- Kannada News Photo gallery Cricket photos ICC Test All Rounder Rankings: Jadeja climbs to World No 1
ICC Test Rankings: ಟೆಸ್ಟ್ ಆಲ್ರೌಂಡರ್ ರ‍್ಯಾಂಕಿಂಗ್ ಪ್ರಕಟ: ಟಾಪ್ 10 ನಲ್ಲಿ ಮೂವರು ಭಾರತೀಯರು
ICC Test All Rounder Rankings: ಈ ಇಬ್ಬರು ಅನುಭವಿ ಆಲ್ರೌಂಡರ್ಗಳಿಗೆ ಸಾಥ್ ನೀಡಿರುವ ಅಕ್ಷರ್ ಪಟೇಲ್ ಟಾಪ್-5 ನಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ನೂತನ ಐಸಿಸಿ ಟೆಸ್ಟ್ ಆಲ್ರೌಂಡರ್ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ.
Updated on:Feb 22, 2023 | 6:08 PM

ICC Test All Rounder Rankings: ಐಸಿಸಿ ನೂತನ ಟೆಸ್ಟ್ ಆಲ್ರೌಂಡರ್ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸಿದೆ. ಈ ಟಾಪ್ 10 ಪಟ್ಟಿಯಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರರು ಇರುವುದು ವಿಶೇಷ.

ಅದರಲ್ಲೂ ನಂಬರ್ 1 ಸ್ಥಾನ ಅಲಂಕರಿಸಿರುವುದು ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ. ಹಾಗೆಯೇ ದ್ವಿತೀಯ ಸ್ಥಾನದಲ್ಲೂ ಭಾರತೀಯ ಆಟಗಾರನೇ ಇರುವುದು ಮತ್ತೊಂದು ವಿಶೇಷ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅತ್ಯಾದ್ಭುತ ಪ್ರದರ್ಶನ ನೀಡಿರುವ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಶ್ರೇಯಾಂಕ ಪಟ್ಟಿಯಲ್ಲಿ ಮೇಲೇರಿದ್ದಾರೆ. ಹಾಗೆಯೇ ಈ ಇಬ್ಬರು ಅನುಭವಿ ಆಲ್ರೌಂಡರ್ಗಳಿಗೆ ಸಾಥ್ ನೀಡಿರುವ ಅಕ್ಷರ್ ಪಟೇಲ್ ಟಾಪ್-5 ನಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ನೂತನ ಐಸಿಸಿ ಟೆಸ್ಟ್ ಆಲ್ರೌಂಡರ್ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ.

1- ರವೀಂದ್ರ ಜಡೇಜಾ (ಭಾರತ)- 460 ಅಂಕಗಳು

2- ರವಿಚಂದ್ರನ್ ಅಶ್ವಿನ್ (ಭಾರತ)- 376 ಅಂಕಗಳು

3- ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)- 329 ಅಂಕಗಳು

4- ಬೆನ್ ಸ್ಟೋಕ್ಸ್ (ಇಂಗ್ಲೆಂಡ್)- 320 ಅಂಕಗಳು

5- ಅಕ್ಷರ್ ಪಟೇಲ್ (ಭಾರತ)- 283 ಅಂಕಗಳು

6- ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ)- 265 ಅಂಕಗಳು

7- ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್)- 264 ಅಂಕಗಳು

8- ಪ್ಯಾಟ್ ಕಮಿನ್ಸ್ (ಆಸ್ಟ್ರೇಲಿಯಾ)- 228 ಅಂಕಗಳು

9- ಕೈಲ್ ಮೇಯರ್ಸ್ (ವೆಸ್ಟ್ ಇಂಡೀಸ್)- 225 ಅಂಕಗಳು

10- ಜೋ ರೂಟ್ (ಇಂಗ್ಲೆಂಡ್)- 209 ಅಂಕಗಳು
Published On - 4:09 pm, Wed, 22 February 23



















