ICC Men’s Player of the Month: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರತಿ ತಿಂಗಳು ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ಆಟಗಾರರಲ್ಲಿ ಯಾರು ಉತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ಅಭಿಮಾನಿಗಳು ನಿರ್ಧರಿಸುತ್ತಾರೆ. ಅಂದರೆ ಐಸಿಸಿ ಪ್ರಕಟಿಸಿರುವ ನಾಮನಿರ್ದೇಶಿತ ಆಟಗಾರರಲ್ಲಿ ಯಾರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಎಂಬುದಕ್ಕೆ ವೋಟಿಂಗ್ ನಡೆಯಲಿದ್ದು, ಈ ವೇಳೆ ಅತೀ ಹೆಚ್ಚು ವೋಟ್ ಪಡೆದ ಆಟಗಾರನನ್ನು ಪ್ಲೇಯರ್ ಆಫ್ ದಿ ಮಂತ್ ಎಂದು ಘೋಷಿಸಲಾಗುತ್ತದೆ.