ICC Rankings: ಐಸಿಸಿ ನೂತನ ರ್‍ಯಾಂಕಿಂಗ್​ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1..!

Edited By:

Updated on: Mar 01, 2023 | 8:30 PM

ICC Rankings: ವಿಶೇಷ ಎಂದರೆ ಅಶ್ವಿನ್ ಅಲ್ಲದೆ ಇನ್ನೂ ಮೂವರು ಆಟಗಾರರು ಐಸಿಸಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರೆಂದರೆ...

1 / 7
ಐಸಿಸಿ ನೂತನ ಟೆಸ್ಟ್ ರ್‍ಯಾಂಕಿಂಗ್‌ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟೆಸ್ಟ್ ಬೌಲರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನ ಅಲಂಕರಿಸಿದ್ದಾರೆ.

2 / 7
ಕಳೆದ ಬಾರಿ ದ್ವಿತೀಯ ಸ್ಥಾನದಲ್ಲಿದ್ದ ಅಶ್ವಿನ್, ಈ ಬಾರಿ ಇಂಗ್ಲೆಂಡ್ ವೇಗಿ ಜೇಮ್ಸ್ ಅ್ಯಂಡರ್ಸನ್ (849 ಪಾಯಿಂಟ್ಸ್) ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಒಟ್ಟು 864 ಪಾಯಿಂಟ್​ಗಳೊಂದಿಗೆ ನಂಬರ್ 1 ಟೆಸ್ಟ್​ ಬೌಲರ್ ಎನಿಸಿಕೊಂಡಿದ್ದಾರೆ.

3 / 7
ವಿಶೇಷ ಎಂದರೆ ಅಶ್ವಿನ್ ಅಲ್ಲದೆ ಇನ್ನೂ ಮೂವರು ಆಟಗಾರರು ಐಸಿಸಿ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರೆಂದರೆ...

4 / 7
1- ರವೀಂದ್ರ ಜಡೇಜಾ: ಐಸಿಸಿ ಟೆಸ್ಟ್ ಆಲ್​ರೌಂಡರ್​ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 460 ಅಂಕಗಳನ್ನು ಹೊಂದಿರುವ ಜಡ್ಡು ಪ್ರಸ್ತುತ ನಂಬರ್ 1 ಟೆಸ್ಟ್ ಆಲ್​ರೌಂಡರ್ ಎನಿಸಿಕೊಂಡಿದ್ದಾರೆ.

5 / 7
2- ಮೊಹಮ್ಮದ್ ಸಿರಾಜ್: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಏಕದಿನ ಬೌಲರ್​ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಒಟ್ಟು 729 ಅಂಕಗಳನ್ನು ಸಂಪಾದಿಸುವ ಮೂಲಕ ಸಿರಾಜ್ ಕಳೆದೆರಡು ವಾರಗಳಿಂದ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

6 / 7
3- ಸೂರ್ಯಕುಮಾರ್ ಯಾದವ್: ಟೀಮ್ ಇಂಡಿಯಾದ ಹೊಡಿಬಡಿ ದಾಂಡಿಗ ಸೂರ್ಯಕುಮಾರ್ ಯಾದವ್ ಟಿ20 ಬ್ಯಾಟರ್​ಗಳ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ 1​ ಸ್ಥಾನ ಅಲಂಕರಿಸಿದ್ದಾರೆ. ಕಳೆದೊಂದು ತಿಂಗಳಿಂದ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿದ್ದು, ಒಟ್ಟು 906 ಅಂಕಗಳನ್ನು ಹೊಂದಿದ್ದಾರೆ.

7 / 7
4- ರವಿಚಂದ್ರನ್ ಅಶ್ವಿನ್: ಇದೀಗ ಟೆಸ್ಟ್ ಬೌಲರ್​ಗಳ ರ್‍ಯಾಂಕಿಂಗ್‌ನಲ್ಲಿ ರವಿಚಂದ್ರನ್ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ. ಈ ಮೂಲಕ ಒಂದೇ ಸಮಯದಲ್ಲಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿರುವುದು ವಿಶೇಷ.