- Kannada News Photo gallery Cricket photos Highest ICC rating points for a T20I batter Dawid Malan Retirement
Dawid Malan: ವಿಶ್ವ ದಾಖಲೆಯೊಂದಿಗೆ ವಿದಾಯ ಹೇಳಿದ ಡೇವಿಡ್ ಮಲಾನ್
Dawid Malan Retirement: ಡೇವಿಡ್ ಮಲಾನ್ ಇಂಗ್ಲೆಂಡ್ ಪರ ಆಡಿದ್ದು ಕೇವಲ 62 ಟಿ20 ಪಂದ್ಯಗಳನ್ನು ಮಾತ್ರ. ಈ ವೇಳೆ ಕೇವಲ 24 ಇನಿಂಗ್ಸ್ಗಳ ಮೂಲಕ 1000 ರನ್ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ. ಅಷ್ಟೇ ಅಲ್ಲದೆ ಈ ಅವಧಿಯೊಳಗೆ ಐಸಿಸಿ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಅತ್ಯಧಿಕ ರೇಟಿಂಗ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
Updated on: Aug 29, 2024 | 8:54 AM

ಇಂಗ್ಲೆಂಡ್ ತಂಡದ ಎಡಗೈ ದಾಂಡಿಗ ಡೇವಿಡ್ ಮಲಾನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. 2017 ರಲ್ಲಿ ಇಂಟರ್ನ್ಯಾಷನಲ್ ಕೆರಿಯರ್ ಆರಂಭಿಸಿದ್ದ ಮಲಾನ್ ಇಂಗ್ಲೆಂಡ್ ಪರ ಕೆಲವೇ ಕೆಲವು ಪಂದ್ಯಗಳನ್ನಾಡಿದ್ದರು. ಆದರೆ ಈ ಪಂದ್ಯಗಳ ಮೂಲಕ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದು ವಿಶೇಷ.

ಅಂದರೆ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರೇಟಿಂಗ್ ಪಡೆದ ಬ್ಯಾಟರ್ ಎಂಬ ವಿಶ್ವ ದಾಖಲೆ ಡೇವಿಡ್ ಮಲಾನ್ ಹೆಸರಿನಲ್ಲಿದೆ. ಮಲಾನ್ ಐಸಿಸಿ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ 915 ರೇಟಿಂಗ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

2020 ರಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಡೇವಿಡ್ ಮಲಾನ್ ಐಸಿಸಿ ರ್ಯಾಂಕಿಂಗ್ನಲ್ಲಿ ಒಟ್ಟು 915 ಅಂಕಗಳನ್ನು ಪಡೆದಿದ್ದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರೇಟಿಂಗ್ ಪಡೆದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆ ಈಗಲೂ ಡೇವಿಡ್ ಮಲಾನ್ ಹೆಸರಿನಲ್ಲಿರುವುದು ವಿಶೇಷ.

ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಟೀಮ್ ಇಂಡಿಯಾದ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್. 2023 ರಲ್ಲಿ ಸೂರ್ಯ ಐಸಿಸಿ ರ್ಯಾಂಕಿಂಗ್ನಲ್ಲಿ ಒಟ್ಟು 910 ಅಂಕಗಳನ್ನು ಪಡೆದರೂ ಡೇವಿಡ್ ಮಲಾನ್ ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ.

ಇನ್ನು ಆಸ್ಟ್ರೇಲಿಯಾದ ಆರೋನ್ ಫಿಂಚ್ 2018 ರಲ್ಲಿ ಒಟ್ಟು 900 ಅಂಕಗಳನ್ನು ಪಡೆಯುವ ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 900 ರೇಟಿಂಗ್ ಪಡೆದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದರು. ಇದಾದ ಬಳಿಕ ಡೇವಿಡ್ ಮಲಾನ್ ಹಾಗೂ ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ್ದರು.

2014 ರಲ್ಲಿ ವಿರಾಟ್ ಕೊಹ್ಲಿ ಐಸಿಸಿ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ 897 ಅಂಕಗಳನ್ನು ಪಡೆದಿದ್ದರು. ಆದರೆ ಆ ಬಳಿಕ ಅವರಿಗೆ ಈ ಸಾಧನೆಯನ್ನು ಪುನರಾವರ್ತಿಸಲು ಸಾಧ್ಯವಾಗಿಲ್ಲ. ಅಲ್ಲದೆ ಅತ್ಯಧಿಕ ರೇಟಿಂಗ್ ಪಡೆದ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ.

ಇನ್ನು ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ 2019 ರಲ್ಲಿ ಐಸಿಸಿ ಟಿ20 ಬ್ಯಾಟರ್ಗಳ ಶ್ರೇಯಾಂಕ ಪಟ್ಟಿಯಲ್ಲಿ 896 ರೇಟಿಂಗ್ ಪಡೆದಿದ್ದರು. ಈ ಮೂಲಕ ಐಸಿಸಿ ಟಿ20 ರ್ಯಾಂಕಿಂಗ್ನಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿಶ್ವದ 5ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.




