ಸರದಾರನನ್ನು ಕೂರಿಸಿ ಹರ್ಷಿತ್ ರಾಣಾರನ್ನು ಕಣಕ್ಕಿಳಿಸಿದ ಗಂಭೀರ್..!

Updated on: Oct 30, 2025 | 9:57 AM

India vs Australia: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಆದರೆ ಈ ಪಂದ್ಯಕ್ಕಾಗಿ ಯುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಅದರಲ್ಲೂ ಹರ್ಷಿತ್ ರಾಣಾ ಅವರಿಗೆ ಅವಕಾಶ ನೀಡಿರುವ ಬಗ್ಗೆ ಪ್ರಶ್ನೆಗಳೆದ್ದಿವೆ.

1 / 5
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪರ ಹರ್ಷಿತ್ ರಾಣಾ (Harshit Rana) ಕಣಕ್ಕಿಳಿದಿದ್ದರು. ಅದು ಕೂಡ ಜಸ್​ಪ್ರೀತ್ ಬುಮ್ರಾ ಜೊತೆ ಎರಡನೇ ಪ್ರಮುಖ ವೇಗಿಯಾಗಿ ಎಂಬುದು ವಿಶೇಷ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗಿದೆ. ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಪರ ಹರ್ಷಿತ್ ರಾಣಾ (Harshit Rana) ಕಣಕ್ಕಿಳಿದಿದ್ದರು. ಅದು ಕೂಡ ಜಸ್​ಪ್ರೀತ್ ಬುಮ್ರಾ ಜೊತೆ ಎರಡನೇ ಪ್ರಮುಖ ವೇಗಿಯಾಗಿ ಎಂಬುದು ವಿಶೇಷ.

2 / 5

ಇತ್ತ ಹರ್ಷಿತ್ ರಾಣಾಗೆ ಚಾನ್ಸ್ ನೀಡಿದ್ದರಿಂದ ಅವಕಾಶ ವಂಚಿತರಾಗಿದ್ದು ಅರ್ಷದೀಪ್ ಸಿಂಗ್. ವಿಶೇಷ ಎಂದರೆ ಅರ್ಷದೀಪ್ ಟೀಮ್ ಇಂಡಿಯಾ ಕಂಡಂತಹ ಅತ್ಯಂತ ಯಶಸ್ವಿ ವೇಗಿ. ಅಂದರೆ ಭಾರತದ ಪರ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ವಿಕೆಟ್ ಪಡೆದ ದಾಖಲೆ ಅರ್ಷದೀಪ್ ಸಿಂಗ್ ಹೆಸರಿನಲ್ಲಿದೆ.

3 / 5

ಟೀಮ್ ಇಂಡಿಯಾ ಪರ ಕೇವಲ 65 ಟಿ20 ಪಂದ್ಯಗಳನ್ನಾಡಿರುವ ಅರ್ಷದೀಪ್ ಸಿಂಗ್ 1358 ಎಸೆತಗಳಲ್ಲಿ 101 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್​ನಲ್ಲಿ ಭಾರತದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಅರ್ಷದೀಪ್ ಸಿಂಗ್ ಹೊರತಾಗಿ ಭಾರತದ ಯಾವುದೇ ಬೌಲರ್ ಟಿ20 ಕ್ರಿಕೆಟ್​ನಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿಲ್ಲ.

4 / 5

ಇದಾಗ್ಯೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್​ಗೆ ಅವಕಾಶ ಸಿಕ್ಕಿರಲಿಲ್ಲ. ಬದಲಾಗಿ 4 ಮ್ಯಾಚ್​ಗಳಿಂದ ಒಟ್ಟು 5 ವಿಕೆಟ್​ಗಳನ್ನು ಮಾತ್ರ ಕಬಳಿಸಿರುವ ಹರ್ಷಿತ್ ರಾಣಾ ಅವರನ್ನು ಕಣಕ್ಕಿಳಿಸಲಾಗಿತ್ತು. ಟೀಮ್ ಇಂಡಿಯಾ ಕೋಚ್​ನ ಈ ನಿರ್ಧಾರವು ಇದೀಗ ಚರ್ಚಗೆ ಗ್ರಾಸವಾಗಿದೆ.

5 / 5

ಇದಕ್ಕೂ ಮುನ್ನ ಮೊಹಮ್ಮದ್ ಶಮಿ ಬದಲಿಗೆ ಗೌತಮ್ ಗಂಭೀರ್ ಹರ್ಷಿತ್ ರಾಣಾಗೆ ಆದ್ಯತೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಯಶಸ್ವಿ ವೇಗಿಯನ್ನು ಬೆಂಚ್​ನಲ್ಲಿ ಕೂರಿಸಿ ಹರ್ಷಿತ್ ರಾಣಾಗೆ ಚಾನ್ಸ್ ನೀಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

Loading...
Unable to load recommendations.
Follow Us