AUS vs BAN: ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ತ್ರಿಶತಕ ಬಾರಿಸುವ ಸನಿಹದಲ್ಲಿ ಜೋಶ್ ಹೇಜಲ್​ವುಡ್

Updated on: Aug 10, 2026 | 8:16 PM

Australia vs Bangladesh Test: ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ಟೆಸ್ಟ್ ಸರಣಿ ಆಗಸ್ಟ್ 13ಕ್ಕೆ ಶುರುವಾಗಲಿದೆ. ಈ ಸರಣಿಯಲ್ಲಿ ಆಸೀಸ್ ವೇಗಿ ಜೋಶ್ ಹೇಜಲ್‌ವುಡ್ 300 ಟೆಸ್ಟ್ ವಿಕೆಟ್‌ಗಳ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ. ಮಿಚೆಲ್ ಸ್ಟಾರ್ಕ್ ಸಹ ತವರು ನೆಲದಲ್ಲಿ 400 ವಿಕೆಟ್‌ಗಳನ್ನು ಪೂರೈಸುವ ಅವಕಾಶವಿದೆ. ಇದು ಇಬ್ಬರು ಪ್ರಮುಖ ಬೌಲರ್‌ಗಳ ಐತಿಹಾಸಿಕ ಸಾಧನೆಗಳಿಗೆ ವೇದಿಕೆಯಾಗಲಿದೆ.

1 / 5
ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 13 ರಂದು ಆರಂಭವಾಗಲಿದೆ. ಈ ಸರಣಿಗೆ ಆಸ್ಟ್ರೇಲಿಯಾ ಆತಿಥ್ಯವಹಿಸುತ್ತಿದೆ. ಡಾರ್ವಿನ್‌ನ ಮರ್ರಾರಾ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆಸೀಸ್ ಅನುಭವಿ ವೇಗಿ ಜೋಶ್ ಹೇಜಲ್‌ವುಡ್ ಟೆಸ್ಟ್ ಕ್ರಿಕೆಟ್​ನಲ್ಲಿ ವಿಶೇಷ ಮೈಲಿಗಲ್ಲು ಸಾಧಿಸುವ ಸನಿಹದಲ್ಲಿದ್ದಾರೆ(PC-PTI).

2 / 5
ಜೋಶ್ ಹೇಜಲ್‌ವುಡ್ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸುವ ಸನಿಹದಲ್ಲಿದ್ದು, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಅವರು 5 ವಿಕೆಟ್‌ಗಳನ್ನು ಪಡೆದರೆ 300 ವಿಕೆಟ್‌ಗಳನ್ನು ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ 42 ನೇ ಆಟಗಾರ ಮತ್ತು ಒಂಬತ್ತನೇ ಆಸ್ಟ್ರೇಲಿಯಾದ ಆಟಗಾರನಾಗಲಿದ್ದಾರೆ(PC-PTI).

3 / 5
ಹೇಜಲ್‌ವುಡ್ ಆಸ್ಟ್ರೇಲಿಯಾದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದು ಇದುವರೆಗೆ ಆಡಿರುವ 76 ಟೆಸ್ಟ್ ಪಂದ್ಯಗಳ 143 ಇನ್ನಿಂಗ್ಸ್‌ಗಳಲ್ಲಿ 24.21 ಸರಾಸರಿಯಲ್ಲಿ 295 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ 13 ಬಾರಿ 5 ವಿಕೆಟ್‌ಗಳನ್ನು ಪಡೆದ ಸಾಧನೆಯೂ ಸೇರಿದೆ(PC-PTI).

4 / 5
ಆಸ್ಟ್ರೇಲಿಯಾ ಪರ ಇಲ್ಲಿಯವರೆಗೆ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳಲ್ಲಿ ಶೇನ್ ವಾರ್ನ್ (708), ನಾಥನ್ ಲಿಯಾನ್ (567), ಗ್ಲೆನ್ ಮೆಕ್‌ಗ್ರಾತ್ (563), ಮಿಚೆಲ್ ಸ್ಟಾರ್ಕ್ (433), ಡೆನ್ನಿಸ್ ಲಿಲ್ಲಿ (355), ಪ್ಯಾಟ್ ಕಮ್ಮಿನ್ಸ್ (315), ಮಿಚೆಲ್ ಜಾನ್ಸನ್ (313), ಮತ್ತು ಬ್ರೆಟ್ ಲೀ (310) ಸೇರಿದ್ದಾರೆ. ಹೇಜಲ್‌ವುಡ್ ಈಗ ಈ ವಿಶೇಷ ಕ್ಲಬ್‌ಗೆ ಸೇರುವ ಹತ್ತಿರದಲ್ಲಿದ್ದಾರೆ(PC-PTI).

5 / 5
ಹೇಜಲ್‌ವುಡ್ ಜೊತೆಗೆ, ಮಿಚೆಲ್ ಸ್ಟಾರ್ಕ್ ಕೂಡ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇತಿಹಾಸ ನಿರ್ಮಿಸುವ ಹತ್ತಿರದಲ್ಲಿದ್ದಾರೆ. ಸ್ಟಾರ್ಕ್ ಇನ್ನೂ ಐದು ವಿಕೆಟ್‌ಗಳನ್ನು ಪಡೆದರೆ, ತವರು ನೆಲದಲ್ಲಿ 400 ವಿಕೆಟ್‌ಗಳನ್ನು ತಲುಪಿದ ಮೂರನೇ ಆಸ್ಟ್ರೇಲಿಯಾದ ಬೌಲರ್ ಆಗುತ್ತಾರೆ. ಇದಲ್ಲದೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಕಪಿಲ್ ದೇವ್ ಮತ್ತು ಡೇಲ್ ಸ್ಟೇನ್ ಅವರನ್ನು ಮೀರಿಸಲು ಸ್ಟಾರ್ಕ್‌ಗೆ ಉತ್ತಮ ಅವಕಾಶವಿದೆ(PC-PTI).

Loading...
Unable to load recommendations.
Follow Us